ಆನೆ ಪ್ರಕರಣ.] ಹೇಮಚಂದ)ರಾಜ ಪಿಲಾಸ ೧೧೩ ವಂದಿ-ಅಯ್ಯ, ನೀನು ಯಾರು ? ನಿನ್ನ ಹೆಸರೇನು ? ನಿನ್ನ ವಂಶ ಯಾವುದು ? ಕರೆ ದಕೂಡಲೆ ಬರುವುದಕ್ಕೆ ನಿಮಿತ್ತವೇನು ? ಕುಕ್ಕ-ಅಯ್ಯ, ಕೇಳು, ನನ್ನ ಹೆಸರು ಹೋಯಿತು. ದ್ರೋಹದ ತೀಕ್ಷ್ಮವಾದ ಹಲ್ಲು ಅದನ್ನು ಕಡಿದು ತಿಂದು ಬಿಟ್ಟಿತೆ. ಆದಾಗ್ಯೂ ನಾನು ಯಾರಮೇಲೆ ಕಾದಬೇಕೆಂದು ಬಂದಿದೇನೋ ಅಂಥಾ ಎದುರಾಳಿಗಿಂತಲೂ ಉತ್ತಮವಾದ ವಂಕ ಉಳ್ಳವನು, ನಾನು, ಭದ ).ಅಂಥಾ ಎದುರಾಳಿ ಯಾರು ? ಕುಕ್ಷ-ದುಃಖಸಾರರ ಮಗ ಕುಮಂತ್ರನೆನ್ನಿಸಿಕೊಂಡಿರುವವನು ಯಾರು ? ಕುವಂತ )-ಅವನೇ ಇವ ; ಅವನಿಗೆ ಏನು ಹೇಳುತೀಯೆ ? ಶುಕೃನಿನ್ನ ಕತ್ತಿ ಹಿರಿದುಕೊ, ನಿನಗೆ ನಿಷ್ಕಲ್ಮಶವಾದ ಹೃದಯವಿದ್ದು ಅದಕ್ಕೆ ನಾನು ಬೇದವನ್ನುಂಟುಮಾಡಿದರೆ, ನಿನ್ನ ಆಯುಧವಾದರೂ ನಿನ್ನನ್ನು ಕಾಪಾ ಡುವಹಾಗೆ ನೀನು ಸಿದ್ಧನಾಗು. ಇಗೋ ನನ್ನಾ ಯುಧ, ಇದು ನನ್ನ ವೃತ್ತಿಗೂ ನನ್ನ ಮಾನಕ್ಕೂ, ನನ್ನ ಪ್ರತಿಜ್ಞೆಗೂ ಮಾನ್ಯವಾಗಿದೆ. ನಿನ್ನ ಶಕ್ತಿ, ಯವನ, ಪದವಿ, ನಿನಗಾದ ವಿಜಯ, ಹೊಸದಾಗಿ ಪ್ರಾಪ್ತವಾದ ಭಾಗ್ಯ, ನಿನ್ನ ಪರಾಕ್ರಮ, ಇದು ಯಾವುದು ಇದ್ದರೂ ಲಕ್ಷ್ಯಮಾಡತಕ್ಕವನಲ್ಲ ; ನಾನು ನಿನ್ನನ್ನು ದ್ರೋಹಿ ಎಂದು ಕರೆಯುವುದೇ ಸಿದ್ದ : ದೈವ ದ್ರೋಹಿ, ಪಿತೃದ್ರೋಹಿ, ಭಾತೃದ್ರೋಹಿ, ಗುಣಶಾಲಿಯಾದ ಈ ರಾಜಕುಮಾರನಿಗೆ ದ್ರೋಹಿ, ನಿನ್ನ ತಲೇಲಿರುವ ಕೂದಲಿನ ಕೊನೆಯಿಂದ ಹಿಡಿದು, ನಿನ್ನ ಕಾಲು, ಕಾಲಕೆಳಗಿರುವ ಧೂಳಿನ ವರಿಗೂ ವಿಷಭರಿತನಾದ ದ್ರೋಹಿ. ಹಾಗೆ ಅಲ್ಲ ಎಂದು ಹೇಳು, ನೀನು ಸುಳ್ಳು ಹೇಳುತಿಯೆಂದು ಯಾವ ನಿನ್ನ ಹೃದಯಕ್ಕೆ ಕೂಲವಾಗಿರುವಂತೆ ನಾನು ಸಾಧಿಸುತೇನೋ ಅಂಥಾ ಹೃದಯದಮೇಲೆ ನನ್ನ ಖಡ್ಗ, ಈ ಬಾಹುಬಲ, ನನ್ನ ಪರಾಕ್ರಮ, ಇವುಗಳೆಲ್ಲವನ್ನೂ ಈಕ್ಷಣವೇ ತೋರಿಸುತ್ತೇನೆ. ಕುವಂತ) - ಅಯ್ಯ, ವಿವೇಕವಾಗಿ ವಿಚಾರಮಾಡಿದರೆ, ನಿನ್ನ ಹೆಸರೇನೆಂದು ಕೇಳ ಬೇಕು. ಆದರೆ ನಿನ್ನ ಬಹಿಶ್ಚರವೆಲ್ಲಾ ಲಕ್ಷಣವಾಗಿ ಪರಾಕ್ರಮವನ್ನು ಸೂಚಿ ಸುತ್ತಾ ನಿನ್ನ ನಾಲಗೆಯು ಏನೋ ತಕ್ಕಮಟ್ಟಗಿರುವ ನಿನ್ನ ಕುಲವನ್ನು ಹೇಳುತ್ತಾ ಇರುವುದಾದಕಾರಣ, ತೊಂದರೆ ಇಲ್ಲದೆ ಈ ವಿಷಯವನ್ನು ನಾನು ಇನ್ನೂ ನಿಧಾನಿಸತಕ್ಕದ್ದು ಧರ್ಮ ; ಆದಾಗ್ಯೂ, ನೀನು ಆಡಿದ್ದನ್ನೆಲ್ಲಾ ತುಚ್ಛ ವಾಗಿ ಕಂಡು ಧಿಕ್ಕಾರಮಾಡುವೆನು, ನನ್ನ ಮೇಲೆ ನೀನು ಹಾಕಿದ ರಾಜ ಹದ ಪಾತಕವನ್ನು ನಿನ್ನ ಮೇಲೆ ನಾನು ಚಿಮ್ಮುತ್ತೇನೆ. ಘೋರವಾದ ಅನೃತ ದಿಂದ ನಿನ್ನ ಹೃದಯವನ್ನು ಮುಚ್ಚುತ್ತೇನೆ. ಈ ನಿನ್ನ ಹಾಳಸುಳ್ಳಾ ಮುಂದೆ
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೨೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.