ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

VI, ಮಹಮ್ಮ ದನ ಅಧಿನಾಯಕತ್ವದ ಒಳಗುಟ್ಟು ನಾಯಕನಿಗೆ ಅವಶ್ಯವಾಗಿರಬೇಕಾದ ಮತ್ತೊಂದು ಗುಣವೇ ನೆಂದರೆ, ಜನರಿಗೆ ವಿವೇಕವನ್ನು ಬೋಧಿಸಿ ಒಳ್ಳೆಯ ದಾರಿಗೆ ತರುವ ಸಾಮರ್ಥ್ಯ, ಮಹಮ್ಮದನಲ್ಲಿ ಈ ಗುಣವೂ ರೂಢ ಮಲವಾಗಿ ನೆಲೆ ಗೊಂಡಿದ್ದಿತು. ಯಾರೊಬ್ಬರ ಮನಸ್ಸಿಗೂ ಲೇಶ ಮಾತ್ರವೂ ವ್ಯಥೆ ಯಾಗದಂತೆ ಒಳ್ಳೆಯ ಮಾತಿನಿಂದಲೇ ಮಹಮ್ಮದನು ಅವರನ್ನು ಸನ್ಮಾ ರ್ಗಕ್ಕೆ ತರುತ್ತಿದ್ದನು. ಅವನು ಯಾರೊಡನೆಯ ಬಿರುನುಡಿಗಳ ನ್ಯಾ ಡಿದವನಲ್ಲ. ಅರಬ್ಬಿ ದೇಶದಲ್ಲಿ ಸ್ತ್ರೀಯರೇ ಆಗಲಿ, ಪುರುಷರೇ ಆಗಲಿ ಹೊಳೆಯಲ್ಲಿಯ ಹೋ೦ಡ ದಲ್ಲಿ ಯ ಸ್ನಾನ ಮಾಡುವಾಗ ಲೇಶವೂ ಲಜ್ಜೆಯಿಲ್ಲದೆ ಬೆತ್ತಲೆಯಾಗಿರುತ್ತಿದ್ದರು. ದೇವಸ್ಥಾನದಲ್ಲಿ ಪ್ರದಕ್ಷಿಣೆ ಮಾಡುವಾಗಲೂ ಕೆಲವರು ನಗ್ತಾವಸ್ಥೆಯಲ್ಲಿರುತ್ತಿದ್ದುದು ಆಗಿನ ಪದ್ದತಿ, ಮಹಮ್ಮದನು ಎಲ್ಲರ ಮನಸ್ಸಿಗೂ ನಾಟುವಂತೆ ಬೋಧನೆ ಮಾಡಿ ಈ ಕೆಟ್ಟ ಪದ್ದತಿಯನ್ನು ತಪ್ಪಿಸಿದುದಲ್ಲದೆ, ಇನ್ನೂ ಅನೇಕ ದುರಾಚಾರಗಳನ್ನೂ ತಪ್ಪಿಸಿ ಯಶಸ್ವಿಯಾದನು. ಇತರರ ಮನಸ್ಸನ್ನು ಕರಗಿಸಿ ಅವರನ್ನು ತನ್ನ ವಶವರ್ತಿಗಳನ್ನಾಗಿ ಮಾಡಿಕೊಳ್ಳಲಿಚ್ಛಿಸುವ ಅಧಿನಾಯಕನು ತಾನು ಇತರರಿಗಿಂತ ಹೆಚ್ಚೆಂಬ ಭಾವನೆಯನ್ನಿಟ್ಟುಕೊಂಡಿರಲೇ ಕ ಡ ದು , ಈ ವಿಷಯದಲ್ಲಿಯ ಮಹಮ್ಮದನು ಆದರ್ಶ ಪುರುಷನಾಗಿದ್ದನು. " ನಿಮ್ಮಂತೆಯೇ ನಾನೂ ಸಾಮಾನ್ಯ ಮನುಷ್ಯನು ” ಎಂದು ಆತನು ಖುರಾನಿನಲ್ಲಿ ಹೇಳಿದ್ದಾನೆ. ಮದೀನಾ ನಗರದಲ್ಲಿ ಮಸೀದಿಯನ್ನು ಕಟ್ಟಿದಾಗ, ಮಹಮ್ಮದನು ಇತರ ಕೆಲಸಗಾರರಂತೆಯೇ ತಾನೂ ಗೋಡೆಯ ಕೆಲಸವನ್ನು ಮಾಡಿ ಮೈಗೆ ಕೆಸರು ಹತ್ತಿಸಿಕೊಂಡಿರುತ್ತಿದ್ದನು. ಶಿಷ್ಟರು ಎಷ್ಟು ಬಗೆಯಲ್ಲಿ 'ಪ್ರಾರ್ಥಿಸಿದರೂ ಅವನು ಆ ಕೆಲಸವನ್ನು ಬಿಡುತ್ತಿರಲಿಲ್ಲ. ಒಮ್ಮೆ, ಮಹಮ್ಮದನು ತನ್ನ ಅನುಯಾಯಿಗಳೊಡನೆ ಪ್ರಯಾಣ ಹೊರಟಾಗ, ದಾರಿಯಲ್ಲಿ ಅಡಿಗೆಯಾಗಬೇಕಾಯಿತು. ಒಬ್ಬೊಬ್ಬರು ಒಂದೊಂದು ಕೆಲಸವನ್ನು ವಹಿಸಿಕೊಳ್ಳಲು, ಮಹಮ್ಮದನು ಸೌದೆಯನ್ನೊ ದಗಿಸುವ ಕೆಲಸವನ್ನೊಪ್ಪಿಕೊಂಡನು. ಆದರೆ ಅವನ ಶಿಷ್ಯರು ಅದನ್ನು ನಿಷೇಧಿಸಿ, ಗುರು ಸ್ವರೂಪನಾದ ಆತನು ಅಂತಹ ಕೆಲಸವನ್ನು ಮಾಡ