ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

VII, ಊಹುದ್ ಕದನ ಬೇಕೆಂದು ಶತ್ರುಗಳು ಸಂಕಲ್ಪ ಮಾಡಿದರು. ಮಹಮ್ಮದನಿಗೆ ಆಗ ವಿಷಮ ಸಂಕಟವೊದಗಿತು. ಏಕೆಂದರೆ, ಅವನ ಸೈನ್ಯವು ಎರಡು ಭಾಗ ವಾಗಿ ಚದರಿಹೋಗಿದ್ದಿತು. ಊಹುದ್ ಗುಡ್ಡದ ಕಡೆಗೆ ಓಡಿ ಹೋದಲ್ಲದೆ ಅವನ ಕಡೆಯವರಿಗೆ ಉಳಿಗಾಲವಿರಲಿಲ್ಲ. ತಾನೊಬ್ಬನೇ ಓಡಿಹೋಗಿ ಪ್ರಾಣವನ್ನುಳಿಸಿಕೊಳ್ಳಲು ಮಹಮ್ಮದನಿಗೆ ಇಷ್ಟವಿರಲಿಲ್ಲ. ದೂರದಲ್ಲಿದ್ದ ತನ್ನ ಸೈನಿಕರನ್ನು ಕೂಗಿದರೆ ತಾನಿರುವ ಸ್ಥಳವು ಗೊತ್ತಾ? ಶತ್ರುಗಳು ಅವನನ್ನು ಕೊಲ್ಲಲು ಅನುಕೂಲಿಸುವಹಾಗಿದ್ದಿತು ; ಆದರೂ ವೈರಮಾಡಿ ಉಚ್ಚಸ್ವರದಲ್ಲಿ, ' ನಾನು ಇಲ್ಲಿದ್ದೇನೆ; ನನ್ನ ಕಡೆಗೆ ಎಲ್ಲರೂ ಓಡಿಬಂದು ಒಟ್ಟಿಗೆ ಸೇರಿರಿ ಎಂದು ಕೂಗಿದನು. ಇದನ್ನು ಕೇಳಿ ತನ್ನ ವರು ಮಾತ್ರವಲ್ಲದೆ ಶತ್ರುಗಳೂ ಅಲ್ಲಿಗೆ ಓಡಿಬಂದರು. ಉಭಯ ಪಕ್ಷದವರಿಗೂ ರಭಸದಿಂದ ಯುದ್ದವೂ ನಡೆದು ಮಹಮ್ಮದ ನಿಗೂ ಬಹಳ ಸೆಟ್ಟುಗಳು ಬಿದ್ದು ರಕ್ತವು ಹರಿಯಿತು. ಅವನ ಸೈನಿಕರು ಅವನ ಸುತ್ತಲೂ ಅಭೇದ್ಯವಾದ ಕೋಟೆಯಂತೆ ಸುತ್ತುಗಟ್ಟಿ ನಿಂತು ಶತ್ರುಗಳೊಡನೆ ಹೋರಾಡುತ್ತ, ಸ್ವಲ್ಪ ಸ್ವಲ್ಪವಾಗಿ ಬೆಟ್ಟದ ಕಡೆಗೆ ಸರಿಯುತ್ತ ಬಂದರು. ಮಹಮ್ಮದನ ಸೈನ್ಯವು ಮತ್ತೆ ಒಟ್ಟಿಗೆ ಸೇರಿ ದುದರಿಂದ ಶತ್ರುಗಳ ಸಂಕಲ್ಪವ್ರ ನೆರವೇರಲಿಲ್ಲ. ಈ ಮಧ್ಯೆ ಮಹ ಮೃದನ ಕಡೆಯವರು ಬೆಟ್ಟದ ಮೇಲಿನಿಂದ ಶತ್ರುಗಳ ಮೇಲೆ ಕಲ್ಲುಗಳನ್ನು ಎಸೆಯತೊಡಗಿದರು. ಕಲ್ಲುಗಳ ಸೆಟ್ಟಿನಿಂದಲೂ ಬಾಣಗಳ ಮಳೆ ಯಿಂದ ಶತ್ರುಗಳು ಶಕ್ತಿಗುಂದಿ ರಣ ಭೂಮಿಯಿಂದ ಹಿಮ್ಮೆಟ್ಟಿದರು. ಮಹಮ್ಮದನು ಆ ಸುಸಮಯವನ್ನು ಪಯೋಗಿಸಿಕೊಂಡು ಮೆದೀನಾ ನಗರಕ್ಕೆ ತನ್ನ ವರೊಡನೆ ಹೊರಟು, ಶತ್ರುಗಳನ್ನು ಬೆನ್ನಟ್ಟಿ ಹೋಗಲು ಒಂದು ಸೈನ್ಯವನ್ನು ಕಳುಹಿಸಿದನು.