ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

X. ಒಪ್ಪಂದವಾದ ಎರಡನೆಯ ವರುಷ ೮೭. ತಾವು ದಂಡೆತ್ತಿ ಬಂದ ತಪ್ಪಿತಕ್ಕಾಗಿ ಮಹಮ್ಮದನಿಂದ ತಮಗೆಲ್ಲಿ ದಂಡನೆ ಯಾಗುವುದೋ ಎಂದು ಭಯಪಟ್ಟು ಘಟಫನ್ ಪ್ರಾಂತದವರು ಖೈಬರಿಗೆ ಸೈನ್ಯವನ್ನು ಕಳುಹಿಸಲೇ ಇಲ್ಲ. ಮಹಮ್ಮದೀಯರಿಗೂ ಖೈಬರಿನ ಯೆಹೂದ್ಯರಿಗೂ ಕದನವ ಕೈಗಟ್ಟಿ, ಯೆಹೂದ್ಯರು ಬಹು ಕಾಲದಿಂದಲೂ ಯುದ್ಧಕ್ಕೆ ಸಿದ್ದ ಮಾಡಿಕೊಂಡಿದ್ದುದರಿಂದ, ಅವರನ್ನು ಸೋಲಿಸುವುದು ಮಹಮ್ಮದೀಯರಿಗೆ ಬಹಳ ಕಷ್ಟವಾಯಿತು. ಆದರೂ, ಒಂದಾದ ಮೇಲೆ ಮತ್ತೊಂದರಂತೆ, ಯೆಹೂದ್ಯರ ಕೋಟೆಗಳು ಮಹ ಮ್ಮದನ ವಶವಾದವು. ಅಲೀಯ ಅಧಿನಾಯಕತ್ವದಲ್ಲಿ ಅವರು ಅತಿ ಪರಾಕ್ರಮದಿಂದ ಇಪ್ಪತ್ತು ದಿನಗಳು ಯುದ್ಧ ಮಾಡಿ, ಅಧಿಕವಾದ ಸೈನ್ಯವಿದ್ದ ಕ್ಯಾಮುಸ್” ಎಂಬ ಬಹಳ ದೊಡ್ಡ ಕೋಟೆಯನ್ನೂ ಸ್ವಾಧೀನಪಡಿಸಿಕೊಂಡರು. ಅಲ್ಲಿಗೆ ಯೆಹೂದ್ಯರ ಹೆಮ್ಮೆ ಮುರಿದು ಅವರು ಶರಣಾಗತರಾದರು. ತಮ್ಮ ತಮ್ಮ ಭೂಮಿ ಕಾಣಿಗಳನ್ನು ತನು ತನಗೇ ಉಳಿಸಿಕೊಡ ಬೇಕೆಂದೂ, ಬೆಳೆಯಲ್ಲಿ ಅರ್ಧ ಭಾಗವನ್ನು ಕಾಣಿಕೆಯಾಗೊ ಸಿ ತಾವೂ ಸ್ನೇಹದಿಂದಿರುವುವೆಂದೂ ಯೆಹೂ ದ್ಯರು ಕ್ರಿ. ಶ. ೬೨೮ರಲ್ಲಿ ಮಹಮ್ಮದನೊಡನೆ ಒಪ್ಪಂದ ಮಾಡಿ ಕೊಂಡರು. ಅಲ್ಲಿಗೂ ಯೆಹೂದ್ಯರ ಕುತ್ತಿತ ಬುದ್ದಿಯು ಕೊನೆಗಾಣ ಲಿಲ್ಲ : ಅವರ ಮುಖ್ಯಸ್ಥರೆಲ್ಲರೂ ಸೇರಿ ತನ್ನ ರಾಣಿಯಿಂದ ಮಹಮ್ಮದ ನಿಗೆ ಔತಣದ ಆಹ್ವಾನವನ್ನು ಕಳುಹಿಸಿದರು. ಮಹಮ್ಮದನಿಗೂ ಅವನ ಕಡೆಯವರಿಗೂ ವಿಷ ವಿಶಿ)ತವಾದ ಆಹಾರವ್ರ ಸಿದ್ಧವಾಯಿತು. ಈ ಕೃತಿ)ವು ಸಂಧಾನದಿಂದ ಅವರೆಲ್ಲರನ್ನು ಕೊಂದು ಬಳಿಕ ತಾವ ನಿರುಪಾಧಿಕವಾಗಿ ಬಾಳಬೇಕೆಂಬುದೇ ಯೆಹೂದ್ಯರ ಸಂಕಲ್ಪ, ಭೋಜ ನಕ್ಕೆ ಕುಳಿತು ಒಂದು ತುತ್ತನ್ನು ಬಾಯಲ್ಲಿಟ್ಟುಕೊಂಡ ಕೂಡಲೆ ಭಗವಂತನ ದಯೆಯಿಂದ ಮಹಮ್ಮದನಿಗೆ ಏನೋ ಒಂದು ಶಂಕೆಯು ತಲೆದೋರಿ, ಒಬ್ಬರೂ ಊಟಮಾಡಕೂಡದೆಂದು ತನ್ನವರಿಗೆ ತಿಳಿಸಿದನು. ಆದರೆ, ಅಷ್ಟರಲ್ಲಿ ಒಂದೆರಡು ತುತ್ತುಗಳು ಹೊಟ್ಟೆಗೆ ಸೇರಿದ್ದ ಬಿಷರ್ ಎಂಬಾತನು ಮಾತ್ರ ಸ್ವಲ್ಪ ಹೊತ್ತಿನಲ್ಲಿಯೇ ಮೃತಪಟ್ಟನು. ಈ ಘೋರ ಕೃತ್ಯಕ್ಕಾಗಿ ಮಹಮ್ಮದನು ಯೆಹೂದ್ಯರೆಲ್ಲರನ್ನೂ ಕೊಲ್ಲಿಸ