ಈ ಪುಟವನ್ನು ಪ್ರಕಟಿಸಲಾಗಿದೆ

20

ಮೈತ್ರೇಯಿ--ನನ್ನ ಪಾಣಿಗ್ರಹಣಕ್ಕೆ ಬಹುಜನರು ಸಿದ್ದರಾಗಿರಬಹುದು; ಆದರೆ

ಅವರಲ್ಲಿ ಯಾರೂ ನನ್ನ ಮನಸ್ಸಿಗೆ ಬಾರದಿದ್ದರೆ ?

ಕಾತ್ಯಾಯನಿ--ಹಾಗಾದರೆ ನೀನು ಅವಿವಾಹಿತಳಾಗಿಯೇ ಇರುವವಳೇನು ? ಸೇರ

ದಮ್ಮಾ ನನಗೆ ಈ ನಡತೆ ! ಸಂಸಾರವೇ ಸ್ತ್ರೀಯರ ಕರ್ತವ್ಯವೆಂದು ನನಗೆ ಯಾವಾಗಲೂ ತೋರುತ್ತದೆ. ನಿರಾಶ್ರಿತರಾಗಿ ಹೆಂಗಸರು ಇರಬಹುದೆ? ಹಾಗೆ ಇದ್ದರೆ ಚಂದಕಾಣಬಹುದೆ?

ಮೈತ್ರೇಯಿ-ಸಖೀ,ನಿನ್ನ ಮಾತನ್ನು ನಾನು ಅಲ್ಲಗಳೆಯುವದಿಲ್ಲ. ಸ್ತ್ರೀ

ಯರು ಬ್ರಹ್ಮಚರ್ಯದಿಂದಿರುವದು ಸುಲಭವಲ್ಲ. ಇದ್ದರೆ ಚಂದವೂ ಕಾಣುವದಿಲ್ಲ. ಅಂತೇ ಸ್ತ್ರೀಯರು ಬ್ರಹ್ಮಚರ್ಯದಿಂದಿರುವದು ತೀರಕಡಿಮೆ;ಆದರೆ ಸಂಸಾರವು ಕೇವಲ ಸ್ತ್ರೀಯರ ಸಲುವಾಗಿಯೇಯಿರುತ್ತವೆಂಬಮಾತು ನನಗೆ ಒಪ್ಪಿಗೆಯಾಗಿರುವದಿಲ್ಲ. ಅದು ಸ್ತ್ರೀಯರ ಸಲುವಾಗಿ ಇರುವಂತೆ ಪುರುಷರ ಸಲುವಾಗಿಯೂ ಇರುತ್ತದೆ. ಸ್ತ್ರೀ-ಪುರುಷ ರಿಬ್ಬರಿಗೂ ಸಂಸಾರವು ಸಂಬಂಧಿಸಿರುವುದು. ಗೃಹಕೃತ್ಯವು ಕೇವಲ ಸ್ತ್ರೀಯರದೇ ಎಂದು ಮುಖ್ಯವಾಗಿ ಪುರುಷರು ತಿಳಿದು ನಡೆಯುತ್ತಿರುವದರಿಂದ, ಗೃಹಕೃತ್ಯದಹೊರತು ಸ್ತ್ರೀಯರು ಬೇರೆ ಏನೂ ಮಾಡತಕ್ಕವದಿಲ್ಲವೆಂದು ಎಲ್ಲರೂ ತಿಳಿದಿರುವರು.

