ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

دے ಪೈಗಂಬರ್ ಮಹಮ್ಮದನು ಕೂಡದೆಂದು ಪ್ರಾರ್ಥಿಸಿದರು. ಅದಕ್ಕೆ ಮಹಮ್ಮದನು, “ ನಾನು ಈ ಕೆಲಸವನ್ನು ಮಾಡಲೇ ಬೇಕು ; ನಿಮಗಿಂತಲೂ ನಾನು ಶ್ರೇಷ್ಠ ನೆಂಬ ಭಾವನೆಯೇ ನನಗಿಲ್ಲ. ಯಾವನು ತನ್ನ ಮಿತ್ರರಿಗಿಂತಲೂ ತಾನು ಶ್ರೇಷ್ಠನೆಂಬ ಅಹಂಕಾರದಿಂದ ಮೆರೆಯುವನೋ ಅಂಥವನ ವಿಷಯದಲ್ಲಿ ಭಗವಂತನು ಎಂದಿಗೂ ಪ್ರಸನ್ನ ನಾಗುವುದಿಲ್ಲ ಎಂದು ಉತ್ತರ ಹೇಳಿದನು. ಬದರ್ ಕದನವು ನಡೆದಾಗ ಮಹಮ್ಮದನ ಸೈನ್ಯದಲ್ಲಿ ಒಂಟೆಗಳು ಕೆಲವು ಮಾತ್ರವೇ ಇದು ವು. ಮರು ಮರು ಮಂದಿಗೆ ಒಂದೊಂದು ಒಂಟೆಯಂತೆ ಅವರು ಸರದಿಯ ಮೇರೆಗೆ ಸವಾರಿ ಮಾಡಿಕೊಂಡು ಪ್ರಯಾಣ ಮಾಡಬೇಕಾಗಿದ್ದಿತು. ಮಹಮ್ಮದನ ಜೊತೆಯಲ್ಲಿದ್ದ ಕೆಲವರು ತಮ್ಮ ತಮ್ಮ ಸರದಿಯನ್ನು ಉಪಯೋಗಿಸಿಕೊಳ್ಳದೆ ಮಹಮ್ಮದನೇ ದಾರಿಯುದ್ದಕ್ಕೂ ಒಂಟೆಯ ಮೇಲೆ ಸವಾರಿ ಮಾಡಬೇಕೆಂದು ಪ್ರಾರ್ಥಿ ಸಿದರು. ಮಹಮ್ಮದನು ಅದಕ್ಕೊಪ್ಪದೆ, “ ನೀವು ನನಗಿಂತಲೂ ಹೆಚ್ಚಾಗಿ ನಡೆಯಲಾರಿರಿ; ಕಾಲು ನೋವು ಎಲ್ಲರಿಗೂ ಒಂದೇ ಎಂದು ಹೇಳಿ ದನು. ಮಹಮ್ಮದನ ಶಿಷ್ಯರು ಅವನನ್ನು ಕುರಿತು ಉತ್ತೇಕ್ಷೆಗಳಿಂದ ತುಂಬಿದ ಸ್ತೋತ್ರಗಳನ್ನು ಮಾಡುತ್ತಿದ್ದರು. ಅದನ್ನು ಕೇಳಿ ಮಹ ಮೃದನು, “ ನನ್ನ ವಿಷಯದಲ್ಲಿ ಹೀಗೆ ಅತಿಶಯೋಕ್ತಿಗಳನ್ನಾಡಬೇಡಿರಿ ; ಕ್ರೈಸ್ತರು ಏಸುವನ್ನು ಹೊಗಳುವಂತೆ ನೀವು ನನ್ನನ್ನು ಹೊಗಳಬೇಡಿರಿ ; ನಾನು ಭಗವಂತನ ಅಡಿಯಾಳಾದ ಮತ ಸ್ಥಾಪಕನೇ ಹೊರತು ಅದ ಕ್ಕಿಂತ ಹೆಚ್ಚಿನವನಲ್ಲ' ಎಂದು ಉತ್ತರ ಹೇಳಿದನಂತೆ. ಮಹಮ್ಮದನ ಶಿಷ್ಯನಾದ ಪಾಳೆಯಗಾರನೊಬ್ಬನು, ' ಜನರೆಲ್ಲರೂ ತಮಗೆ ಇನ್ನು ಮುಂದೆ ದಂಡಪ್ರಣಾಮ ಮಾಡಬೇಕಾದುದು ಯುಕ್ತವೆಂದು ನನಗೆ ತೋರುತ್ತದೆ ಎಂದನಂತೆ. ಮಹಮ್ಮದನು ಅವನನ್ನು ಕುರಿತು, ( ನಾನು ಸತ್ತ ಮೇಲೆ ನನ್ನ ಗೋರಿಯ ಬಳಿಯಲ್ಲಿ ನೀನು ದಂಡಪ್ರಣಾಮ ಮಾಡುವೆಯಾ ?” ಎಂದು ಕೇಳಿದನಂತೆ. ಪಾಳೆಯಗಾರನು, ಇಲ್ಲ ಎನ್ನಲು, ಮಹಮ್ಮದನು, “ ಹಾಗಾದರೆ ನಾನು ಬದುಕಿರುವಾಗ ನನಗೇತಕ್ಕೆ ದಂಡಪುಣಾಮ ಮಾಡಬೇಕು ? ಎಂದನಂತೆ.