19
೩ ನೆಯಪ್ರಕರಣ.
ಸ್ವಾರ್ಥಪರಿತ್ಯಾಗೇಚ್ಛೆ!
ನಿರ್ಮಲಾಂತಃಕರಣದ ಪ್ರಭಾವವೇ ವಿಲಕ್ಷಣವಾದದ್ದು. ಶುದ್ಧಾಂತಃಕರಣವನು
ಶುಭ್ರವಾದ ಗಂಜಿಯ ಅರಿವೆಗೆ ಹೋಲಿಸಬಹುದು. ಗಂಜಿಯ ಅರಿವೆಯ ಮೇಲೆ ಮೂಡಿದ ಬಣ್ಣವು ವ್ಯಕ್ತವಾಗಿ ತೋರುವಂತೆ, ಶುದ್ಧಾಂತಃಕರಣದಲ್ಲಿ ಮೂಡಿದ ವಿಕಾರ ಗಳು ವ್ಯಕ್ತವಾಗಿ ತೋರುವವು; ಇದಲ್ಲದೆ ಅವು ಅನುಕೂಲ ಪರಿಸ್ಥಿತಿಯಲ್ಲಿ ಉತ್ತರೋ ತ್ತರ ವೃದ್ಧಿಂಗತವಾಗುತ್ತಲೂ ಹೋಗುವವು. ಅದರಂತೆ, ಕಾತ್ಯಾಯನಿಯ ಶುದ್ಧಾಂತಃ ಕರಣದಲ್ಲಿ ಮೂಡಿದ ಮೈತ್ರೇಯಿಯ ವಿಷಯದ ಪ್ರೇಮವೆಂಬ ವಿಕಾರವು, ಮೈತ್ರೇಯಿಯ ಘನತರವಾದ ಯೋಗ್ಯತೆಯ ಅನುಕೂಲಪರಿಸ್ಥಿತಿಯಲ್ಲಿ ಅಭಿವೃದ್ಧವಾಗುತ್ತ ಹೋಯಿತು. ಆಕೆಯು ಮೈತ್ರೇಯಿಯನ್ನು ಕಾಣಲಿಕ್ಕೆ ಮೇಲೆ ಮೇಲೆ ಹೋಗಹತ್ತಿದಳು. ಬರಬರುತ ಆಕೆಯ ವಿಯೋಗದ ಕಲ್ಪನೆಯಿಂದ ಕಾತ್ಯಾಯನಿಯ ಹೃದಯವು ಕಂಪಿಸ ಹತ್ತಿತು. ದಿನದಂತೆ ಕಾತ್ಯಾಯನಿಯು ಮೈತ್ರೇಯಿಯನ್ನು ಕಾಣಲಿಕ್ಕೆ ಹೋದಾಗ, ಆ ಮಾತು ಈಮಾತು ಹೊರಟು ಕಡೆಗೆ ಕಾತ್ಯಾಯನಿಯು ಮೈತ್ರೇಯಿಯನ್ನು ಕುರಿತು-
ಕಾತ್ಯಾಯನಿ--ತಂಗೀ, ಮೈತ್ರೇಯಿಾ, ನಿನ್ನ ಲಗ್ನವಾದಬಳಿಕ ನೀನು ಇಲ್ಲಿ ಯಾಕೆ
ಇರುವೆ ? ನಿನ್ನ ವಿಯೋಗವು ನನಗೆ ಹ್ಯಾಗೆ ಸಹನವಾದೀತೆಂಬ ಚಿಂತೆಯು ಈಗಿನಿಂದಲೇ ಹಗಲು-ರಾತ್ರಿ ನನ್ನನ್ನು ಬಾಧಿಸಹತ್ತಿದೆ. ಇನ್ನು ನಿನ್ನ ಲಗ್ನದಕಾಲವು ಸಮೀಪಿಸಿತೆಂದು ಹೇಳಬಹುದು ! ನನ್ನ ಪ್ರತಿ ಒಬ್ಬ ತಂಗಿಯ ವಿವಾಹವೆಂದರೆ, ನನ್ನ ಮನಸ್ಸಿಗೆ ವಿಯೋಗ ದುಃಖವು ಎಷ್ಟರಮಟ್ಟಿಗೆ ಆಗುವದೆಂಬದನ್ನು ಪರೀಕ್ಷಿಸುವ ಒರೆಗಲ್ಲಾಗಿರುತ್ತದೆ. ಆ ನನ್ನ ತಂಗಿಯರ ವಿಯೋಗದ ದುಃಖವನ್ನು ಈಗೀಗ ನಾನು ಸ್ವಲ್ಪ ಮರೆಯುತ್ತಿರಲು, ಪುನಃ ನಿನ್ನ ವಿಯೋಗದುಃಖವನ್ನು ಅನುಭವಿಸುವ ಪ್ರಸಂಗವು ಬಂದೊದಗಿರುತ್ತದೆ. ಈವರೆಗೆ ನಾನು ಅನುಭವಿಸಿದ ವಿಯೋಗದುಃಖಗಳನ್ನೆಲ್ಲ, ನಿನ್ನ ಸಂಬಂಧದ ವಿಯೋಗ ದುಃಖವು ಮೀರುವಹಾಗೆ ತೋರುತ್ತದೆ.
