ಯಾಜ್ಞವಲ್ಕ್ಯರು ಸಮರ್ಪಕ ಉತ್ತರಕೊಟ್ಟರು. ಆಗ ಉದ್ದಾಲಕನು ಯಾಜ್ಞ ವಲ್ಕ್ಯರನ್ನು ನಮಸ್ಕರಿಸಿ ಸುಮ್ಮನಾದನು. ಆಮೇಲೆ ಮಹಾಪಂಡಿತರಾದ ಶಾಕಲ್ಯ ಋಷಿಗಳು ವಾದಾರ್ಥವಾಗಿ ಮುಂದಕ್ಕೆ ಸರಿದರು. ಅವರು ಹಲವು ಪ್ರಶ್ನಗಳನ್ನು ಮಾಡುತ್ತ ಕಡೆಗೆ ಅಯೋಗ್ಯ ಪ್ರಶ್ನ ಮಾಡಲು, ಯಾಜ್ಞವಲ್ಕ್ಯರು--"ಎಲೈ ಶಾಕ ಲ್ಯನೇ, ಹೀಗೆ ಮಾರ್ಗಬಿಟ್ಟು ಪ್ರಶ್ನಮಾಡಬೇಡ, ನಿನ್ನ ಶಿರಚ್ಛೇದವಾದೀತು,” ಎಂದು ಹೇಳಿದರು; ಆದರೆ ಶಾಕಲ್ಯರು ಅದನ್ನು ಲೆಕ್ಕಿಸದೆ ಪುನಃ ಅದೇ ಪ್ರಶ್ನಮಾಡಿದರು. ಆಗ ಒಮ್ಮಿಂದೊಮ್ಮೆ ಶಾಕಲ್ಯರ ಶಿರಚ್ಛೇದವಾಯಿತು. ಅದನ್ನು ನೋಡಿ ಸಭಾಸದರೆ ಲ್ಲರೂ ಬೆದರಿ ಸುಮ್ಮನೆ ಕುಳಿತುಕೊಂಡರು. ಆಗ ಯಾಜ್ಞವಲ್ಕ್ಯರು ಯಾವತ್ತು ಋಷಿಗಳನ್ನು ವಂದಿಸಿ -- "ಸಭಾಸದರೇ , ಇನ್ನು ಏನಾದರೂ ಪ್ರಶ್ನಮಾಡುವದಿದ್ದರೆ ಭಯಪಡದೆ ಮಾಡಬೇಕು ; ಅಥವಾ ನಾನೇ ಯಾವದೊಂದು ಪ್ರಶ್ನಮಾಡಲೋ ” ಎಂದು ಕೇಳಲು , ದರ್ಭಗ್ರಂಥಿಯ ಭಯದಿಂದ ಯಾರೂ ಮಾತಾಡದೆ ಸುಮ್ಮನೆ ಕುಳಿ ತುಕೊಂಡರು. ಇದನ್ನರಿತು ಯಾಜ್ಞ ವಲ್ಕ್ಯರು ತಾವು ಒಂದು ಪ್ರಶ್ನಮಾಡಿ ಇದರ ಉತ್ತರ ಹೇಳಬೇಕೆಂದು ಕೇಳಿಕೊಂಡರು. ಅದಕ್ಕೆ ಋಷಿಗಳು--"ಇದರ ಉತ್ತರವು ನಮಗೆ ಗೊತ್ತಿಲ್ಲ , ನೀವೇ ಹೇಳಬೇಕು ” ಎಂದು ನುಡಿಯಲು , ಯಾಜ್ಞವಲ್ಕ್ಯರು ಉತ್ತರ ಹೇಳಿ ,ನಿಜವಾದ ಬ್ರಹ್ಮಜ್ಞರೇ ಈ ಮೃತಶಾಕಲ್ಯನನ್ನು ಬದುಕಿಸಬಲ್ಲರು, ಎಂದು ನುಡಿದರು . ಆಗ ಯಾವತ್ತು ಋಷಿಗಳು ಯಾಜ್ಞವಲ್ಕ್ಯರನ್ನು ವಿಜ್ಞಾಪಿ ಸಲು , ಅವರು ತಮ್ಮ ಶಾಂತವಾದ ಹಸ್ತಸ್ಪರ್ಶದಿಂದ ಶಾಕಲ್ಯಋಷಿಯನ್ನು ಬದುಕಿ ಸಿದರು ! ಆಗ ಯಾಜ್ಞವಲ್ಕ್ಯರು ಬ್ರಹ್ಮಜ್ಞರೆಂದು ಜಯಜಯಕಾರವಾಯಿತು. ಆ ಶಾಕಲ್ಯಋಷಿಗಳು ಯಾಜ್ಞವಲ್ಕ್ಯರನ್ನು ದೃಢವಾಗಿ ಅಪ್ಪಿಕೊಂಡು ಸಾಮಶ್ರವ ನಿಗೆ-- "ಆಕಳುಗಳನ್ನು ಒಯ್ಯಬೇಕೆಂ"ದು ಆದರದಿಂದ ಹೇಳಿದರು. ಮುಂದೆ ಜನಕ ಮಹಾರಾಜನು ಬ್ರಹ್ಮವಿದ್ವರಿಷ್ಠರಾದ ಯಾಜ್ಞವಲ್ಕ್ಯರಿಂದ ಬ್ರಹ್ಮಜ್ಞಾನವನ್ನು ಪಡೆದು ವಿದೇಹಜನಕನೆಂದು ಪ್ರಸಿದ್ಧನಾದನು.
೨ ನೆಯ ಪ್ರಕರಣ.
ನಿರ್ಮಲ ಹೃದಯಪ್ರಭಾವ.
ಜನಕಮಹಾರಾಜನು ನೆರಿಸಿದ ಮಹಾಸಭೆಯಲ್ಲಿ ಭಗವಾನ್ ಯಾಜವಲ್ಕ್ಯರೊ
ಡನೆ ಬೇರೆ ಬೇರೆ ಋಷಿವರ್ಯರು ಮಾಡಿದ ವಿವಾದವನ್ನು ನಾವು ಉಲ್ಲೇಖಿಸದಿರುವದನ್ನು ನೋಡಿ ವಾಚಕರು ನಮ್ಮ ಮೇಲೆ ಸಿಟ್ಟಾಗಬಾರದು; ಯಾಕಂದರೆ, ಭಗವತೀ ಕಾತ್ಯಾಯನಿಗೆ ಆಶ್ರಯಭೂತನಾಗಿರುವ ಮಹಾತ್ಮನ ಘನತರವಾದ ಯೋಗ್ಯತೆಯನ್ನು ತಿಳಿಸುವದಕ್ಕಾಗಿ ಮಾತ್ರ ನಾವು ಹಿಂದಿನ ಪ್ರಕರಣನ್ನು ಬರೆದಿರುವೆವು. ಸಾಮಾನ್ಯಜನ