ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YL ಏಾಗೂ ಷಣ, ಇಲ್ಲವೋ ? ಇದ್ದರೆ ನಿಮ್ಮ ಕುಲಸ್ವಾಮಿನಿಯಾದ ಕಲ್ಯಾಣೀದೇವಿಯ ಆಣೆಯನ್ನು ತಗೆದುಕೊಳ್ಳಿರಿ. ಭೀಮಸಿಂಹನು ಆಶ್ಚರ್ಯದಿಂದ ಮಾತನಾಡಿದನು, ಯಾತಕ್ಕೊಸ್ಕರವಾಗಿ ನಾನು ಆಣೆಯನ್ನು ತೆಗೆದುಕೊಳ್ಳಬೇಕು. ” “ ನಾನು ಕರುಣಸಿಂಹನ ಜೀವಕ್ಕೆ ಯತ್ನಿಂಚಿತ್ತಾದರೂ ಅಪಾಯವನ್ನು ಮಾಡು ವುದಿಲ್ಲ 'ವೆಂದು ಆಣೆಯನ್ನು ತೆಗೆದುಕೊಳ್ಳಿರಿ. ಭೀಮಸಿಂಹನು ಒಮ್ಮೆಲೆ ಉಚ್ಚಸ್ವರದಿಂದ ಮಾತನಾಡಿದನು. “ ಕರುಣಸಿಂಹನು ಯಾವ ಉದ್ದೇಶದಿಂದ ದುರ್ಗದಲ್ಲಿ ಹೋಗಿರುವನೆಂಬುದು ತಿಳಿದ ಹೊರತು ನಾನು ಯಾವತರದ ಶಪಥವನ್ನು ಮಾಡುವುದಿಲ್ಲ. ” C ಕರುಣಸಿಂಹರು ಶತ್ರುಭಾವದಿಂದ ನಿಮ್ಮ ದುರ್ಗವನ್ನು ಪ್ರವೇಶಿಸಿಲ್ಲ. ಕರುಣ ಸಿಂಹರ ಪ್ರೀತಿಯು ನಿಮ್ಮ ಮಗಳಾದ ಲಲಿತೆಯ ಮೇಲೆ ಬಹಳವಿದೆಯೆಂಬುದರ ಕಲ್ಪ ನೆಯು ಕೂಡ ನಿಮಗೆ ಇರಲಿಕ್ಕಿಲ್ಲ. ಲಲಿತೆಯ ದರ್ಶನಕ್ಕೋಸ್ಕರವಾಗಿ ಈಗ ಅವರು ದುರ್ಗಕ್ಕೆ ಹೋಗಿದ್ದಾರೆ. ಇತ್ತ ನೀವಾದರೋ ಲಲಿತೆಯ ವಿವಾಹವನ್ನು ನಿಶಯಿಸಿ ಬಂದಿರುತ್ತೀರಿ. ಆದುದರಿಂದ ಸದ್ಯಕ್ಕೆ ನಾನು ಹೇಳಿದಂತೆ ಮಾಡಿರಿ. ಕರುಣಸಿಂಹರಿಗೆ ಯಾವತರದ ಪ್ರತಿಬಂಧವನ್ನು ಮಾಡದೆ ಅವರನ್ನು ದುರ್ಗದ ಹೊರಗೆ ಬಿಟ್ಟು ಬಿಡಿರಿ. ಆಮೇಲೆ ದುರ್ಜಯಸಿಂಹನೊಡನೆ ಲಲಿತೆಯ ವಿವಾಹವನ್ನು ಮಾಡಿಬಿಡಿರಿ. ಒಂದು ಕ್ಷಣಕಾಲ ಆಲೋಚಿಸಿ ಭೀಮಸಿಂಹನು ಪ್ರಶ್ನೆ ಮಾಡಿದನು ( ಕರುಣ ಸಿಂಹನಿಗೂ ನಿನಗೂ ಸಂಬಂಧವೇನು ? ” ( ಕರುಣಸಿಂಹರು ಮತ್ತಾರೂ ಅಲ್ಲ ! ನನ್ನ : ಲೇ ನನ್ನ ಪ್ರೇಮದ ಸಹಚರರು? ನಿಮ್ಮ ಮಗಳು ಅವರನ್ನು ಪ್ರೇಮಪಾಶದಿಂದ ಬಂಧಿ ಸದಿದ್ದರೆ ಅವರು ನನ್ನೊಡನೆ ವಿವಾಹವನ್ನು ಮಾಡಿಕೊಳ್ಳುತ್ತಿದ್ದರು. ” ಭೀಮಸಿಂಹನು ಕೆಲವು ಹೊತ್ತಿನವರೆಗೆ ಸುಮ್ಮನಿದ್ದು, ಆಮೇಲೆ ಹೀಗೆ ಮಾತಾಡಿ ದನು. ( ಒಳ್ಳೇದು. ನೀನು ಹೇಳಿದಂತೆಯೇ ಇಕೊ ನೋಡು, ' ನಾನು ಕರುಣ ಸಿಂಹನ ಜೀವಕ್ಕೆ ಯತ್ತಿಂಚಿತ್ತಾದರೂ ಅಪಾಯವನ್ನು ಮಾಡುವುದಿಲ್ಲ' ಎಂದು ಶಪಥ ವನ್ನು ಮಾಡುತ್ತೇನೆ. ಆದರೆ ನೀನು ಯಾರೆಂಬುದನ್ನು ನನಗೆ ನಿಜವಾಗಿ ಹೇಳು, ” “ ನಾನೇ? ನಾನು ಕೃಷ್ಣಾ ಕುಮಾರಿಯು, ” ಕಾಲಲ್ಲಿ ಸರ್ಪವನ್ನು ಕಂಡಂತೆ ಭೀಮಸಿಂಹನು ಒಮ್ಮೆಲೆ ಹಿಂದಕ್ಕೆ ಸರಿದನು. ಮತ್ತು ಕರ್ಕಶಶ್ವರದಿಂದ ಒದರಿ ಮಾತಾಡಿದನು. ( ಏನು ? ಕೃಷ್ಣಾ-ಕೃಷ್ಣಾ-ಕುಮಾ ಶರರು ! ಬಾಲ್ಯದಿಂದ