ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧8 ಹೇಮುಚಂದ ರಾಜ ವಿಲಾಸ. [4ನೇ ಅಂಕ. ಬಂದು ಸ್ವಲ್ಪ ಹೊಳೆದಹಾಗಾಯಿತೆ ಹೊರತು ನನ್ನನ್ನು ಸೋಕಲು ಕೂಡ ಇಲ್ಲ. ಆ ಅನೃತವು ಎಂದೆಂದಿಗೂ ಇರಬೇಕಾದ ಸ್ಥಳವನ್ನು ನನ್ನ ಕತ್ತಿಯ ಮೊನೆಯು ಈ ಕ್ಷಣದಲ್ಲಿ ತೋರಿಸುವುದು, ತುರಿಯಾಗಲಿ (ತುರಿಹಿಡಿಯುವರು ; ಅವರಿ ಬ್ಬರೂ ಕಾಳಗವಾಡುತಾರೆ, ಕುಮಂತ್ರ ಬೀಳತಾನೆ.) ಭದ್ರ). ಪ್ರಾಣವನ್ನು ತೆಗೆಯದೆ ಬಿಟ್ಟುಬಿಡು, ಬಿಟ್ಟುಬಿಡು. ನಾಗ-ಇದೆಲ್ಲಾ ಕಾಪಟ್ಯ, ಕುಮಂತ, ಅಜ್ಞಾತಕುಲಗೋತ್ರನಾದ ಎದುರಾಳಿನ ದೋ ಮಾರೋಪಣೆಗೆ ನೀನು ಉತ್ತರಕೊಡಬೇಕಾದ್ದೇನೂ ಇಲ್ಲ. ನಿನ್ನನ್ನು ಜೈಸಲಿಲ್ಲ. ನಂಬಿಸಿ ಮೋಸಮಾಡಿದರು, ಭದ ಎಲೆ ತಾಟಕಿ, ನಿನ್ನ ಬಾಯಿ ಮುಚ್ಚು: ಇಲ್ಲದಿದ್ದರೆ, ಈ ಕಾಗದದಿಂದ ಅದನ್ನು ಮುಚ್ಚಿಯೇನು ಹಿಡಿಯಲಾ, ನಿನ್ನ ಹೆಸರಿನ ಅರ್ಥಕ್ಕಿಂತಲೂ ಹೀನ ವಾದ ಗುಣವುಳ್ಳವನೆ, ನಿನ್ನ ದುರ್ಮಾರ್ಗದ ಚರಿತ್ರೆಯನ್ನು ನೀನೇ ಓದು. ಎಲೆ ಹೆಂಗಸೆ, ಹರಿಯಕೂಡದು. ನೀನೂ ಈ ವಿಷಯವನ್ನು ಬಲ್ಲೆ ಎಂದು ನನಗೆ ತೋರುವುದು, (ಕುಮಂತ್ರನಕೈಗೆ ಕಾಗದವನ್ನು ಕೊಡುವನು.) ನಾಗ ನಾನು ಕಂಡಿದ್ದರೇನು ? ರಾಜ್ಯಕ್ಕೆ ನಾನು ರಾಣಿ, ನ್ಯಾಯವೆಲ್ಲಾ ನಾನೇ ವಿಧಾಯಿಸಿದ್ದು, ನಿನಗೆ ಸಂಬಂಧವಿಲ್ಲ. ನಾನು ಮಾಡಿದ ಕೆಲಸಕ್ಕೆ ನನ್ನನ್ನು ಮಾತನಾಡಿಸುವವರು ಯಾರಿದಾರೆ ? ಭದ ಹೋ ! ಏನು ಆಸುರವಾಗಿದೆ ! ಈ ಕಾಗದದ ಸಂಗತಿಯನ್ನು ನೀನು ಬಲ್ಲೆಯ ? ನಾಗ-ನಾನು ಕಂಡದ್ದನ್ನು ನೀನೇನುಹೇಳುವುದು ? (ನಿಮ್ಮ ವಣ.) ಭ. ..ಅವಳ ಹಿಂದೆ ಹೋಗಿ, ನಿರಾಶೆಯಾಗಿ ಹೋಗುತಾ ಇದಾಳೆ. ಸ್ಪಲ್ಪ ಕದ್ದಿ ನಲ್ಲಿಡಿ. ಕುಮಂತ -ನೀನು ನನ್ನಲ್ಲಿ ಆರೋಪಿಸಿದ್ದನ್ನೆಲ್ಲಾ ನಾನು ಮಾಡಿದೆ. ಅಷ್ಟೇ ಅಲ್ಲ, ಇನ್ನೂ ಎಷ್ಟೋ ಮಾಡಿದ್ದೇನೆ. ಅದೆಲ್ಲಾ ಕಾಲಕ್ರಮೇಣ ಗೊತ್ತಾಗುವುದು, ಅದೂ ಕಳವು Jಯಿತು, ನಾನೂ ಕಳೆದುಹೋಗುತ್ತೇನೆ. ಇದು ಹಾಗಿರಲಿ, ನನ್ನನ್ನು ಈ ಗತಿಗೆ ತಂದಿಟ್ಟೆಯಲ್ಲಾ, ನೀನು ಯಾರು ? ಹೇಳು. ನೀನು ಮನೆ ತನಸ್ಥನಾದರೆ ನಿನ್ನನ್ನು ಕ್ಷಮಿಸಿಬಿಡತೇನೆ. ಶಕ-ಧರ್ಮಗುಣವು ನಮ್ಮಿಬ್ಬರಿಗೂ ಸಮಸಮನಾಗಿರಲಿ. ಮನೆತನದಲ್ಲಿ ನಿನ ಗಿಂತಲೂ ನಾನು ಕಡಮೆಯಾದವನಲ್ಲ. ನಾನು ನಿನಗಿಂತಲೂ ಹೆಚ್ಚಾಗಿದ್ದರೆ, ನೀನು ನನಗೆ ಅಷ್ಟೂ ಅಷ್ಟು ಹೆಚ್ಚಾಗಿ ವಿಪತ್ತನ್ನು ತಂದಿಟ್ಟೆ. ನನ್ನ ಹೆಸರು ಶನಿ