ಪ್ರೇಮಮಂದಿರ. ೪೬ ರಿಯೇ ? ಪಾಪಿಣೀ.ಚಾಂಡಾಲಿನೀ-ದೂರ ಹೋಗು ಇಲ್ಲಿಂದ ? ” ಕೃಷ್ಣಾ ಕುಮಾರಿಯ ಮುಖದಿಂದ ಹೊರಟ ಒಂದೇ ಒಂದು ಶಬ್ದದಿಂದ ಭೀಮ ಸಿಂಹನ ಸ್ಥಿತಿಯು ಚಮತ್ಕಾರಿಕವಾಯಿತು. ಆತನ ಪೂರ್ವಚರಿತವೆಲ್ಲ ಕ್ಷಣಾರ್ಧದಲ್ಲಿ ಆತನ ಕಣ್ಣೆದುರಿಗೆ ಕಟ್ಟಿದಂತಾಯಿತು. ಆ ವಿಮಲಸಿಂಹನೂ, ತಾನು ಆತನ ನಂಬು ಗೆಯ ಸೇನಾಪತಿಯಾಗಿದ್ದು ದೂ, ವಿಮಲಸಿಂಹನ ನೂತನಪತ್ನಿಯೂ, ಆ ಕಾಲದ ನಿಂದ್ಯವಾದ ತನ್ನ ಆಚರಣೆಯೂ ಆತನ ನೆನಪಿಗೆ ಬಂದುವು. ಈಗ ತನ್ನ ಎದುರಿನಲ್ಲಿ ನಿಂತುಕೊಂಡಿರುವ ಕೃಷ್ಣಾ ಕುಮಾರಿಯು ತಾನು ಮಾಡಿದ ಕೃಷ್ಣ ಪಾತಕದ ಮೂರ್ತಿ ಮಂತವಾದ ಇತಿಹಾಸವೆಂದೇ ಆತನಿಗೆ ಎನಿಸಹತ್ತಿತ್ತು ! ಮುಕ್ಕಾವಲಿಯ ಮಡುವಿನಲ್ಲಿ ವಿಮಲಸಿಂಹನೊಡನೆ ಕೃಷ್ಣಾ ಕುಮಾರಿಗೂ ಜಲಸಮಾಧಿಯ ಪ್ರಾಪ್ತವಾಗಿ ತನ್ನ ಪಾತ ಕಗಳ ಮೂರ್ತಿಮಂತವಾದ ಸ್ಮಾರಕವು ನಷ್ಟವಾಗಿ ಹೇಗಿದೆಯೆಂದು ಭೀಮಸಿಂಹನು ಇಂದಿನವರೆಗೂ ತಿಳಿದಿದ್ದನು. ಆದರೆ ಕೃಷ್ಣಯ ಒಂದೇ ಒಂದು ಶಬ್ದದಿಂದ ಆ ತಿಳಿವಳಿ ಕೆಯು ತಪ್ಪಾದುದೆಂದು ತಿಳಿದು ಬಂತು. ಆತನ ಹೃದಯವು ಬೆಂದುಬೆಂಡಾಗಹತ್ತಿತು. ಸ್ವಲ್ಪ ಹೊತ್ತಿನ ವರೆಗೆ ಆತನ ಮೈಮೇಲಿನ ಎಚ್ಚರ ತಪ್ಪಿ ಹೋಯಿತು. ! ತನ್ನ ಪಾವಸ್ಕೃತಿಚಿನ್ನವನ್ನು ಜಗತ್ತಿನೊಳಗಿಂದ ಇಲ್ಲದಂತೆ ಮಾಡಿಬಿಡಬೇಕೆಂಬ ಉದ್ದೇಶದಿಂದ ಭೀಮಸಿಂಹನು ಕ್ರೋಧೋನ್ಮತ್ತನಾಗಿ ಕೃಷ್ಣಾ ಕುಮಾರಿಯನ್ನು ನಿರೀಕ್ಷಿಸ ಹತ್ತಿದನು. ಆದರೆ ಅವಳು ಅಲಕ್ಷಿತ ರೀತಿಯಿಂದ ಆಗಲೇ ಮಾಯವಾಗಿ ಹೋಗಿದ್ದಳು! ದುರ್ಗಕ್ಕೆ ಹೋದ ಬಳಿಕ ಭೀಮಸಿಂಹನು ಮೊದಲು ಆ ಗುಪ್ತಪ್ರವೇಶದ್ವಾರದ ಹತ್ತರ ಬಂದನು. ಆ ದ್ವಾರವು ನಿತ್ಯದಂತೆ ಅರ್ಗಲಬದ್ದವಾಗಿತ್ತು; ಸರ್ವವ್ಯವಸ್ಥೆಯು ಯಥಾಸ್ಥಿತವಾಗಿದ್ದಂತೆ ಆತನಿಗೆ ತೋರಿತು. ಅಲ್ಲಿಯ ಪಹರೆಯವನು ಕುಳಿತಲ್ಲಿಯೇ ಸ್ವಸ್ಥವಾಗಿ ತೂಕಡಿಸುತ್ತ ನಿದ್ದೆ ಮಾಡುತ್ತಿದ್ದನು. ಆತನಿಗೊಂದು ಲಾಪ್ರಹಾರವನ್ನು ಕೊಟ್ಟು ಭೀಮಸಿಂಹನು ಮಾತನಾಡಿದನು. “ ನಿಮಕಹರಾಮ, ಪಾಜೀ! ಹೇಳು. ಈ ದಾರಿಯಿಂದ ನೀನು ಇಂದು ಯಾರನ್ನು ಒಳಗೆ ಬಿಟ್ಟೆ? ತಡೆ, ಬೆಳಗಾಯಿತಂದರೆ ಎದು ರಿನ ಗಿಡಕ್ಕೆ ನಿನ್ನನ್ನು ಗಲ್ಲಿಗೆ ಹಾಕಿಸುತ್ತೇನೆ! ಅಂದರೆ ಇಂತಹ ಕಪಟವರ್ತನವನ್ನು ನನ್ನೊಡನೆ ಮಾಡಬಾರದೆಂಬುದು ಎಲ್ಲರಿಗೂ ಗೊತ್ತಾಗುವುದು. ” ಪಹರೆಯವನು ಭೀತಿಯಿಂದ ಗದಗದ , ನಡುಗುತ್ತ ಮಾತನಾಡಿದನು. 14 ದೊರೆ ಗಳೇ, ನನ್ನ ಕಡೆಗೆ ಎಳ್ಳಷ್ಟು ಅಪರಾಧವಿಲ್ಲ. ನನಗಿಂತ ಮೊದಲಿನ ಪಾಳಿಯವನು ಮಾತ್ರ ತನ್ನ ಒಬ್ಬ ಸ್ನೇಹಿತನನ್ನು ದುರ್ಗದೊಳಗೆ ಕರೆದುಕೊಂಡು ಹೋದನು. ” • ಒಳ್ಳೇದು ನಾಳಿನ ದಿನ ನಿನ್ನೊಡನೆ ಅವನನ್ನೂ ಗಲ್ಲಿಗೆ ಹಾಕಿಸುತ್ತೇನೆ! ಭೀಮಸಿಂಹನು ಕರುಣಸಿಂಹನನ್ನು ಹುಡುಕುವುದಕ್ಕಾಗಿ ದುರ್ಗದಲ್ಲಿ ನಾಲ್ಕೂ ಕಡೆಗೆ ಜನರನ್ನು ಕಳುಹಿಸಿದನು. ಈ ಪ್ರಕಾರ ಎಲ್ಲ ವ್ಯವಸ್ಥೆಯನ್ನು ಮಾಡಿ ತನ್ನ ಮಂದಿರದ
ಪುಟ:ಪ್ರೇಮ ಮಂದಿರ.djvu/೫೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.