ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

VI, ಮಹಮ್ಮದನ ಅಧಿನಾಯಕತ್ವದ ಒಳಗುಟ್ಟು ೫೯ ಕಠಿನತೆಯೇ ಆತನಲ್ಲಿಲ್ಲವೆಂದರಿತೂ ನೀನು ಹೀಗೆ ಮಾಡಬಹುದೆ ? ಎಂದ ರಂತೆ. ಅದಕ್ಕೆ ಆ ಮನುಷ್ಯನು, “ ಇದೆಲ್ಲವನ್ನೂ ನಾನು ಬಲ್ಲೆನು. ಆದರೆ ಮಹಮ್ಮದನು ಹೊದೆದ ಬಟ್ಟೆಯನ್ನು ಧರಿಸಿದರೆ ಪವಿತ್ರನಾಗುವೆ ನೆಂಬ ಭಾವನೆಯಿಂದ ನಾನು ಹೀಗೆ ಮಾಡಿದೆನು. ನನ್ನ ಹೆಣಕ್ಕೆ ಕೂಡ ಈ ದುಪ್ಪಟೆಯನ್ನು ಸುತ್ತಿ ಸಮಾಧಿಯಾಗಬೇಕೆಂಬುದೇ ನನ್ನ ಆಸೆ ಎಂದು ಉತ್ತರ ಹೇಳಿದನಂತೆ. ಅರಬ್ಬಿ ದೇಶದಲ್ಲಿ ತೋಟಗಳು ಅತಿ ವಿರಳವಾದುದರಿಂದ ಅವಕ್ಕೆ ವಿಶೇಷ ಬೆಲೆ, ಧನಿಕನೊಬ್ಬನು ಮಹಮ್ಮದನಿಗೆ ಏಳು ತೋಟಗಳನ್ನು ಕೊಟ್ಟನು. ಮಹಮ್ಮದನು ಅವುಗಳನ್ನು ಸ್ವಂತ ಉಪಯೋಗಕ್ಕಿಟ್ಟು ಕೊಳ್ಳದೆ ಅವುಗಳ ವರಮಾನವನ್ನು ಧರ್ಮಾರ್ಥವಾಗಿ ಉಪಯೋ) ಸುವುದಕ್ಕಾಗಿ ಪ್ರತಿ ವರ್ಷವೂ ಅವುಗಳಿಂದ ಬಂದ ಹಣವನ್ನು ಬಡವರಿಗೆ ಹಂಚುತ್ತಿದ್ದನು. ಬಹಳ ಬಡವನಾಗಿದ್ದ ಮಹಮ್ಮದನ ಸ್ನೇಹಿತನೊಬ್ಬನಿಗೆ ಮದುವೆ ಯಾಯಿತು. ನಂತರಿಗೆ ಊಟವಿಡಲು ಅವನ ಮನೆಯಲ್ಲಿ ಗೋಧಿಯ ಹಿಟ್ಟು ಕೂಡ ಇರಲಿಲ್ಲ. ಮಹಮ್ಮದನು ಅಂದಿನ ರಾತ್ರಿಯ ಅಡಿಗೆಗೆ ಕೂಡ ಹಿಟ್ಟನ್ನು ಉಳಿಸಿಕೊಳ್ಳದೆ, ತನ್ನ ಮನೆಯಲ್ಲಿದ್ದ ಒಂದು ಚೀಲದ ಹಿಟ್ಟನ್ನು ಸ್ನೇಹಿತನ ಮನೆಗೆ ಕಳುಹಿಸಿಬಿಟ್ಟನು. ಒಮ್ಮೆ ಅತಿಥಿ ಯೊಬ್ಬನು ಸಂಜೆಯ ವೇಳೆಯಲ್ಲಿ ಮಹಮ್ಮದನ ಮನೆಗೆ ಬಂದನು. ಆಗ ಮೇಕೆಯ ಹಾಲು ಹೊರತು ಮತ್ತೇನೂ ಅವನ ಮನೆಯಲ್ಲಿರಲಿಲ್ಲ. ಆ ಹಾಲನ್ನೂ ಮಹಮ್ಮದನು ಅತಿಥಿಗೇ ಕೊಟ್ಟು, ತಾನು ಹಸಿವಿನಿಂದಲೇ ರಾತ್ರಿಯನ್ನು ಕಳೆದನು. ವ್ಯವಹಾರದಲ್ಲಿ ನಿಷ್ಕಲ್ಮಷವಾದ ಮನಸ್ಸಿನಿಂದ ವರ್ತಿಸಬೇಕಾ ದುದು ಅಧಿನಾಯಕನಲ್ಲಿರಬೇಕಾದ ಸದ್ಗುಣ, ಮಹಮ್ಮದನಲ್ಲಿ ಆ ಗುಣವೂ ವಿಶೇಷವಾಗಿದ್ದಿತು. ಅವನು ಬಹಳ ಉದಾರಿಯಾದುದರಿಂದ, ಅದರ ಫಲಿತಾಂಶವಾಗಿ, ಯಾವಾಗಲೂ ಸಾಲದಲ್ಲಿ ಮುಳುಗಿ ತೇಲು ತಿದ್ದನು ; ಆದರೂ ವ್ಯವಹಾರದ ಔಚಿತ್ಯವನ್ನು ವಿಾರದೆ ನಡೆಯು ತಿದ್ದನು. ಒಮ್ಮೆ, ಮಹಮ್ಮದನು ಒಬ್ಬನಿಂದ ಒಂದು ಒಂಟೆಯನ್ನು