ವಾಗ್ಯೂಷಣ, ↑ hh n # # # #f f +AYAP. ೧wwಳ ಕಡೆಗೆ ಹೊರಟಾಗ ಆತನಿಗೆ ಸೇನಾಪತಿಯು ಭೆಟ್ಟಿಯಾದನು. ಭೀಮಸಿಂಹನನ್ನು ಕಂಡ ಕೂಡಲೆ ಸಲಾಮು ಮಾಡಿ ಆತನು ಮಾತನಾಡಿದನು. (ಕರುಣಸಿಂಹನು ರಾಜಕುಮಾ ರಿಯ ಮಂದಿರದವರೆಗೂ ಹೋಗಲು ಸಮರ್ಥವಾಗಲಿಲ್ಲ. ದಾರಿಯಲ್ಲಿಯೇ ಆತನನ್ನು ಹಿಡಿದು ಗಣೇಶಮಂದಿರದಲ್ಲಿ ಬಂಧಿಸಿಟ್ಟಿದ್ದೇನೆ. ” ಸೇನಾಪತಿಯ ಬಾಯಿಂದ ಹೊರಟ ಶಬ್ದಗಳನ್ನು ಕೇಳಿ ಭೀಮಸಿಂಹನಿಗೆ ಅತ್ಯಾ ನಂದವಾಯಿತು, ಕರುಣಸಿಂಹನು ಬಂಧಿತನಾದುದರಿಂದ ಮುಂದೆ ಒದಗಬಹುದಾದ ಅನರ್ಥಗಳ ಮೂಲವೇ ದೂರವಾದ ಹಾಗಾಯಿತೆಂದು ತಿಳಿದು ಭೀಮಸಿಂಹನು ಸ್ವಸ್ಥ ನಾದನು, ಮತ್ತು ಸೇನಾಪತಿಯನ್ನು ಕುರಿತು ಮಾತನಾಡಿದನು, (( ಶಾಬಾಸ ಗಂಭೀರ ಸಿಂಹ! ಒಳ್ಳೇದು ಮಾಡಿದಿರಿ. ಆದರೆ ಕರುಣಸಿಂಹನು ಸರಕಾರೀ ಅತಿಥಿಯೆಂದು ತಿಳಿ ಯಿರಿ. ಆತನ ಆದರಾತಿಥ್ಯದಲ್ಲಿ ಯಾವ ತರದ ನ್ಯೂನತೆಯೂ ಉಂಟಾಗದಂತೆ ವ್ಯವ ಸ್ಥೆಯನ್ನಿಡಿರಿ.” ಏಳನೆಯ ಪರಿಚ್ಛೇದ. + ವಿಲಕ್ಷಣ ಕುಲಾಚಾರ, ಭೀಮಸಿಂಹನಿಗೆ ಆ ರಾತ್ರಿಯಲ್ಲಿ ನಿದ್ದೆ ಹತ್ತಲಿಲ್ಲ. ಸೂರ್ಯೋದಯವಾದೊಡನೆಯೇ ಆತನು ತನ್ನ ಭವಿಷ್ಯತ್ಕಾಲದ ಬೀಗನಾದ ಸರತಾನಸಿಂಹನಿಗೆ ಭೆಟ್ಟಿಯಾದನು. ಅರ ಮನೆಯೊಳಗಿನ ಒಂದು ಏಕಾಂತ ಸ್ಥಳದಲ್ಲಿ ಅವನನ್ನು ಕರೆದುಕೊಂಡು ಬಂದನು. ಖಿನ್ನ ಮುದ್ರೆಯಿಂದ ಭೀಮಸಿಂಹನು ಸರತಾನಸಿಂಹನನ್ನು ಕುರಿತು ಮಾತನಾಡಿ ದನು. (( ಠಾಕುರರೇ, ನಾನು ಅತ್ಯಂತ ಸಂಕಟದಲ್ಲಿ ಬಿದ್ದಿರುತ್ತೇನೆ. ಅದರೊಳಗಿಂದ ಸುಲಭವಾಗಿ ಹೇಗೆ ಪಾರಾಗಬೇಕೆಂಬ ವಿಷಯವಾಗಿ ತಮ್ಮ ಸಲಹೆಯನ್ನು ತೆಗೆದು ಕೊಳ್ಳಬೇಕೆಂದು ಇಂದು ತಮ್ಮನ್ನು ಇಲ್ಲಿಗೆ ಕರಕೊಂಡು ಬಂದಿದ್ದೇನೆ. ನಿನ್ನ ಕರುಣೆ ಸಿಂಹನನ್ನು ನನ್ನ ಸೈನಿಕರು ಹಿಡಿದು ಕಟ್ಟಿನಲ್ಲಿಟ್ಟಿರುವುದೇನೋ ನಿಜ, ಆದರೆ ಆತನಿಗೆ ಬಾಹ್ಯವಾಗಿ ಯಾವ ಶಿಕ್ಷೆಯನ್ನು ವಿಧಿಸುವುದೂ ಅಶಕ್ಯವಾಗಿದೆ. ಪ್ರತ್ಯಕ್ಷ ಅಕಬರ ಬಾದಶಹನೇ ಆತನ ಸಂರಕ್ಷಕನಿದ್ದು, ಅವನ ಪ್ರೀತಿಯ ಕರುಣಸಿಂಹನ ಮೇಲೆ ಬಹಳ ವಿದೆ. ಕರುಣಸಿಂಹನ ಜೀವಕ್ಕೆ ನಾನು ಅಪಾಯವನ್ನು ಮಾಡಿದನೆಂಬ ವಾರ್ತೆಯು ಅಕಬರನಿಗೆ ಗೊತ್ತಾದರೆ ಆತನು ನನ್ನನ್ನು ಸಮೂಲವಾಗಿ ನಾಶಮಾಡುವುದರಲ್ಲಿ ಸಂದೇ ಹವೇ ಇಲ್ಲ. ಕರುಣನನ್ನು ಹಾಗೆಯೇ ಬಿಟ್ಟು ಬಿಡುವುದೂ ನನ್ನ ಮನಸ್ಸಿಗೆ ಬರುವುದಿಲ್ಲ; ನನ್ನ ವೈರಿಯು ಇಷ್ಟೊಂದು ಸುಲಭವಾಗಿ ಕೈಯಲ್ಲಿ ಸಿಕ್ಕಿರಲು ಆತನನ್ನು ಹಾಗೆಯೇ
ಪುಟ:ಪ್ರೇಮ ಮಂದಿರ.djvu/೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.