ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪ್ರಸ್ತಾವನೆ ಹಿಂದುಗಳೂ ಮಹಮ್ಮದೀಯರೂ ಬಹು ಕಾಲದಿಂದ ಇಂಡಿಯಾ ದೇಶದಲ್ಲಿ ಒಟ್ಟಿಗಿದ್ದರೂ ಅವರಲ್ಲಿ ಐಕಮತ್ಯವು ಅಷ್ಟಾಗಿ ನೆಲೆಗೊಳ್ಳ ದಿರುವುದು ಶೋಚನೀಯವಾದ ವಿಷಯ. ಆದರೂ, ಅನೋನ್ಯವಾಗಿ ಕೇವಲ ಮೈತ್ರಿ ಭಾವದಿಂದ ವರ್ತಿಸುತ್ತಿರುವವರನೇಕರು ಈ ಎರಡು ಪಂಗಡದವರಲ್ಲಿಯೂ ಇಲ್ಲದೆ ಇಲ್ಲ. ಉಳಿದವರಲ್ಲಿ ಅನೇಕರ ಹೃದಯ ಗಳು ವೀಣಾ ನಾದದಂತೆ ಶ್ರುತಿಗೊಂಡು ಸ್ನೇಹದ ಮಧುರ ತಾನಕ್ಕೆ ಇನ್ನೂ ಸಿದ್ದವಾಗಿಲ್ಲ. ಮಹಮ್ಮದೀಯರ ಮತ ಧರ್ಮಗಳ ಸಾರ ವನ್ನು ಹಿಂದುಗಳೂ, ಸನಾತನ ಧರ್ಮದ ಸಾರವನ್ನು ಮಹಮ್ಮದೀ ಯರೂ ಅರಿತುಕೊಳ್ಳದಿರುವುದೇ ಇದಕ್ಕೆ ಮುಖ್ಯ ಕಾರಣವೆನ್ನ ಬಹುದು. ಈ ನ್ಯೂನತೆಯನ್ನು ಪರಿಹರಿಸಿ, ಹಿಂದುಗಳೂ ಮಹಮ್ಮ ದೀಯರೂ ಸೌಹಾರ್ದ ಭಾವದಿಂದಿರುವುದಕ್ಕೆ ಸಾಧಕವಾಗುವಂತೆ ಮಾಡಬೇಕಾದುದು ದೇಶ ವಾತ್ಸಲ್ಯವಿರುವವರೆಲ್ಲರ ಅವಶ್ಯ ಕರ್ತವ್ಯ ವಾಗಿದೆ. ಈ ಗ್ರಂಥವು ಈ ಭಾಗದಲ್ಲಿ, ಅಳಿಲ ಸೇವೆ, ಮಳಲು ಭಕ್ತಿ' ಎಂಬಂತೆ ನಾನು ಮಾಡಿರುವ ಅಲ್ಪ ಪ್ರಯತ್ನವಾಗಿರುವುದು. ಪೈಗಂಬರ ಮಹಮ್ಮದನು ಮತ ಸ್ಥಾಪಕರಾದ ಮಹಾ ಪುರುಷರ ಲೊಬ್ಬನು. ಆ ಮಹನೀಯನಲ್ಲಿ ಪೂಜ್ಯ ಭಾವನೆಯನ್ನಿಟ್ಟು ಯಥಾ ಮತಿಯಾಗಿ ನಾನು ಈ ಗ್ರಂಥವನ್ನು ರಚಿಸಿರುವೆನು. ಕನ್ನಡಿಗರೆಲ್ಲರೂ ಇದನ್ನು ಆದರದಿಂದ ಓದಿ ದೇಶೋದ್ಧಾರಕ್ಕೆ ಸಹಾಯಕರಾಗಲಿ ಎಂಬುದೇ ನನ್ನ ಪ್ರಾರ್ಥನೆ. ಈ ಪ್ರಯತ್ನದಲ್ಲಿ ನನಗೆ ವಿಶೇಷ ಪ್ರೋತ್ಸಾಹವನ್ನಿತ್ತು ಅಮೂಲ್ಯವಾದ ಸಲಹೆಗಳನ್ನು ಕೊಟ್ಟುದಕ್ಕಾ ಗಿಯ, ಗ್ರಂಥವನ್ನು ಆಮೂಲಾಗ್ರವಾಗಿ ಓದಿ ಪರಿಶೋಧಿಸಿದುದ ಕ್ಯಾಗಿಯೂ, ಮುದ್ರಣ ಕಾರ್ಯದಲ್ಲಿ ವಿಶೇಷ ಸಹಾಯಮಾಡಿದುದ ಕಾಗಿಯ ಶ್ರೀಮಾನ್ ಬೆಳ್ಳಾವೆ ವೆಂಕಟನಾರಾಯಣಪ್ಪ, ಎಂ.ಎ. ಅವರಿಗೆ ನಾನು ಬಹಳ ಕೃತಜ್ಞನಾಗಿದ್ದೇನೆ.