೧o ೩ನೇ ಪ್ರಕರಣ.] ಹೇಮಚಂದ್ರ ರಾಜ ಪಿಲಾಸ. ಅವರು ಮಾಡುವುದಕ್ಕೆ ಮುಂಚೆ, ಹೆದ್ದಾರಿಯು ಅವರನ್ನು ಮಾಂಸಚರ್ಮ ಸಹಿತವಾಗಿ ನುಂಗಿಕೊಳ್ಳುವುದು. ಮೊದಲು ಅವರನ್ನು ಅನ್ನವಿಲ್ಲದೆ ಕೆಡವೋಣ ; ಬಾ, (ಧೂರ, ಇಂದುಕಲೆ, ಪಹರೆಯವರು, ನಿಮ್ಮ ಮಣ.) ಕುಮಂತ ಇತ್ತ ಬಾರೆ, ಸೇನಾಪತಿ ; ಇಲ್ಲಿ ಕೇಳು ; (ಒಂದು ಕಾಗದವನ್ನು ಕೊಡುತಾ) ಈ ಲೇಖನವನ್ನು ಹಿಡಿ, ಹೋಗು ಅವರ ಹಿಂದೆಯೇ ಕಾರಾಗೃಹ ದೊಳಕ್ಕೆ ಹೋಗು. ನಿನಗೆ ಒಂದು ದರ್ಜೆ ಹೆಚ್ಚಿಸಿದ್ದೇನೆ. ಇದರಲ್ಲಿ ಹೇಳಿ ರುವವರೆ ನೀನು ನಡೆದುಕೊಂಡರೆ, ಅಪರಿಮಿತವಾದ ಐಶ್ವರವನ್ನು ಹೊಂದು ವುದಕ್ಕೆ ದಾರಿಯನ್ನು ಮಾಡಿಕೊಳ್ಳುತ್ತಿದೆ. ಒಂದು ಮಾತನ್ನು ನೀನು ಮನಸ್ಸಿನಲ್ಲಿಡು, ಜನರು ಕಾಲಾನುಸಾರವಾಗಿ ನಡೆದುಕೊಳ್ಳುತ್ತಾರೆ. ಮೃದು ಹೃದಯನಾಗಿರತಕ್ಕದ್ದು ಕತ್ತಿ ಹಿಡಿದವನಿಗೆ ತಕ್ಕದ್ದಲ್ಲ. ನೀನು ಮಾಡತಕ್ಕೆ ಮಹಾಕಾರಕ್ಕೆ ಅಡ್ಡಿಯೇನೂ ಇಲ್ಲ. ಈ ಕೆಲಸವನ್ನು ನಾನು ಮಾಡುತ್ತೇನೆ ಎನ್ನು, ಇಲ್ಲ ಇತರ ವಿಧದಲ್ಲಿ ನೀನು ಬದುಕುವ ಮಾರ್ಗವನ್ನು ನೋಡಿಕೊ. ಸೇನಾ.-ಬುದ್ದಿ ಅಪ್ಪಣೇಪ್ರಕಾರ ನಾನು ಮಾಡುತ್ತೇನೆ. ಕುಮಂತ). ಅದರಲ್ಲಿ ಉದ್ಯುಕ್ತನಾಗು, ನೀನು ಅದನ್ನು ನೆರವೇರಿಸಿದಮೇಲೆ ನಿನ್ನ ಅದೃಷ್ಟ್ಯ ಪ್ರಕಾಶವಾಯಿತೆಂದು ತಿಳಿ, ನೋಡಿಕೊ ; ನಾನು ನಿಷ್ಕರ್ಷೆ ಮಾಡಿರುವ ಪ್ರಕಾರವೇ ಕೂಡಲೆ ಜರುಗಿಸು, ಸೇನಾ-ಗಾಡಿ ಎಳೆದುಕೊಂಡು ಹೋಗಲಾರೆ, ಬಣಕಲರಾಗಿ ಮುಕ್ಕಲಾರೆ. ಇಷ್ಟು ಹೊರತು ಪುರುಷಮಾಡತಕ್ಕ ಕೆಲಸವಾಗಿದ್ದರೆ ಅದನ್ನು ನಾನು ಮಾಡುತ್ತೇನೆ. (ನಿಮ್ಮ ಮಣ.) ಪ್ರವೇಶ.-ಭದನಾಥ ನಾಗವೇಣಿ, ವಿಷಜೆ, ವೀರಭಟರು. ಭದ್ರಸ್ವಾಮಿ, ನಿಮ್ಮ ತಂದೆಯ ಪರಾಕ್ರಮವನ್ನು ನೀವು ಈದಿನ ತೋರಿಸಿದಿರಿ, ಮಲಕ್ಷ್ಮಿಯ ಕಟಾಕ್ಷದಿಂದ ನಿಮ್ಮ ಪ್ರಯತ್ನ ಸಫಲವಾಯಿತು. ಈ ದಿನದ ಯುದ್ಧದಲ್ಲಿ ಪ್ರತಿಕಕ್ಷಿಗಳಾಗಿದ್ದವರನ್ನು ಕೈಸೆರೆಹಿಡಿದಿರಿ. ಆವರ ಪದವಿಯ ನಮ್ಮ ಕ್ಷೇಮವೂ ಎರಡೂ ಸಮನಾಗಿ ಸೇರಿ ನಿಶ್ಚಯಿಸಬಹುದಾದಂಥಾ ರೀತಿಯಲ್ಲಿ ನಾವು ಅವರಿಗೆ ಉಪಚಾರವನ್ನು ಮಾಡಬೇಕಾಗುತಲಿದೆಯಾದಕಾರಣ, ಅವ ರನ್ನು ನೀವು ಕರೆತರಬೇಕು, ಕುಮ೦ತ ).ಸ್ವಾಮಿ, ವೃದ್ಧರಾಗಿಯೂ ಅತಿ ದೀನರಾಗಿಯೂ ಇರುವ ಧೋರೆಯನ್ನು ಸ್ವಲ್ಪ ಕಟ್ಟಿನಲ್ಲಿಟ್ಟು ಕಾವಲಿನವರನ್ನು ನೇಮಿಸುವುದು ಯುಕ್ತವೆಂದು ನನಗೆ ತೋರಿತು, ಅವರ ವಾರ್ಧಿಕ್ಯ ಸ್ಥಿತಿಯಲ್ಲಿ ಒಂದು ವಿಚಿತ್ರವಾದ ಪ್ರಭಾವವಿದೆ ;
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.