ಈ ಪುಟವನ್ನು ಪ್ರಕಟಿಸಲಾಗಿದೆ
೫೦ / ಪ್ರಸ್ತುತ

ಪ್ರತ್ಯೇಕವಾಗಿಯೂ, ಒಟ್ಟು ಪರಿವೇಶದಲ್ಲೂ ಅಧ್ಯಯನ ಮಾಡಬೇಕಾದ ಅಗತ್ಯವುಂಟು, ಚಿಕ್ಕ ಕ್ಷೇತ್ರವನ್ನಾರಿಸಿ, ಸಮಗ್ರ ಅಧ್ಯಯನ ಮಾಡುವುದು ಇನ್ನು ಮುಂದಿನ ಹಂತವಾಗಿದೆ. ಇಂತಹ ಮೈಕ್ರೋ ಅಧ್ಯಯನ ಮಟ್ಟದಲ್ಲಿ ಇನ್ನೊಂದು ಸಾಧ್ಯತೆಯೂ ಉಂಟು. ಉತ್ತರ ಕನ್ನಡದಲ್ಲಿ, ಉಳಿದ ಕಡೆಗಳಿಗಿಂತಲೂ, ಯಕ್ಷಗಾನ ರಂಗದಲ್ಲಿ ಬ್ರಾಹ್ಮಣರ (ಹವ್ಯಕರ) ಪ್ರಾಧಾನ್ಯವಿತ್ತು, ಮತ್ತು ಇದೆ. ಆದರೆ ಉ. ಕ. ದಲ್ಲಿ ಯಕ್ಷಗಾನದಲ್ಲಿ ಬ್ರಾಹ್ಮಣೇತರರೂ ಬಹಳ ಹಿಂದಿನಿಂದ ಇದ್ದಾರೆ. ಹೀಗಾಗಿ ಉ. ಕ. ಯಕ್ಷಗಾನವನ್ನು ಬ್ರಾಹ್ಮಣ ಸಂಪ್ರದಾಯ, ಶೂದ್ರ ಸಂಪ್ರದಾಯವನ್ನಾಗಿಯೂ ಪರಿಶೀಲಿಸಲು ಅವಕಾಶವಿದೆ. ಕ್ಷಮಿಸಿ. ಇದು ಜಾತಿಯ ಪ್ರಶ್ನೆ ಅಲ್ಲ. ಸಾಮಾಜಿಕ ಆರ್ಥಿಕ ಹಿನ್ನೆಲೆಯ ಅಧ್ಯಯನದಲ್ಲಿ ಈ ನೋಟಕ್ಕೂ ನ್ಯಾಯವಾದ ಪ್ರಾಶಸ್ತ್ರವುಂಟು.

ಸದ್ಯ ನಾವು ನಡೆಸುತ್ತಿರುವ ಅಧ್ಯಯನಗಳಲ್ಲಿ ಯಕ್ಷಗಾನ ರಂಗಭೂಮಿಯ ಸ್ವರೂಪ, ತಾಂತ್ರಿಕ ವಿವರಗಳು, ಕಲಾವಿದರ ವೈಯಕ್ತಿಕ ಅಭಿವ್ಯಕ್ತಿ ವಿಶೇಷಗಳಿಗೆ ಹೆಚ್ಚಿನ ಒತ್ತು ಇರುವುದು. ಇದು ಇನ್ನೂ ಹೆಚ್ಚು ವ್ಯವಸ್ಥಿತವಾಗಿ ಜರಗುವುದರೊಂದಿಗೆ ಕಲೆಯ ರೂಪಾತ್ಮಕ (formalistic) ಮುಖದಷ್ಟೆ ಮಹತ್ತ್ವವು, ಕಲಾಮಾಧ್ಯಮದ ಮೂಲಕ ಬರುವ ವಸ್ತು (Content) ಮತ್ತದರ ಸಂವಹನ, ಪರಿಣಾಮಗಳ ಕಡೆಗೂ ಆಗಬೇಕಾಗಿದ್ದು, ಸಂವಹನ ದೃಷ್ಟಿಯಿಂದ ಉನ್ನತವೆನ್ನಬಹುದಾದ ಸಿದ್ದಿಯನ್ನು ತೋರಿಸಿರುವ ಉತ್ತರ ಕನ್ನಡ ಯಕ್ಷಗಾನವು, ಭಾರತೀಯ ಮತ್ತು ವಿಶ್ವದ ರಂಗಭೂಮಿಯಲ್ಲಿ ಸಂವಹನ ದೃಷ್ಟಿಯಲ್ಲಾಗಿರುವ ಮಹತ್ಸದ್ದಿಗಳೊಂದಿಗೆ ಹೋಲಿಕೆಗೆ ಅರ್ಹವಾಗಿದೆ. ಇಂತಹ ಸಾಧ್ಯತೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ಉ. ಕನ್ನಡದ ಸಾಂಪ್ರದಾಯಿಕ ಕ್ರಮಗಳ ಬಗ್ಗೆ ಸರಿಯಾದ ತಿಳುವಳಿಕೆ ಮತ್ತು ಅದನ್ನು ರಂಗದಲ್ಲಿ ಮಾಡಿ ತೋರಿಸಬಲ್ಲ ಸಾಮರ್ಥ್ಯವಿದ್ದ ಓರ್ವ ಅಸಾಧಾರಣ ಯೋಗ್ಯತೆಯ ಕಲಾವಿದ ಪಿ.ವಿ. ಹಾಸ್ಯಗಾರರು ನಿಧನರಾದುದು ತುಂಬ ಖೇದಕರವಾದ ನಷ್ಟವಾಗಿದೆ. ವಿಶಿಷ್ಟ ಸಂಪ್ರದಾಯವೊಂದರ ಪ್ರಾತಿನಿಧಿಕರೆನ್ನಬಹುದಾಗಿದ್ದ ಓರ್ವ ಆಕರ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ.

ವೇಷಭೂಷಣ, ವಾದ್ಯಗಳು, ಹಾಡುಗಾರಿಕೆಯಲ್ಲಿನ ರಾಗಗಳ ಶೈಲಿ, ತಾಳಗಳ ಮೂಲದಸ್ತಗಳು_ಇವುಗಳಲ್ಲಿ ಕುಂದಾಪುರಿ ಬಡಗು ತಿಟ್ಟಿಗೂ, ಉ. ಕನ್ನಡ ತಿಟ್ಟಿಗೂ ಅಂತಹ ವ್ಯತ್ಯಾಸಗಳೇನಿಲ್ಲ. ಆದರೆ, ಕಥಾನಕವನ್ನು ರಂಗದಲ್ಲಿ ನೀಡುವ ವಿಧಾನ, ನೃತ್ಯದ ವಿಸ್ತಾರ ಮತ್ತು ಮುದ್ರೆಗಳ ಬಳಕೆ, ಪದಾಭಿನಯಗಳಲ್ಲಿ ಇವೆರಡು ತಿಟ್ಟುಗಳಲ್ಲಿ ತುಂಬ ವ್ಯತ್ಯಾಸವಿದೆ. ಉತ್ತರ ಕನ್ನಡಕ್ಕೆ ಯಕ್ಷಗಾನವು, ದಕ್ಷಿಣ ಕನ್ನಡದಿಂದಲೇ ಬಂದು, ಇಲ್ಲಿ ಪ್ರತ್ಯೇಕವಾದ ವೈಶಿಷ್ಟ್ಯಗಳನ್ನು ಪಡೆದು ಬೆಳೆದಿರ