ಈ ಪುಟವನ್ನು ಪ್ರಕಟಿಸಲಾಗಿದೆ
10

ಸಮಾಜದ ವಿಚಾರದ, ಹಾಗು ಆಚಾರದ ಅಳವಿನೊಳಗೆ ಬಾರದ ಗಹನವಾದ ವೇದಾಂ ತವಿಷಯದ ಚರ್ಚೆಯನ್ನು ಸುಮ್ಮನೆ ಬರೆಯುತ್ತ ಹೋಗಿ, ಜನರನ್ನು ಬೇಸರಗೊಳಿ ಸುವದು ನಮ್ಮ ಕೆಲಸವಲ್ಲ. ವೇದಾಂತಶ್ರವಣಕ್ಕೆ ಅನಧಿಕಾರಿಯಾದ್ದರಿಂದ ತಮ್ಮ ಪ್ರಿಯಪತ್ನಿಗೂ ಆ ವಿಷಯವನ್ನು ತಾವಾಗಿ ಉಪದೇಶಿಸುವ ಗೊಡವಿಗೆ ಭಗವಾನ್ ಯಾ ಜ್ಞವಲ್ಕ್ಯರೇ ಹೋಗದಿರುವಾಗ, ವೇದಾಂತದ ಅನುಭವವಿಲ್ಲದ ನಮ್ಮಂಥ ಪಾಮರರ ಪಾಡೇನು ? ಮಹಾತ್ಮರಾದ ಯಾಜ್ಞವಲ್ಕ್ಯರಿಗೆ ಕಾತ್ಯಾಯನೀ, ಮೈತ್ರೇಯಿ ಎಂಬ ಇಬ್ಬರು ಹೆಂಡಿರು. ಅವರಲ್ಲಿ ಮುಖ್ಯವಾಗಿ ಸದ್ಗುಣಸಂಪನ್ನೆಯೂ, ಕರ್ತವ್ಯದಕ್ಷಳೂ, ಪತಿಭಕ್ತಿಪರಾಯಣಳೂ, ಪುತ್ರವತ್ಸಲಳೂ ಮೇಲೆ ಯಾಜ್ಞವಲ್ಕ್ಯಪಾಣಿಗ್ರಹಣದಿಂದ ಆತ್ಮನಿಷ್ಠಳೂ ಆದ ಭಗವತೀ ಕಾತ್ಯಾಯನಿಯಂಥ ಭಗಿನೀವರ್ಗವೂ, ಮಾತೃವರ್ಗವೂ ನಮ್ಮ ಕನ್ನಡಸಮಾಜದಲ್ಲಿ ಉಂಟಾಗುವದು ಹಿತಕರವೆಂದು ನಮ್ಮ ಭಾವನೆಯಿರುವದ ರಿಂದ, ನಾವು ಈ ಪುಸ್ತಕಕ್ಕೆ ಭಗವತೀಕಾತ್ಯಾಯನೀಯೆಂದು ಹೆಸರಿಟ್ಟರುವೆವು; ಮತ್ತು ಸೀತಾ, ದ್ರೌಪದೀ ಮೊದಲಾದ ಪೌರಾಣಿಕಕಾಲದ ಸ್ತ್ರೀಯರ ಸಂಗ್ತಿಯಲ್ಲಿ ಕಣ್ಣು ಮು- ಚ್ಚಿಕೊಂಡು ಕುಳ್ಳಿರಿಸಬಹುದಾಗಿದ್ದ ಆ ಮಹಾತ್ಮಳ ಅನುಕರಣಮಾಡಬೇಕೆಂದು ಬುದ್ದಿ ಪೂರ್ವಕವಾಗಿ ನಾವು ನಮ್ಮ ಮಾತೃಭಗಿನೀವರ್ಗವನ್ನು ಪ್ರಾರ್ಥಿಸುವೆವು. ಭಗವತೀ- ಕಾತ್ಯಾಯನಿಯರಂಥ ಕರ್ತಾರರು ಲೋಕಕ್ಕೆ ಅನುಕರಣೀಯರೆಂತಲೂ, ಭಗವತೀ- ಮೈತ್ರೇಯಿಯರಂಥ ಬ್ರಹ್ಮವಾದಿಗಳು ಲೋಕಕ್ಕೆ ಪೂಜ್ಯರೆಂತಲೂ ತಿಳಿಯತಕ್ಕದ್ದು. ಬ್ರಾಹ್ಮಣರು ಪುಣ್ಯಾಹವಾಚನ ಕರ್ಮದಲ್ಲಿ "ಅರುಂಧತೀಪುರೋಗಾ ಏಕಪತ್ನ್ಯಃಪ್ರೀಯಂ ತಾಂ” ಎಂದು ಉಚ್ಚರಿಸುವದರ ಸಾಲಿನಲ್ಲಿಯೇ "ಭಗವತೀಕಾತ್ಯಾಯನೀ ಪ್ರೀಯತಾಂ” ಎಂದು ಉಚ್ಚರಿಸುವದರ ಮರ್ಮವನ್ನು ವಾಚಕರು ಅವಶ್ಯವಾಗಿ ವಿಚಾರಿಸತಕ್ಕದ್ದು ಇರಲಿ. ಇನ್ನು ಪ್ರಕೃತವಿಷಯವನ್ನು ಕೈಕೊಳ್ಳೋಣ.

