ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ. M ಬಿಟ್ಟು ಬಿಡಲಾ! ಸರ್ಪವನ್ನು ಕೆಣಕಿ ಹಾಗೆಯೇ ಬಿಡುವುದುಂಟೇ ? ಠಾಕುರರೇ, ಈ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇನು ? ”

  • ಸರತಾನಸಿಂಹನು ಕುಲದಿಂದ ರಜಪೂತರಲ್ಲಿ ಶ್ರೇಷ್ಠ ಪ್ರತಿಯವನಾಗಿದ್ದಿಲ್ಲ, ಆದರೆ ಪ್ರಚಂಡವಾದ ಸಂಪತ್ತಿನ ಮೂಲಕ ಆತನು ಹೆಸರಿಗೆ ಬಂದಿದ್ದನು. ದುರ್ಜಯಸಿಂಹನು ಆತನ ಒಬ್ಬನೇ ಒಬ್ಬ ಮಗನು. ಸರತಾನಸಿಂಹನ ಬಳಿಯಲ್ಲಿ ಅಪರಿಮಿತವಾದ ಐಶ್ವ ರ್ಯವಿದ್ದರೂ ಅವನಿಗೊಂದು ಆಶೆಯು ಉತ್ಪನ್ನವಾಗಿತ್ತು. ಭೀಮಸಿಂಹನೊಡನೆ ಶರೀರಸಂಬಂಧವನ್ನು ಮಾಡಿದರೆ ತನ್ನ ಕುಲದ ಪ್ರತಿಷ್ಟೆಯು ಬೆಳೆಯುವುದೆಂದು ಆತನು ತಿಳಿದುಕೊಂಡಿದ್ದನು. ಮತ್ತು ಈ ಸಮಯದಲ್ಲಿ ದುರ್ಗಾಧಿಪತಿಯಾದ ಭೀಮಸಿಂಹನಿಗೆ ಹಣದ ಅವಶ್ಯಕತೆಯು ಬಹಳವಿತ್ತು, ಭೀಮಸಿಂಹನು ಅನೇಕ ಜನ ಸಾವಕಾರರಲ್ಲಿ ಸಾಲವನ್ನು ಮಾಡಿದ್ದನು. ಸರತಾನಸಿಂಹನೊಡನೆ ಶರೀರಸಂಬಂಧವಾದರೆ ತಾನು ಸಾಲವೆಂಬ ಸಮುದ್ರವನ್ನು ಈಸಿ ಪಾರಾಗಬಹುದೆಂದು ಅವನು ತಿಳಿದುಕೊಂಡಿದ್ದನು. ಹೀಗೆ ಉಭಯತರಿಗೂ ಪರಸ್ಪರ ಶರೀರಸಂಬಂಧದ ಅಪೇಕ್ಷೆಯು ಅಧಿಕವಾಗಿತ್ತು. ಅಪೇಕ್ಷೆಯು ಫಲದ್ರೂಪವಾಗುವುದಕ್ಕೆ ಕರುಣಸಿಂಹನು ನಿಮ್ಮ ವಾದನು. ಆದುದರಿಂದ ತಮ್ಮ ಮಾರ್ಗವನ್ನು ನಿರಾಪದವಾಗಿ ಮಾಡಿಕೊಳ್ಳವುದಕ್ಕೋಸ್ಕರ ಯಾವದಾದ ರೊಂದು ಸುಷ್ಟ ದುಷ್ಟ ಉಪಾಯದಿಂದ ಅವರನ್ನು ನಾಶಮಾಡಿಬಿಡಬೇಕೆಂದು ಇಬ್ಬರೂ ಯೋಚಿಸುತ್ತಿದ್ದರು.

ಸ್ವಲ್ಪ ಹೊತ್ತು ಆಲೋಚಿಸಿ ಸರತಾನಸಿಂಹನು ಮಾತಾಡಿದನು. << ಕರುಣಸಿಂಹ ನನ್ನು ಹೇಗೆ ನಾಶಿಸಬೇಕೆಂಬುದನ್ನು ನಿಶ್ಚಯಿಸುವ ಮೊದಲು ಒಂದು ಮಾತಿನ ವಿಷಯ ವಾಗಿ ನೀವು ಅವಶ್ಯವಾಗಿ ಜಾಗರೂಕರಾಗಿರಬೇಕೆಂದು ನನ್ನ ಅಭಿಪ್ರಾಯವಿದೆ. " ( ಯಾವ ಮಾತಿನ ವಿಷಯವಾಗಿ ? ೨೨ < ದಿಲೀಪತಿಯು ಮುಂದೆ ನಮಗೆ ಯಾವ ತರದ ಆಕ್ಷೇಪಣೆಯನ್ನು ಮಾಡಲು ಆಸ್ಪದವಾಗದಂತೆ ಕರುಣಸಿಂಹನನ್ನು ಈಗ ಇಲ್ಲಿಗೆ ಕರೆಯಿಸಿ ಅವನಿಂದ ತಿಳಿದಷ್ಟು ವೃತ್ತಾಂತವನ್ನು ತಿಳಿದುಕೊಳ್ಳಬೇಕು, ಆತನು ಹೇಳುವ ಮಾತಿನಿಂದ ಮುಂದೆ ಹೇಗೆ ನಡೆಯಬೇಕೆಂಬುದನ್ನು ಆ ಮೇಲೆ ನಾವು ನಿಶ್ಚಯಿಸುವ, ಆತನನ್ನು ನಾಶಮಾಡುವ ಯುಕ್ತಿಯು ಸಹಜವಾಗಿಯೇ ತೋಚಿದರೆ ಒಳಿತೇ ಆಯಿತು.” ಭೀಮಸಿಂಹನಿಗೂ ಈ ವಿಚಾರವು ಮನಸ್ಸಿಗೆ ಬಂತು. ಆದುದರಿಂದ ಕರುಣಸಿಂಹ ನನ್ನು ತನ್ನ ಕಡೆಗೆ ಕರೆದುಕೊಂಡು ಬರುವಂತೆ ಆಗಲೇ ಆತನು ಸೇವಕರಿಗೆ ಆಜ್ಞಾಪಿಸಿ ದನು. ಕರುಣಸಿಂಹನನ್ನು ಸೆರೆಯಲ್ಲಿ ಸಿಕ್ಕವನೆಂಬಂತೆ ತಿಳದುಕೊಳ್ಳದೆ ರಾಜಕೀಯ ಅತಿಥಿಯೆಂದು ತಿಳಿದು ತಕ್ಕ ಆದರೋಪಚಾರವನ್ನು ಮಾಡಬೇಕೆಂದು ಭೀಮಸಿಂಹನು ಮೊದಲೇ ವ್ಯವಸ್ಥೆ ಮಾಡಿದ್ದನು.