೧೧೦ ಹೇಮಚಂದ್ರರಾಜ ವಿಲಾಸ Hನೇ ಅಂಕ. ಅವರ ಪದವಿಯಲ್ಲಿ ಅದು ಇನ್ನೂ ಹೆಚ್ಚಾಗಿದೆ. ಅವರ ವಯಸ್ಸು ಅವರ ಪದವಿ, ಎರಡೂ ಸೇರಿ ಅಲ್ಪಜನರ ಹೃದಯವನ್ನು ಕಿತ್ತು ಅವರಕಡೆಗೆ ಸೆಳೆದುಕೊಳ್ಳು ವವು ; ನಮ್ಮ ಸೇನೆಯ ಭರ್ಜಿಗಳು ಅಧಿಕಾರಿಗಳಾದ ನಮ್ಮ ಕಂಣು ಗಳನ್ನೇ ಚುಚ್ಚಲು ತಿರುಗಿಸಲ್ಪಟ್ಟವು. ರಾಣಿಯವರನ್ನೂ ಅವರ ಸಂಗ ಡಲೇ ಕಳುಹಿಸಿದೆ. ಮೇಲೆ ಹೇಳಿದ ಕಾರಣವೇ ಇದಕ್ಕೂ ಸಲ್ಲುವುದು, ನಾಳ ಯಾಗಲಿ, ಇಲ್ಲ ಮುಂದಕ್ಕೆ ಯಾವಾಗಾಗಲಿ ತಾವು ನ್ಯಾಯಸ್ಥಾನವನ್ನು ಏರ್ಪ ಡಿಸುವ ಕಡೆಗೆ ಅವರು ಬರಲು ಸಿದ್ಧವಾಗಿದ್ದಾರೆ. ಈ ಹೊತ್ತಿನಲ್ಲಿ ಶ್ರಮ ದಿಂದ ಬೆವರೂ ಘಾಯದಿಂದ ರಕ್ತ ಸುರಿಯುತ್ತಿವೆ. ಮಿತ್ರರು ಮಿತ್ರರನ್ನು ಕಳೆದುಕೊಂಡಿದ್ದಾರೆ. ನ್ಯಾಯವಾದ ಕದನದ ವೇಗಕ್ಕೆ ಗುರಿಯಾಗಿರತಕ್ಕವರು ಅದನ್ನು ಬಲ್ಲಡಿಯಲ್ಲಿ ರೂಪಿಸುವರು. ಇಂದುಕಲೆ ಮತ್ತು ಆಕೆಯ ತಂದೆ ಯ ವಿಷಯವಾಗಿ ಮಾತನಾಡಬೇಕಾದರೆ ಇದಕ್ಕಿಂತಲೂ ಯೋಗ್ಯವಾದ ಬೇರೇ ಸ್ಥಳವಾಗಬೇಕು, ಭದ ಅಯ್ಯ ತಾಳು, ಈ ಸಮರದಲ್ಲಿ ನೀನೂ ಒಬ್ಬ ಸಾಧಾರಣ ಮನುಷ್ಯನೇ ಹೊರತು ನಮಗೆ ಸಮಾನಾಧಿಕಾರಿಯೆಂದು ಭಾವಿಸುವುದಿಲ್ಲ. ವಿಷಜೆ. ಆತನನ್ನು ನೀವು ಭಾವಿಸತಕ್ಕ ರೀತಿಯು ನಮ್ಮ ಆತ್ಮಕ್ಕೆ ಒಳಗಾಗಿದೆ. ಭಾವಾಜಿ, ನೀವು ಇಷ್ಟು ದೂರ ಮಾತನಾಡುವುದಕ್ಕೆ ಮುಂಚೆ ನಮ್ಮ ಅಭಿಪ್ರಾ ಯವನ್ನು ತಿಳಿದುಕೊಂಡಿದ್ದರಾಗಿತ್ತು. ಇವರು ನಮ್ಮ ಸೇನೆಗೆ ಅಧ್ಯಕ್ಷರಾಗಿ ದ್ದರು ; ನಮಗೂ ನಮ್ಮ ಅಧಿಕಾರಕ್ಕೂ ಪ್ರತಿನಿಧಿಯಾಗಿ ನೇಮಿಸಲ್ಪಟ್ಟಿದ್ದರು. ಹೀಗಿದ್ದದ್ದರಿಂದ ಇವರು ನಿಮಗೆ ಸಮಾನರೆಂದು ಕರೆಯುವುದಕ್ಕೆ ಸಾಕಾಗಿದೆ. ನಾಗ.ಅಷ್ಟು ಬಿಸಿಬಿಸಿಯಾಗಿ ಮಾತಾಡಬೇಡಿ ; ಆತನಿಗಿರುವ ಸ್ವಸಾಮರ್ಥ್ಯದಿಂ ದಲೇ ನೀನು ಕೊಡುವ ಬಿರುದಾವಳಿಗಿಂತಲೂ ಎಷ್ಟೋ ಅಧಿಕವಾಗಿ ಪ್ರಕಾಶಿ ಸುತ್ತಿದಾನೆ. ವಿಗ್ರಜೆ.-ನನ್ನ ಸ್ಥಾನದಲ್ಲಿ ನಿಂತು, ನನ್ನಿಂದ ಅಧಿಕಾರವನ್ನು ಹೊಂದಿ, ಅತ್ಯುತ್ತ ಮರಿಗೆ ಸಮಾನರಾಗಿದ್ದಾರೆ. ನಾಗ ನಿನ್ನ ಅಂತರಂಗದ ಪ್ರೇಮಕ್ಕೆ ಆತ ಪಾತ್ರನಾಗತಕ್ಕದ್ದು ಅವರಿಗೆ ಉತ್ತಮ. ವಾದ ಸ್ಥಿತಿ ಏಪ್ರಜೆ.ಅನೇಕವೇಳೆ ಹಾಸ್ಯಗಾರರು ಕಾಲಜ್ಞಾನಿಗಳಾಗಿ ಪರಿಣಮಿಸುವದುಂಟು. ನಾಗ ಓಹೋ, ಹಾಗೆ ಕಾಣಿಸಿದ ಕಂಣು ಮೂಲಗಷ್ಟೇ ಸರಿ. ವಿಸಜೆ-ಅವ್ವ, ನನಗೆ ಅಲಸಿಗೆಯಾಗಿದೆ. ಇಲ್ಲದಿದ್ದರೆ, ನನ್ನ ಹೊಟ್ಟೆಯಲ್ಲಿ ತುಂಬಿ ಪರಿಪೂರ್ಣವಾಗಿರುವ ಅಭಿಪ್ರಾಯದಿಂದ ತಕ್ಕ ಉತ್ತರ ಕೊಡುತ್ತಾ ಇದ್ದೆ.
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.