ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೮ ಪೈಗಂಬರ ಮಹಮ್ಮದನು ರಾಜರುಗಳಿಗೆ ಬಹುದಾಗಿದ್ದಿತು ; ಆದರೆ ಅವರಲ್ಲಿ ಮೈತ್ರಿಯಿಂದಿರಬೇಕೆಂಬುದೇ ಮಹ ಮೃದನ ಆಸೆಯಾಗಿದ್ದುದರಿಂದ ಅವರ ರಾಣಿಯಾದ ಜೈನಾಬಳಿಗೆ ಮಾತ್ರ ದಂಡನೆಯನ್ನು ವಿಧಿಸಿ ಉಳಿದವರಲ್ಲಿ ಕರುಣೆಯಿಂದ ವರ್ತಿಸಿ ದನು. ಯಹೂದ್ಯರಲ್ಲಿ ತನಗೆ ಮೈತ್ರಿಯು ಸಿದ್ದಿಸಲೆಂಬ ಉದ್ದೇಶದಿಂದ ತನಗೆ ಸೆರೆ ಸಿಕ್ಕಿದ್ದ ಯೆಹೂದ್ಯರ ಅರಸನ ಮಗಳಾದ ಸಫಿಯಾ ಎಂಬಾಕೆ ಯನ್ನು ಮಹಮ್ಮದನು ವಿವಾಹ ಮಾಡಿಕೊಂಡನು. ಇಸ್ಲಾಂ ಮತವನ್ನವಲಂಬಿಸುವಂತೆ ನಾನಾ ದೇಶಗಳ ರಾಜರು ಗಳಿಗೆ ಕ್ರಿ. ಶ. ೬೨೮ರಲ್ಲಿ ಮಹಮ್ಮದನು ನಿರೂಪಗಳನ್ನು ಕಳುಹಿಸಿ ದನು. ಈಜಿಪ್ಟಿನ ದೊರೆಯಾದ ಮಕೌಕಾಸನು ಮಹಮ್ಮದನ ನಿರೂಪವನ್ನು ರತ್ನ ಖಚಿತವಾದ ನಿರೂಪಗಳು ಭರಣಿಯಲ್ಲಿಟ್ಟು ಗೌರವಿಸಿ ಮಹಮ್ಮದನ ರಾಯ ಭಾರಿಯನ್ನು ಕೇವಲ ಆದರದಿಂದ ಕಂಡು ಸತ್ಕರಿಸಿದನು. ಆ ದೊರೆಯು ಇಸ್ಲಾಂ ಮತಕ್ಕೆ ಸೇರದೆಹೋದರೂ, ಮಹಮ್ಮದನಿಗೆ ಅನೇಕ ಬಗೆಯ ಕಾಣಿಕೆಗಳನ್ನು ಸಮರ್ಪಿಸುವುದರಲ್ಲಿ, ಮೇರಿ ಎಂಬ ಕ್ರೈಸ್ತ ಮತದ ಗುಲಾಮ ಕನ್ನೆಯನ್ನೂ ಒಪ್ಪಿಸಿದನು. ಮಹಮ್ಮದನು ಆ ಕನೈಯನ್ನು ಗುಲಾಮತನದಿಂದ ಬಿಡುಗಡೆ ಮಾಡಿ ತಾನೇ ಮದುವೆ ಮಾಡಿಕೊಂಡನು. ರೋಮನ್ ದೊರೆಯದೆ ಕೈಜರನ ಬಳಿಗೆ ಮಹಮ್ಮದನ ನಿರೂಪ ವನ್ನು ತೆಗೆದುಕೊಂಡು ಕಾಲ್ಕಿಯೆಂಬಾತನು ಹೋಗುವ ಸಮಯಕ್ಕೆ, ವ್ಯಾಪಾರಾರ್ಥವಾಗಿ ಸಿರಿಯಾ ದೇಶಕ್ಕೆ ಹೋಗಿದ್ದ ಅಬೂ ಸುಫ್ಯಾನ ನಿಗೂ ದೊರೆಯ ಬಳಿಗೆ ಆಹ್ವಾನ ಬಂದಿತು. ಕೈಜರ್ ದೊರೆಯು ಮಹಮ್ಮದನ ವಿಚಾರವೇನೆಂದು ಅಬೂ ಸುಫಾನನ್ನು ಕೇಳುವಲ್ಲಿ ಅವನು, 'ಮಹಾ ಸ್ವಾಮಿಾ ! ಮಹಮ್ಮದನು ದೊಡ್ಡ ವಂಶದಲ್ಲಿ ಹುಟ್ಟಿ ದವನು. ಅವನು ಸಟೆಯಾಡಿದುದನ್ನಾಗಲಿ ಕೊಟ್ಟ ಭಾಷೆಗೆ ತಪ್ಪಿದುದ ನಾಗಲಿ ಯಾರೂ ಕಂಡರಿಯರು. ಒಬ್ಬನೇ ಭಗವಂತನನ್ನು ಆರಾಧಿಸ ಬೇಕೆಂದೂ, ಇತರ ದೇವತೆಗಳ ಪೂಜೆಯನ್ನು ಬಿಟ್ಟು ಬಿಡಬೇಕೆಂದೂ, ಸುಳ್ಳನ್ನು ಹೇಳಬಾರದೆಂದೂ, ಸಾಧ್ಯವಾಗುವ ಮಟ್ಟಿಗೂ ಪರೋಪ ಕಾರ ಮಾಡಬೇಕೆಂದೂ ಆತನು ಜನರಿಗೆ ಬೋಧಿಸುತ್ತಿದ್ದಾನೆ. ಆತನ