ಪ್ರಾತಃಕಾಲದ ಸುಸಮಯವು. ಜನಕಮಹಾರಾಜನ ರಾಜಧಾನಿಯಾದ ಜನಕ

ಪುರದಬಳಿಯ ಗಹನಾರಣ್ಯ - ಅದೇ ಸೂರ್ಯೋದಯವಾಗಿದೆ. ಮಂದಮಾರುತನು ಸುಳ್ಳನೆ ಸುಳಿದು ಗಿಡಬಳ್ಳಿಗಳ ಚಿಗುರುಗಳನ್ನು ಅಲ್ಲಾಡಿಸುತ್ತ ಸದ್ದಿಲ್ಲದೆ ಸಂಚರಿಸತೊಡ ಗಿದಾನೆ. ಭಗವಾನ್ ಶ್ರೀ ಸೂರ್ಯನಾರಾಯಣನ ಸ್ವಾಗತಾರ್ಥವಾಗಿ ಪಕ್ಷಿಗಣವು ಮಂಜುಲಸ್ವರದಿಂದ ಗಾನಮಾಡತೊಡಗಿದೆ. ಚಿಗರೆಗಳು ಚಂಡಿನಂತೆ ಟಣ್ಣ ಟಣ್ಣನೆ ಜಿಗಿ ಯುತ್ತ ನಡೆದವೆ. ಇಂಥ ಸಮಯದಲ್ಲಿ ಮೂವರು ದಾರಿಕಾರರು ದಾರಿಯಹಿಡಿದು ಜನಕ ಪುರದ ಕಡೆಗೆ ಸಾಗಿದ್ದರು. ಅವರು ಮೂವರೂ ಕಸುವಿನ ಮೈಕಟ್ಟಿನವರಾಗಿದ್ದು, ನಿಲುವಿಕೆಯಲ್ಲಿ ಎತ್ತರವಾಗಿದ್ದರು . ಒಟ್ಟಿನಲ್ಲಿ ಅವರ ಆಕೃತಿಗಳು ಭವ್ಯವಾಗಿದ್ದವು. ಅವರಲ್ಲಿ ಇಬ್ಬರು ಉಣ್ಣಿಯ ಅಂಗಿಗಳನ್ನು ಹಾಕಿಕೊಂಡು, ಉದ್ದವಾದ ತಮ್ಮ ಚಂಡಿಕೆ ಗಳಿಗೆ ಗಂಟುಹಾಕಿದ್ದರು. ಅವರಿಬ್ಬರಿಗೂ ಗಡ್ಡಗಳಿದ್ದವು. ಅವರು ಹೇಳಿಕೊಳ್ಳು ವಂಥ ಸುಂದರರಾಗಿರದಿದ್ದರೂ, ಅವರ ಮುಖಮುದ್ರೆಯಲ್ಲಿ ಶೌರ್ಯದ ಕಳೆಯು ಉಕ್ಕು ತ್ತಿತ್ತು ಅವರ ಬೆನ್ನಿಗೆ ಬತ್ತಳಿಕೆಯಿದ್ದು, ಕೆಳಗೆ ಕಾಲತನಕ ಇಳಿಬಿದ್ದಂಥ ಧನುಸ್ಸನ್ನು