ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وع ಪ್ರಬಂಧಮಂಜರಿ-ಎರಡನೆಯ ಭಾಗ ಯುಕ್ತವಾಗಿದೆ. ಇದು ಸೇರಿರುವ ಮೈಲುತುತ್ಯವು ಔಷಧಕ್ಕೆ ಬರುತ್ತದೆ. ತಾಮ್ರವನ್ನು ಇತರ ಲೋಹಗಳೊಡನೆ ಸೇರಿಸುವುದರಿಂದ ಬಹಳಉಪಯೋ ಗವುಳ್ಳ ಹಿತ್ತಾಳೆ, ಕಂಚು, ಬ್ರಾನ್ಸ್ ಎಂಬ ಮಿಶ್ರಲೋಹಗಳಾಗುವುವು, _15, ಹಿತ್ತಾಳೆ, ಅತಿ ಪ್ರಸಿದ್ಧವಾದ ಈ ವಸ್ತು ಕಬ್ಬಿಣ ತಾಮ್ರಗಳಂತೆ ಶುದ್ಧಲೋಹವಲ್ಲ, ಆದುದರಿಂದ ಇದು ಅದುರಿನಲ್ಲಿ ಸಿಕ್ಕುವುದಿಲ್ಲ. ಎರಡು ಲೋಹಗಳು ಸೇರಿ ಆಗಿರುವುದರಿಂದ ಇದನ್ನು ಮಿಶ್ರಲೋಹವೆಂದು ಕರೆಯಬಹುದು, - ಮೂರು ಭಾಗ ತಾಮ್ರವನ್ನೂ ಒಂದು ಭಾಗ ಸತುವನ್ನೂ ಬೆರೆಸುವುದು ರಿಂದ ಹಿತ್ತಾಳೆಯಾಗುವುದು. ಈ ಎರಡು ಲೋಹಗಳನ್ನೂ ಸರಿಯಾದ ಪ್ರಮಾಣದಲ್ಲಿ ಹಾಕಿ ಕರಗಿಸಿ, ಅಚ್ಚುಗಳಿಗೆ ಎರೆದರೆ ಹಿತ್ತಾಳೆಯ ಗಟ್ಟಿಗಳಾಗುತ್ತವೆ. ಎರಕದ ಕೆಲಸಕ್ಕೆ ಬೇಕಾದರೆ ಈ ಗಟ್ಟಿಗಳನ್ನು ಒಡೆದು ಮತ್ತೆ ಕರಗಿಸಿ ಅಚ್ಚುಗಳಿಗೆ ಎರೆದು ಬೇಕಾದ ವಸ್ತುಗಳನ್ನು ಮಾಡುವರು. ಇಲ್ಲದಿದ್ದರೆ ಆ ಗಟ್ಟಿಗಳನ್ನು ಹಾಗೆಯೇ ತಗಡುಮಾಡುವರು. ತಗಡುಮಾಡು. ವಾಗ ಹಿತ್ತಾಳೆ ಪೆಸಾಗದಿರುವಂತೆ ಆಗಿಂದಾಗ್ಗೆ ಕಾಯಿಸಿ ಆರಿಸುತ್ತಾರೆ. ಹಿತ್ತಾಳೆ ಹಳದಿ ಬಣ್ಣದ ಮಿಶ್ರಲೋಹ, ಉಜ್ಜಿದರೆ ತಾವಕ್ಕಿಂತ ಹೊಳಪಾಗುತ್ತದೆ. ಇದು ತಾಮ್ರಕ್ಕಿಂತ ಗಟ್ಟಿ, ಭಾರದಲ್ಲಿ ಕಡಮೆ, ಸುಲಭ ವಾಗಿ ಕರಗತಕ್ಕದ್ದು. ಇದನ್ನು ಬಹಳ ನವುರಾದ ತಗಡಾಗಿ ಬಡಿಯಬಹುದು. ಐವತ್ತು ಸಾವಿರತಗಡುಗಳನ್ನು ಒಂದರಮೇಲೊಂದರಂತೆ ಅಡಕಿದರೆ ಒಂದಂಗುಲಗಾತ್ರವೇ ಆಗುವಷ್ಟು ತೆಳುವಾದ ತಗಡನ್ನು ಮಾಡಬಹುದು, ಬೇಗಡೆಯೆಂಬುದು ಬಹಳ ನವುರಾದ ಹಿತ್ತಾಳೆಯ ರೇಕೆನ್ನ ಬಹುದು. ಹಿತ್ತಾಳೆಯನ್ನು ಬಹಳ ಸಣ್ಣ ತಂತಿಯಾಗಿ ಎಳೆಯಬಹುದು. ಇದನ್ನು ಅಚ್ಚಿನಲ್ಲಿ ಎರೆದು ಬೇಕಾದ ಪದಾರ್ಥಗಳನ್ನು ಮಾಡಬಹುದು.ಬಹಳ ಹೊಳಪ ಗುಮತೆ ಇದಕ್ಕೆ ಮೆರಗುಕೊಡಬಹುದು. ಇದು ತಾಮ್ರದಂತೆ ಬೇಗ ಕೊಳೆ ಯಾಗುವುದಿಲ್ಲ. ಹಿತ್ತಾಳೆಯ ಸಾಮಾನು ಬಡಿದರೆ ಧ್ವನಿ ಕೊಡುತ್ತದೆ. ತಾಮ್ರಕ್ಕಿಂತ ಹಿತ್ತಾಳೆ ಅಗ್ಗವಾಗಿಯೂ ಬಾಳಿಕೆ ಬರುವುದಾಗಿಯೂ ಇರುವುದರಿಂದ ಇದನ್ನು ಬಹಳ ಕೆಲಸಗಳಿಗೆ ಉಪಯೋಗಿಸುವರು. ಹಿಂದೂ