ಈಮೇರೆಗೆ ನುಡಿಯುವಾಗ ಕಾತ್ಯಾಯನಿಯಕಣ್ಣೊಳಗಿಂದ ಬಳ ಬಳ ನೀರು ಸುರಿ
ಯಹತ್ತಿದವು. ಆಕೆಯು ಅತ್ಯಂತ ಪ್ರೇಮದಿಂದ ಮೈತ್ರೇಯಿಯನ್ನು ನೋಡಹತ್ತಿದಳು. ಆಗಿನ ಆ ಕರುಣಾಮೂರ್ತಿಯ ನಿರ್ಮಲ ಸ್ವರೂಪವನ್ನು ನೋಡಿ ಮೈತ್ರೇಯಿಯ ಮನಸ್ಸೂ ಕರಗಿ ಆಕೆಯ ನೇತ್ರಗಳೂ ಅಶ್ರುಪೂರ್ಣವಾದವು. ಸಹೃದಯರ ಹೃದಯ ಗಳ ಚಾರಿತ್ರ್ಯದ ಮಹಿಮೆಯೇ ಅಂತಹದು. ಅವರು ಕಲ್ಲನ್ನು ಕೂಡ ಕರಗಿಸಬ ಲ್ಲರು. ಹೀಗೆ ಕಾತ್ಯಾಯನೀ-ಮೈತ್ರೇಯಿಯರಿಬ್ಬರೂ ಅಕೃತ್ರಿಮ ಪ್ರೇಮದಿಂದ ಒಬ್ಬ ರನ್ನೊಬ್ಬರು ನೋಡುತ್ತಿರುವಾಗ, ಮೈತ್ರೇಯಿಯು ಕಾತ್ಯಾಯನಿಯನ್ನು ಕುರಿತು-
ಮೈತ್ರೇಯಿ-ಅಕ್ಕಾ, ನಿನ್ನ ಹೃದಯವು ಎಷ್ಟು ಕೋಮಲವಮ್ಮಾ, ನಿನ್ನ ಮನಸ್ಸಿನ
ನೈರ್ಮಲ್ಯವಾದರೂ ಎಷ್ಟಿರುವದದು ? ಗೆಳತೀ, ಕಾತ್ಯಾಯನೀ, ನನ್ನ ವಿಯೋಗಕ್ಕಾಗಿ ನೀನು ಸರ್ವಥಾ ದುಃಖಿಸಬೇಡ ಕಂಡೆಯಾ ! ನಮ್ಮಿಬ್ಬರ ವಿಯೋಗವು ಎಂದಿಗೂ ಆಗ ಲಾರದು. ಇನ್ನಾದರೂ ನಿನಗೆ ಸಮಾಧಾನವಾಗಬಹುದಲ್ಲವೆ ?
ಕಾತ್ಯಾಯನಿ--" ವಿಯೋಗವಾಗಲಾರದು ! ಈ ನಿನ್ನ ಮಾತಿನ ಅರ್ಥವೇನು?
ಇಲ್ಲಿಯೇ ಎಲ್ಲಿಯಾದರೂ ಸಮೀಪದಲ್ಲಿ ನಿನ್ನನ್ನು ಕೊಟ್ಟರೆ, ಮೇಲೆಮೇಲೆ ನಾನುನಿನ್ನನ್ನು ಕಾಣಬಹುದೆಂಬದು ನಿ ಜ ವು; ಆದರೆ ನಿನ್ನ ಅತಿ ಯಮನೆಯು ಸಮೀಪದಲ್ಲಿಯೇ ದೊರೆಯುವದೆಂದು ಯಾರು ಹೇಳಬೇಕು ? ಪ್ರಶಸ್ತ ಮನೆತನ ನೋಡಿ ನಿನ್ನನು ಕೊಡಬೇಕಾಗುತ್ತದೆ.”
ಮೈತ್ರೇಯಿ-ನಾನು ಲಗ್ನ ಮಾಡಿಕೊಳ್ಳುವೆನೆಂದಾದರೂ ನೀನು ಯಾತರ ಮೇಲಿಂದ ಹೇಳುತ್ತೀ ?
ಕಾತ್ಯಾಯನಿ-- ಏನಂದಿ ? ನೀನು ಲಗ್ನ ಮಾಡಿಕೊಳ್ಳುವದಿಲ್ಲವೆ ? ಅವಿವಾಹಿತ
೪ಾಗಿಯೇ ಇರುವೆಯಾ ? ಅವ್ವಯ್ಯಾ,ಸಖೀ, ಮೈತ್ರೇಯಿಾ, ಸ್ತ್ರೀಯರು ಅವಿವಾಹಿತ ರಾಗಿ ಇರುವ ಕಲ್ಪನೆಯೇ ನನಗೆ ವಿಲಕ್ಷಣವಾಗಿ ತೋರುತ್ತದೆ. ಅದರಲ್ಲಿ ನಿನ್ನಂಥವಳ ಪಾಣಿಗ್ರಹಣಕ್ಕೆ ಯಾರು ಆತುರಪಡಲಿಕ್ಕಿಲ್ಲ ? ತಂಗೀ, ನಿನ್ನಂಥವರು ಹಾದಿಯಲ್ಲಿ ಬಿದ್ದಿರು ವರೇ ? ಮನೆಮನೆಗೆ ಒಟ್ಟಿರುವರೇ ?