ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov ಹೇಮಚಂದ್ರರಾಜ ವಿಲಾಸ, [ನೇ ಅಂಕ, ೩ನೇ ಪ್ರಕರಣ. ದೇವರೇವಿನ ಸವಿಾಪದಲ್ಲಿ ನೀಲಪರೀ ಸೇನೆಯ ಪಾಳಯ. ಪವೇ. ಜಯಭೇರಿಯನ್ನು ಹಾಕಿಸಿಕೊಂಡು ಕುಮಂತ ) : ಧೋರೆ, ಇಂದುಕಲೆ, ಕೈಸೆರೆಯಾಗಿ; ಸೇನಾಪತಿಗಳು; ವೀರಭಟರು ಮುಂತಾಗಿ, ಕುವಂತ )-ಕೆಲವು ಸೇನಾಪತಿಗಳೇ ಅವರನ್ನು ಕರೆದುಕೊಂಡು ಹೋಗಿ, ಅವ ರನ್ನು ವಿಚಾರಣೆ ಮಾಡತಕ್ಕ ಮೇಲ್ಪಟ್ಟವರ ಇಷ್ಮೆ ಗೊತ್ತಾಗೇವವರಿಗೂ ಅವರ ಮೇಲೆ ಬಲವಾದ ಕಾವಲು ಇರಲಿ. ಇಂದು-ಸಮ್ಮತ್ತಿಯಲ್ಲಿದ್ದರೂ ಮಹಾ ವಿಪತ್ತು ಸಂಭವಿಸಿದ್ದು ನಮಗೇ ಮೊದಲಲ್ಲ. ಆದರೆ ಅತ್ಯಂತ ಕಷ್ಟ್ಯಕ್ಕೆ ಗುರಿಯಾದ ದೊರೆಯೇ, ನಿನಗೋಸ್ಕರ ನಾನು ದುಃಖ ದಿಂದ ಮಗ್ನಳಾಗಿದ್ದೇನೆ. ಇಲ್ಲದಿದ್ದರೆ ನಿರ್ಭಾಗ್ಯ ಲಕ್ಷ್ಮಿಯು ಮುಖವನ್ನು ಗಂಟುಹಾಕಿಕೊಂಡು ಇರುವುದಕ್ಕಿಂತ ಹೆಚ್ಚಾಗಿ ಮುಖವನ್ನು ಗಂಟುಹಾಕಿ ಕೊಂಡು ನಾನು ಲಕ್ಷ್ಯಮಾಡದೇ ಇದ್ದೆನು. ಇಂಥಾ ಪುತ್ರಿಯರನ್ನೂ ಇಂಥಾ ಅಕ್ಕಂದಿರನ್ನೂ ನಾವು ನೋಡಬೇಡವೆ ? ಧೋರೆ.-ಬೇಡ, ಬೇಡ, ಬೇಡ, ಬೇಡ ! ಬಾ, ನಾವು ಕಾರಾಗೃಹಕ್ಕೆ ಹೋಗೋಣ ; ಅಲ್ಲಿ ಪಂಜರಸ್ಥವಾದ ಪಕ್ಷಿಯೋಪಾದಿಯಲ್ಲಿ ನಾವಿಬ್ಬರೇ ಹಾಡೋಣ, ಹರ ಸೆಂದು ನೀನು ನನ್ನನ್ನು ಕೇಳಿಕೊಂಡಾಗ, ನಾನು ಅಡ್ಡ ಬಿದ್ದು ನಿನ್ನ ಕ್ಷಮಾಪಣೆ ಯನ್ನು ಕೇಳಿಕೊಳ್ಳುತ್ತೇನೆ. ಹಾಗೇ ನಾವು ಅಲ್ಲಿ ವಾಸಮಾಡುತ್ತಾ, ದೇವರ ಧ್ಯಾನಮಾಡುತ್ತಾ, ಹಾಡುತ್ತಾ, ಹಳೇ ಕಥೆಗಳನ್ನು ಹೇಳುತ್ತಾ, ಚಿತ್ರ ವಿಚಿತ ವಾದ ಚಿಟ್ಟೆಗಳನ್ನು ನೋಡಿ ನಗುತ್ತಾ, ಆಸ್ಥಾನದ ಸಮಾಚಾರವನ್ನು ಕುರಿತು ಬಡಜನರು ಮಾತನಾಡಿಕೊಳ್ಳುವುದನ್ನೂ ಕೇಳುತ್ತಾ, ಯಾರು ಸೋಲುತಾರೆ ಯಾರು ಗೆಲ್ಲುತಾರೋ ಯಾರು ದಯಕ್ಕೆ ಪಾತ್ರರಾಗುತ್ತಾರೋ ಯಾರು ಆಗ್ರ ಹಕ್ಕೆ ಪಾತ್ರರಾಗಿರುತ್ತಾರೋ ಅವರುಗಳ ಸಂಗಡ ಹರಟೇ ಬಡಿಯುತ್ತಾ, ತಾವು ದೇವರಿಂದ ನೇಮಕವಾದ ಬೇಹುಗಾರರೋ ಎನ್ನುವಹಾಗೆ ಅನೇಕ ರಹಸ್ಯಗಳು ನಮಗೆ ತಿಳಿಯುವುದೆಂದು ನಟಿಸುತ್ತಾ, ಶುಕ್ಲ ಪಕ್ಷ ಕೃಪಕ್ಷಕ್ಕೆ ಗುಣದಲ್ಲಿ ವ್ಯತ್ಯಾಸವಾಗುವ ದೊಡ್ಡವರ ಕಡೇಗುಂಪಿನ ಜನರಾಗಿರುತ್ತಾ, ಈ ಕಾರಾಗೃಹ ದಲ್ಲಿದ್ದುಕೊಂಡು ಕಾಲಕ್ಷೇಪ ಮಾಡೋಣ. ಕುಮ೦ತ್ರ-ಅವರನ್ನು ಕರೆದುಕೊಂಡು ಹೋಗಿ, ದೊರೆ–ಅಮ್ಮ ಇಂದುಕಲಾ, ಇಂಥಾ ಆತ್ಮದಂಡನೆಗೆ ದೇವರುಸಹಿತ ಮೆಚ್ಚು ವನು. ನೀನು ಸಿಕ್ಕಿದೆಯ ? ನಮ್ಮಿಬ್ಬರನ್ನು ಅಗಲಿಸುವುದಕ್ಕೆ ಯಾರಿಂದಲೂ ಆಗುವುದಿಲ್ಲ, ನಿನ್ನ ಕಣ್ಣನ್ನು ಒರೆಸಿಕೊಳ್ಳಮ್ಮ, ನಾವು ದುಃಖಪಡುವಂತೆ