________________
VIII, ವಿಜಯೋತ್ಸಾಹ ೭೩ ಸಂಕಲ್ಪದಿಂದ, ಮ ಹ ಮ್ಮ ದ ನು ತಕ್ಕ ಸೈನ್ಯದೊಡನೆ ಮರೆಸಿಗೆ ನಡೆದನು. ಇದನ್ನು ಕೇಳಿ ಹರೀಸನು ಹೆದರಿ ಓಡಿಹೋದನು. ಆದರೂ, ಮುರೈನೀ ನಗರದ ನಿವಾಸಿಗಳು ಹರೀಸನ ಪರವಾಗಿ ಮಹಮ್ಮದನಿಗೆ ಕಾಳೆಗ ಕೊಟ್ಟರು. ಇದರಲ್ಲಿ ಮಹಮ್ಮದನಿಗೆ ಜಯವಾಗಿ ಆರು ನೂರು ಮಂದಿ ಶತ್ರುಗಳು ಸೆರೆ ಸಿಕ್ಕಿದರು. ಹೀಗೆ ಸೆರೆ ಸಿಕ್ಕಿದವರಲ್ಲಿ ಹರೀಸನ ಮಗಳಾದ ಜುವರಿಯಳೂ ಒಬ್ಬಳು. ಹರೀಸನು ಮಹಮ್ಮದನಿಗೆ ಹಣವನ್ನು ಕೊಟ್ಟು ಆಕೆಯನ್ನು ಬಿಡಿಸಿಕೊಂಡು ಹೋಗಲು ಬಂದಾಗ ಜುವರಿಯಳು ತಾನು ಮಹಮ್ಮದನ ಬಳಿಯಲ್ಲಿಯೇ ಇರುವುದಾಗಿ ತಂದೆಗೆ ತಿಳಿಸಲು, ಹರೀಸನು ನಿರುತ್ತರನಾಗಿ ಹೊರಟುಹೋಗಬೇಕಾಯಿತು. ಜುವರಿಯಳ ಪ್ರಾರ್ಥನೆಯಂತೆ ಮಹ ಮ್ಮದನು ಆಕೆಯನ್ನು ಮದುವೆಯಾದನು. ಯುದ್ಧದಲ್ಲಿ ಸೆರೆಸಿಕ್ಕಿದ ಇತರರೆಲ್ಲರಿಗೂ ಬಿಡುಗಡೆಯಾಯಿತು. ಈ ಮಧ್ಯೆ ಕೋರೈಸ್ ಮನೆತನದವರು ಮತ್ತೊಮ್ಮೆ ಮೆದೀನಾ ನಗರವನ್ನು ಮುತ್ತಬೇಕೆಂಬುದ್ದೇಶದಿಂದ ಸಮರ ಸನ್ನಾಹಗಳನ್ನು ಸರ್ವ ಸನ್ನದ್ದತೆಯಿಂದ ನಡೆಯಿಸುತ್ತಿದ್ದರು. ಸಮರ ಸನ್ನಾಹ ಮೆದೀನಾ ನಗರದಿಂದ ಓಡಿಸಲ್ಪಟ್ಟು, ಪೈಬರಿನಲ್ಲಿ ನೆಲಸಿದ್ದ ಯೆಹೂದ್ಯರೂ ಅವರೊಡನೆ ಸೇರಿದರು. ಮಕ್ಕಾ ನಗರದ ಸುತ್ತಲಿನ ಪ್ರದೇಶದಲ್ಲಿದ್ದ ಬೆಡೋನ್ ಬುಡಕಟ್ಟಿನ ಪುಂಡು ಜನರನ್ನೂ ಅವರು ತಮ್ಮೊಡನೆ ಸೇರಿಸಿಕೊಂಡರು. ಈ ಸನ್ನಾ ಹವು ೨೬ನೆಯ ಇಸವಿಯಲ್ಲಿ ನಡೆದು, ಇಪ್ಪತ್ತ ನಾಲ್ಕು ಸಾವಿರ ಮಂದಿ ಸೈನಿಕರು ದೊಡ್ಡದೊಂದು ದಳವು ಸಿದ್ಧವಾಯಿತು. ಅಷ್ಟು ದೊಡ್ಡ ಸೈನ್ಯದೊಡನೆ ಮಹಮ್ಮದೀಯರು ಎಂದೂ ಯುದ್ದ ಮಾಡಿರಲಿಲ್ಲ. ಈ ಸಂಗತಿಯು ತಿಳಿದೊಡನೆಯೇ ಮಹಮ್ಮದನು ತನ್ನ ಆಪ್ತ ರನ್ನು ಕರೆಯಿಸಿ ಅವರ ಆಲೋಚನೆಯನ್ನು ಕೇಳಿದನು. ಮದೀನಾ ನಗರದ ಸುತ್ತಲೂ ತಕ್ಕಷ್ಟು ಆಳವಾಗಿಯ ವಿಶಾಲವಾಗಿಯೂ ಇರ ತಕ್ಕ ದೊಡ್ಡದೊಂದು ಕಂದಕವನ್ನು ತೊಡಿಸಿ ತಾವೂ ಯುದ್ಧಕ್ಕೆ