ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* FL ಹೇಮಚಂದ್ರರಾಜ ವಿಲಾಸ [೪ನೇ ಆಂಗ್ ಮಾಡಿದರೆ, ನ್ಯಾಯಾಧಿಕಾರದ ಮನುಟಾದ ಈಟಯ ಸಹಿತ ಅದರಮುಂದೆ ಹಾಯದೆ ಮುರಿದು ಬೀಳುವುದು. ಅದೇ ಪಾಪಕ್ಕೆ ಚಿಂದೀ ಹೊದ್ದಿ ನಿಬಿಡು, ಮೋಟನ ಕೈ ಹುಲ್ಲು ಕಡ್ಡಿಯಾದರೂ ಅದನ್ನು ಭೇದಿಸಿಕೊಂಡು ಹೋಗುವುದು. ಯಾರೂ ಅಪರಾಧಿಗಳಲ್ಲಿ, ಯಾರೂ ಅಲೆ .: ಅಲ್ಲ. ನಾನು ಅವರಿಗೆ ಉಪೋದ್ದಲಿ ಮಾಡಿಕೊಡುತ್ತೇನೆ. ಅಯ್ಯ ಮಿತ್ರ, ಅಪರಾಧಿಗಳ ಬಾಯಿ ಮುಚ್ಚಿಸುವ ಅಧಿ ಕಾರವನ್ನು ನನ್ನಿಂದ ತೆಗೆದುಬಿಡು. ಕಣ್ಣಗುಡ್ಡೆಯ ಆಕಾರವಾಗಿಮಾಡಿದ ಗಾಜನ್ನಾದರೂ ಇಟ್ಟುಕೊಂಡು, ಕಾಣಿಸದೇ ಇರತಕ್ಕದ ಕಾಣಿಸುತ್ತಿದೆ ಎಂದು ಕುಮಂತ್ರಿಗಳ ಹಾಗೆ ನಸು ಇಗೊ, ಇಗೋ, ಕಚ್ಚಿತು ; ನನ್ನ ತೆಗೆ ಯಿರಿ. ಬಲವಾಯಿತು, ಎಳೆಯಿರಿ, ಹೊ, ಹಾಗೆ ! ಕುಕ್ಯ.-ವಿವೇಕ ಅವಿವೇಕ, ಜಾಣತನ ಹುಚ್ಚುತನ, ಮಿಳಿತವಾಗಿವೆ ! ದೊರೆ- ನನ್ನ ಅದೃಷ್ಟ್ಯಕ್ಕಾಗಿ ನಾನು ಅತ್ತರೆ, ನನ್ನ ಕಣ್ಣುಗಳನ್ನು ಕಿತ್ತುಹಾಕು. ನಿನ್ನನ್ನು ನಾನು ಚೆನ್ನಾಗಿ ಬಲ್ಲೆ, ನಿನ್ನ ಹೆಸರು ದುಃಖಸಾರ. ನೀನು ತಾಳ್ಮೆಯನ್ನು ತಂದುಕೊ, ನಾವು ಇಲ್ಲಿಗೆ ಅಳುತಲೇ ಬಂದೆವು. ನಾವು ಈ ಪ್ರಪಂಚದಲ್ಲಿ ಮೊದಲು ಜನನವಾಗು ವಾಗ ಅಳುವೆವು ಎನ್ನುವುದನ್ನು ನೀನು ಎಲ್ಲೆ, ನಿನಗೆ ಉಪದೇಶಮಾಡುತೇನೆ, ನೋಡು, ದುಃಖ-ಅಯ್ಯೋ ದುರ್ದಿನವೆ ! ದೊರೆ ನಾವು ಜನನವಾದಾಗ, ಇಂಥಾ ಅವಿವೇಕಿಗಳ ನಾಟ್ಯ ರಂಗಕ್ಕೆ ನಾವೂ ಬಂದೆ ವಲ್ಲಾ ಎಂದು ಅಳುವೆವು. ಇದು ಸರಿ, ಈ ಕಿರೀಟ ಸರಿ, ಅರಳದಲ್ಲಿ ಮಾಡಿದ ಲಾಳವನ್ನು ಕುದುರೆಗಳಿಗೆ ಕಟ್ಟಿಸುವುದು ಒಂದು ಸಮರೋಪಾಯ. ಇದನ್ನು ನಾನು ನಡೆಯಿಸಿಬಿಡುತ್ತೇನೆ. ಅಳಿಯಂದಿರಿಗೆ ನಾನು ತಕ್ಕ ಕೆಲಸಾ ಕೊಟ್ಟ ಕೂಡಲೆ, ಆಗ, ಕೊಲ್ಲು, ಕೊಲ್ಲು, ಹೊಡೆ, ಕೊಲ್ಲು. ಪ್ರವೇಶ.-ಗ್ರಹಸ್ಥ ಪರಿವಾರದೊಡನೆ. ಗ್ರಹಓಹೋ, ಇಲ್ಲಿದಾರೆ, ಅವರನ್ನು ಎತ್ತಿಕೊಳ್ಳಿ. ಸ್ವಾಮಿ, ತಮ್ಮ ಅತ್ಯಂತ ಪ್ರಿಯಪುತ್ರಿಯಾದ, ದೊರೆ-ಏನು, ಯಾರೂ ದಿಕ್ಕಿಲ್ಲವೆ ? ಕೈಸೆರೆಯೆ ? ದುಃಖಕ್ಕೆ ನಾನು ಆಟದ ಚೆಂಡಾ ದೆನಲ್ಲಾ! ನನ್ನನ್ನು ಸರಿಯಾಗಿ ಕಾಣಿ. ನಿಮಗೆ ಇದಕ್ಕಾಗಿ ದ್ರವ್ಯ ದೊರೆಯು ವುದು, ನನಗೆ ವೈದ್ಯರನ್ನು ಕೊಡಬೇಕು ; ನನ್ನ ತಲೆಯ ಸೀಳಿಹೋದಹಾಗಿದೆ. ಗುಹ ತಮಗೆ ಎಲ್ಲಾ ದೊರೆಯುವುದು, ಧೋರೆ.-ಇನ್ಯಾರಿಗೂ ಇಲ್ಲವೆ ? ಎಲ್ಲಾ ನನಗೆಯೇ ? ಹೀಗಾಗುವ ಮನುಷ್ಯನ ಕಣ್ಣುಗಳನ್ನು ತೋಟದ ಪುಪ್ಪ ಕುಂಡಿಕಗಳಿಗೆ ನೀರ ಹಾಕುವುದಕ್ಕೂ, ಗ್ರೀಷ್ಮ ಕಾಲದಲ್ಲಿ ಬೀದಿಯ ಧೂಳನ್ನು ಅಡಗಿಸುವುದಕ್ಕೂ ಉಪಯೋಗಿಸಬಹುದು.