ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಕಡಿಮೆಯಾಗಿದ್ದರೂ, ಯುದ್ಯೋ ತಾಹದಲ್ಲಿ ಮಾತ್ರ ಅವನ ಸೈನಿಕರು ಯಾರಿಗೂ ಕಡಿಮೆಯಾಗಿರಲಿಲ್ಲ. ಮುಹಮ್ಮದನು ಕುಶಲನಾದ ಸೈನ್ಯಾ ಧಿಪನೂ ಆಗಿದ್ದನು. ಹಿಂಭಾಗದಿಂದ ಶತ್ರುಗಳು ಬಂದು ಮುತ್ತಲು ಅವಕಾಶವಿಲ್ಲದಂತೆ ಊಹುದ್ ಗುಷ್ಟದ ಬಂಡೆಗಳ ಮುಂದೆ ಸೈನ್ಯವನ್ನು ಸರಿಯಾಗಿ ನಿಲ್ಲಿಸಿ ವ್ಯೂಹ ರಚನೆ ಮಾಡಿ, ಯೋಧರೆಲ್ಲರೂ ಧನುರ್ಬಾಣ ಸಮೇತರಾಗಿ ಅಲ್ಲಿರಬೇಕೆಂದೂ, ಎಂತಹ ದಾರುಣ ಸ್ಥಿತಿ ಬಂದರೂ ಅವರು ಆ ಸ್ಥಳವನ್ನು ಬಿಟ್ಟು ಕದಕೂಡದೆಂದೂ ಮಹಮ್ಮದನು ಅವರೆಲ್ಲ ರಿಗೂ ಕಟ್ಟಾಜ್ಞೆ ಮಾಡಿದನು. ಉಭಯ ಪಕ್ಷದವರೂ ಉತ್ಸಾಹದಿಂದ ಯುದ್ದ ಮಾಡುತ್ತಿರುವ, ಮಹಮ್ಮದೀಯರು ಶತ್ರು ದಳವನ್ನು ಅಪ್ಪಳಿಸಿ ಹೊಡೆದರು. ಅಬೂದು ಜನನೂ ಹಂಜನ ಪ್ರಾಣವನ್ನು ಹುಲ್ಲಿಗೆ ಸಮ ಮಾಡಿ ಹೊಡೆದಾಡಿ ದರು. ಅವರ ಅಸಮಾನವಾದ ಪರಾಕ್ರಮದೆದುರಿಗೆ ಕೊರೈಷ್ ವಂಶದ ವೀರರೆಲ್ಲರೂ ತಳಮಳಗೊಂಡರು. ಅವರ ಮೇಲೈಯನ್ನ ನು ಸರಿಸಿ ಉಳಿದ ಮಹಮ್ಮದೀಯ ಯೋಧರ ಅತುಳ ಪರಾಕ್ರಮದಿಂದ ಕಾದಿದರು. ಸಿದ್ದಿಕ ಗುಲಾಮನೊಬ್ಬನ ಭರ್ಜಿಯ ತಿವಿತಕ್ಕೆ ಸಿಕ್ಕಿ ಹಂಜನು ಮೃತ್ಯುವಿನ ಪಾಲಾದನು. ಇದನ್ನು ಕಂಡು ಮಹಮ್ಮ ದೀಯರು ರೋಷ ಭೀಷಣರಾಗಿ) ರಣ ಮತ್ತತೆಯಿಂದ ಕಾದಿದರು. ಅವರ ಕೈ ಮೇಲಾ ಶತ್ರುಗಳು ಪಕ್ಕಾ ನಗರದ ಕಡೆಗೆ ಓಡತೊಡಗಿದರು. ಆದರೇನು ? ಮಹಮ್ಮದೀಯರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹೋಯಿತು: ಶತ್ರುಗಳು ಪಲಾಯನ ಮಾಡಿದುದನ್ನು ಕಂಡು ವ್ಯೂಹ ದಲ್ಲಿದ್ದ ಐವತ್ತು ಮಂದಿ ಯೋಧರು ಕೊಳ್ಳೆಯ ಹಣದ ಆಸೆಯಿಂದ ತಮ್ಮ ಸ್ಥಳವನ್ನು ಬಿಟ್ಟು ಓಡಿದರು. ಶತ್ರು ಸೈನ್ಯದಲ್ಲಿ ಅಶ್ವಾರೋಹಿಗಳ ನಾಯಕ ನಾದ ಖಾಲಿದ್ದನು ಈ ಸುಸಮಯವನ್ನು ಪ್ರಯೋಗಿಸಿಕೊಂಡು ತನ್ನಲ್ಲಿದ್ದ ರಾಹುತರ ಸೈನ್ಯದೊಡನೆ ನುಗ್ಗಿ ಮಹಮ್ಮದೀಯರ ಮೇಲೆ ಬೀಳಲು, ವ್ಯೂಹದ ಕಟ್ಟು ಸಡಿಲಿ ಅಸ್ತವ್ಯಸ್ತವಾಯಿತು. ತಾಯಿಬೇರನ್ನು ಕಡಿದುಹಾಕಿದರೆ ಮರವು ತಾನಾಗಿಯೇ ಒಣಗಿ 'ಹೋಗುವುದೆಂಬ ಆಲೋಚನೆಯಿಂದ, ಮಹಮ್ಮದನನ್ನು ಕೊಂದುಹಾಕ