ಕಾತ್ಯಾಯನಿ-ಗೃಹಕೃತ್ಯದ ಹೊರತು ನಾವು ಹೆಂಗಸರು ಬೇರೆ ಏನು ಕೆಲಸ

ಮಾಡಬೇಕಾಗಿರುವದು ? ಪಾರಮಾರ್ಥಿಕವಿಚಾರವೆ? ಆಗಲಿ.ಸಂಸಾರಕೃತ್ಯಗಳಲ್ಲಿ ಪಾರ ಮಾರ್ಥಿಕ ಸಂಗತಿಗಳು ಪೋಣಿಸಲ್ಪಟ್ಟೇಇರುವವಲ್ಲ  ? ಯಜ್ಞ-ಯಾಗಗಳಲ್ಲಿ ಪತಿಗೆ ಸಹಾಯ ಮಾಡುವದು, ಈಶಸ್ತವನ, ಜಪ, ತಪ ಮೊದಲಾದವುಗಳು ಪಾರಮಾರ್ಥಿಕ ಸಂಗತಿಗಳಲ್ಲದೆ ಮತ್ತೇನು ? ಇವೆಲ್ಲ ಕೆಲಸಗಳನ್ನು ವಿವಾಹಿತ ಸ್ತ್ರೀಯು ಮಾಡಲೇಬೇ ಕಾಗುವದು. ಅಂದಬಳಿಕ ಸಂಸಾರಕೃತ್ಯಗಳೊಡನೆ ಆಕೆಯು ಪಾರಮಾರ್ಥಿಕ ವಿಚಾರ ವನ್ನೂ ಮಾಡಿದಹಾಗಾಗುವದಿಲ್ಲವೊ ? ಪತಿಯು ದೈವವೆಂದು ತಿಳಿದು ನಡೆಯುವದ ರಿಂದಲೇ ಸತಿಗೆ ಸದ್ಗತಿಯಾಗುವದವಲ್ಲವೆ?

ಮೈತ್ರೇಯಿ--ನೀನಾಡುವದು ಸರಿಯಾದದ್ದು; ಇವುಗಳ ಹೊರತು ಸ್ತ್ರೀಯರ

ಕರ್ತವ್ಯವೇನೂ ಇರುವುದಿಲ್ಲವೆ? ಆತ್ಮಜ್ಞಾನವನ್ನು ಪಡೆಯುವದು ಸ್ತ್ರೀಯರ ಮಹತ್ವದ ಕರ್ತವ್ಯವೆಂದು ನಿನಗೆ ತೋರುವದಿಲ್ಲವೆ ?

ಕಾತ್ಯಾಯನಿ--ತೋರುವುದು ನಿಜವು , ಆದರೆ ಈ ಕೆಲಸವು ವಿದ್ವಾಂಸರದು,

ನಮ್ಮ೦ಥ ಹೆಂಗಸರದ್ದಲ್ಲ. ಈಗ ವಿದುಷಿಯರಾದ ಸ್ತ್ರೀಯರು ಎಷ್ಟು ಜನರಿರುವರು ? ನಿನ್ನ ಅಬಚಿಯಾದ ಗಾರ್ಗಿಯಂತ ಬುದ್ಧಿವೈಭವವೂ, ಕಾಲಾನುಕೂಲವೂ ಉಳ್ಳ ಸ್ತ್ರೀ ಯರೇ ಆತ್ಮಜ್ಞಾನಪ್ರಾಪ್ತಿಗಾಗಿ ಪ್ರಯತ್ನ ಮಾಡುವರು; ಆದರೆ ಇಂಥ ಸ್ತ್ರೀಯರು ಒಟ್ಟಿ ನಲ್ಲಿ ಬಹು ಸ್ವಲ್ಪ ಜನವಾದ್ದರಿಂದ, ಆತ್ಮಜ್ಞಾನದ ಕೆಲಸವು ಮುಖ್ಯವಾಗಿ ಪುರುಷರದಾ ಗಿರುವದು.ನಾವು ಆ ಕೆಲಸಕ್ಕೆ ತಕ್ಕವರಲ್ಲ.

ಮೈತ್ರೇಯಿ--ನಿನ್ನ ಮಾತನ್ನು ಕೇಳಿ ನನಗೊಂದು

ಕಾತ್ಯಾಯನಿ--ನಾನಂತು ಕಥೆಯ ಭಕ್ತಳು. ನನಗೆ ಆ ಕಥೆಯನ್ನು ಹೇಳು.