________________
ಪೈಗಂಬರ ಮಹಮ್ಮದನು ಸಿದ್ದರಾಗಬೇಕೆಂದು ಸಾಲ್ಮನ್ ಎಂಬಾತನು ಸಲಹೆ ಹೇಳಿದನು. ಇದಕ್ಕೆ ಎಲ್ಲರೂ ಒಪ್ಪಲು, ಒಡನೆಯೇ ಮಹಮ್ಮದನು ಹತ್ತು ಹತ್ತು ಮಂದಿ. ಕೆಲಸಗಾರರಿರುವ ಹಲವು ತಂಡಗಳನ್ನೇರ್ಪಡಿಸಿ ದಿನಗೂಲಿಯವನಂತೆ ತಾನೂ ಅವರೊಡನೆ ಕೆಲಸಕ್ಕೆ ನಿಂತು ಕಂದಕವನ್ನ ಗೆಯುವುದಕ್ಕೆ ಪ್ರಾರಂಭಿಸಿ, ತನ್ನವರನ್ನೂ ತನ್ನ ಮತವನ್ನೂ ಉದ್ದರಿಸುವಂತೆ ಭಗವಂತ ನನ್ನು ನಿಶ್ಚಲವಾದ ಭಕ್ತಿಯಿಂದ ಪ್ರಾರ್ಥಿಸಿದನು. ತಮ್ಮ ರಾಷ್ಟ್ರದ ಅಧಿಪತಿಯಾಗಿಯ, ತನ್ನ ಮತ ಸ್ಥಾಪಕನಾದ ಗುರುಶ್ರೇಷ್ಠ ನಾಗಿಯೂ ಇದ್ಯ, ಮಹಮ್ಮದನು ತನ್ನೊಡನೆ ಕೂಲಿಗಾರನಂತೆ ಕೆಲಸಮಾಡತೊಡಗಿದುದನ್ನು ನೋಡಿ ಕೆಲಸಗಾರರೆಲ್ಲರೂ ಆಶ್ಚರ್ಯ ದಿಂದ ಬೆರಗಾಗಿ, ಅವರ ಗುರು ಭಕ್ತಿಯ ಮೊದಲಿಗಿಮ್ಮಡಿಯಾಯಿತು. ಹೀಗೆ ಕಂದಕವನ್ನು ಅಗೆಯುತ್ತಿರುವಾಗ ನೆಲದಲ್ಲಿ ದೊಡ್ಡದೊಂದು ಕಲ್ಲು ಚಪ್ಪಡಿ ಸಿಕ್ಕಿತು. ಕೆಲಸಗಾರರೆಲ್ಲರೂ ಸೇರಿ ಪ್ರಯತ್ನಿಸಿದರೂ ಆ ಕಲ್ಲನ್ನು ಒಡೆಯಲು ಸಾಧ್ಯವಾಗಲಿಲ್ಲ. ಆ ಬಳಿಕ ಮಹಮ್ಮದನು ವಿ ಕಾ ಸಿ ಯ ನ್ನು ಹಿಡಿದು ಕಲ್ಲನ್ನೊ ಡೆಯಲು ಪ್ರಯತ್ನಿಸಿದನು. ಮೊದಲನೆಯ ಏಟು ಬಿದ್ದೊಡನೆಯೇ ಒಂದು ಬೆಂಕಿಯ ಕಿಡಿ ಹಾರಿತು. ಆ ಕಿಡಿಯಲ್ಲಿ ಮಹಮ್ಮದನ ಕಣ್ಣಿಗೆ, ಸಿರಿಯಾ ದೇಶದ ರಾಜ ಪ್ರಾಸಾದದ. ಬೀಗದ ಕೈಗಳನ್ನು ತನ್ನ ಕೈಗೆ ಕೊಟ್ಟಂತೆ, ಒಂದು ದೃಶ್ಯವೂ ಗೋಚರ ವಾಯಿತಂತೆ. ಮಹಮ್ಮದನು ಹಾಕಿದ ಎರಡನೆಯ ಪೆಟ್ಟಿಗೆ ಆ ಕಲ್ಲು ಸೀಳು ಬಿಟ್ಟು ಮತ್ತೊಂದು ಕಿಡಿಯು ಹಾರಿತು, ಪಾರ್ಸಿ ದೇಶದ ಅರಮನೆಯ ಬೀಗದ ಕೈಗಳು ತನ್ನ ಕೈಗೆ ದೊರೆತಂತೆ ಆಗ ಅವನ ಕಣ್ಣಿಗೆ ಮತ್ತೊಂದು ದೃಶ್ಯವು ಗೋಚರಿಸಿತಂತೆ. ಮೂರನೆಯ ಪೆಟ್ಟು ಬಿದ್ದೋಡ ನೆಯೇ ಕಲ್ಲು ಪುಡಿ ಪುಡಿಯಾಗಿ ಅನೇಕ ಬೆಂಕಿಯ ಕಿಡಿಗಳು ಹಾರಿದುವ. ಕೆಲಸಗಾರರೆಲ್ಲರೂ, " ಅಲ್ಲಾಹೊ ಅಕ್ಷರ (ಭಗವಂತನು ದೊಡ್ಡವನು) ಎಂದು ಕೂಗಿದರು. ಯುವನ್ ರಾಜ್ಯದ ಅರಮನೆಯ ಬೀಗದ ಕೈಗಳು ತನ್ನ ಕೈಗೆ ಬಂದಂತೆ ಮಹಮ್ಮದನ ಕಣ್ಣಿಗೆ ಮತ್ತೊಂದು ದೃಶ್ಯವು ಗೋಚರಿಸಿತಂತೆ. ಈ ಸನ್ನಿವೇಶವು ಮಹಮ್ಮದನಿಗೆ ಬಹಳ ಅನುಕೂಲ ವಾದಂತಾಯಿತು. ಏಕೆಂದರೆ, ಆಗ ಮಹಮ್ಮದನಿಗೆ ಏನನ್ನಾ ವಸ್ಯೆ