ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܝܘܘ ಹೇಮಚಂದ್ರರಾಜ ವಿಲಾಸ [೪ನೇ ಅಂಕ. ಪ್ರಾಣವೂ ಹೋಗಿ ಎಲ್ಲವನ್ನೂ ಪರಿಸಮಾಪ್ತಿ ಮಾಡದೇ ಇದ್ದದ್ದು ಆಶ್ಚಯ್ಯ, ಎಣ್ಣೆ ರವಾಯಿತು ; ಮಾತನಾಡಿಸಿ. ವೈದ್ಯ-ತಾಯಿ ತಾವು ಮಾತನಾಡಿಸಬೇಕು ; ಅದೇ ಯೋಗ್ಯವಾದ್ದು. ಇಂದು.ಮಹಾಸ್ವಾಮಿ, ರಾಜಾಧಿರಾಜ, ಅಪ್ಪಾಜಿ, ತಮ್ಮ ಪಾದವಾಖ್ಯವಾಗಿದೆಯೇ? ಹ್ಯಾಗಿದೆ ? ಧೋರೆ.-ಸಮಾಧಿಯಿಂದ ನನ್ನನ್ನು ತೆಗೆದು ನನಗೆ ಅನ್ಯಾಯವಾಡಿದಿರಿ, ನೀನು ದೇವ ಕರ್ನಿಕೆ ; ನಾನಾದರೆ, ನನ್ನ ಕಂಣಿನ ನೀರು ಕಾಸಿದ ಸೀಸದಂತೆ ಸುರಿದು ಸುಡುವಹಾಗೆ ಬೆಂಕಿಯು ಚಕ್ರಕ್ಕೆ ಕಟ್ಟಲ್ಪಟ್ಟದೇನೆ. ಇಂದು ಸ್ವಾಮಿ, ತಾವು ನನ್ನನ್ನು ಬಲ್ಲಿರಾ ? ದೊರೆ..ನೀನು ಪಿಶಾಚ, ನಾನು ಬಲ್ಲೆ. ನೀನು ಯಾವಾಗ ಸತ್ತದ್ದು. ಇಂದು ಇನ್ನೂ, ಇನ್ನೂ ಬುದ್ದಿ ಸಾಧೀನಕ್ಕೆ ಬರಲಿಲ್ಲ. ವೈದ್ಯ-ಇನ್ನೂ ಚೆನ್ನಾಗಿ ಎಚ್ಚರವಾಗಿಲ್ಲ. ಅವರ ಗೋಜಿಗೆ ಯಾರೂ ಹೋಗದಂತೆ ಸ್ವಲ್ಪ ಹೊತ್ತು ಅವರು ಹಾಗಿರಲಿ. ಧೋತಿ. ನಾನು ಎಲ್ಲಿದೆ ? ಈಗ ಎಲ್ಲಿದೇನೆ ? ಚೆನ್ನಾಗಿ ಬೆಳಗಾಗಿದೆಯೇ ? ನನ್ನ ಬುದ್ದಿಗೆ ಬೇನೋ ಭ್ರಮೆಯಾಗಿ ಹೋಗಿದೆ. ಇನ್ನಾರಾದರೂ ಈ ಸ್ಥಿತಿಯಲ್ಲಿ ಗರೆ ಅವರನ್ನು ನೋಡಿ ಕನಿಕರದಿಂದ ನಾನು ಪ್ರಾಣಬಿಡುತಿದ್ದೆ, ಏನು ಹೇಳ ಬೇಕೋ ನನಗೆ ಯೇನೂ ತಿಳಿಯದು. ಈ ಕೈ ನನ್ನ ದೇ ಎಂದು ನಾನು ಬೇರೆ ಪ್ರಮಾಣಮಾಡಲಾರೆ. ಎಲ್ಲಿನೋಡೋಣ. ಈ ಸೂಜಿ ಚುಚ್ಚುತಾ ಇರುವುದು ನನಗೆ ತೋರುತ್ತಿದೆ. ನನ್ನ ಸ್ಥಿತಿ ಇಂಥಾದ್ದೇ ಎಂದು ನನಗೆ ಯಾರಾದರೂ ಹೇಳಿದರೆ ಆದೀತಲ್ಲಾ ! ಇಂದು.-ನನ್ನನ್ನು ನೋಡಿಸ್ವಾಮಿ ; ತಮ್ಮ ಕೈಯನ್ನು ನನ್ನ ಮೇಲಿಟ್ಟು ಹರಿಸಿ, ತಾವು ನನಗೆ ನಮಸ್ಕಾರಮಾಡಕೂಡದು. ದೊರೆ-ಹಾಸ್ಯಮಾಡದಿರು, ನಾನು ಬೇಡಿಕೊಳ್ಳುತ್ತೇನೆ, ನಾನು ಅತ್ಯಂತ ವಿವೇಕರಹಿ ತನಾದ ಮುದುಕ. ತೊಂಭತ್ತರಮೇಲಾಯಿತು. ಒಂದುದಿವಸವಾದರೂ ಕಡಮೆ ಇಲ್ಲ. ನಾನು ನಿರ್ವಂಚನೆಯಾಗಿ ಹೇಳುತೇನೆ : ನನ್ನ ಬುದ್ದಿ ಸರಿಯಾಗಿಲ್ಲವೊ ಎಂದು ದಿಗಲಾಗಿದೆ, ನಿನ್ನ ನ್ಯೂ ಈ ಮನುಷ್ಯನನ್ನೂ ಬಲ್ಲೆನೆಂದು ತೋರುತ್ತಿದೆ. ಆದರೂ ಇನ್ನೂ ನನಗೆ ಸಂಶಯ. ಯಾಕೆಂದರೆ ಈ ಸ್ಥಳ ಯಾವುದೋ ಅದೇ ಮುಖ್ಯವಾಗಿ ನನಗೆ ತಿಳಿಯದು. ನನಗಿರುವ ಯುಕ್ತಿಯನ್ನೆಲ್ಲಾ ವೆಚ್ಚ ಮಾಡಿ ದರೂ ಈ ವುಡುಪು ಇಂಥಾದ್ದೆಂದು ನನಗೆ ಜ್ಞಾಪಕಕ್ಕೆ ಬರಲಿಲ್ಲ. ನಿನ್ನೆ ರಾತ್ರೆ ನಾನು ಎಲ್ಲಿದ್ದೆನೋ ಅದೂ ನನಗೆ ತಿಳಿಯದು. ನನ್ನನ್ನು ನೋಡಿ ನಗಬೇಡಿ, ನಾನು ಹೇಳುತೇನೆ ; ಈಕೆ ನನ್ನ ಮಗು ಇಂದುಕಲೆ ಎಂದು ತೋರುತ್ತಿದೆ.