ಈ ಪುಟವನ್ನು ಪ್ರಕಟಿಸಲಾಗಿದೆ
(iii)

ವೆಂಬದನ್ನೂ ಜನಾಂಗದಲ್ಲಿ ನೆಲೆಗೊ೦ಡ ಯಾವ ದುರ್ಗುಣಗಳ ದೆಶೆಯಿಂದ ಪರದೇಶೀಯರು ಇಲ್ಲಿಗೆ ಬಂದು ನಮ್ಮನ್ನು ಮೂಲಿಗೆ ತಳ್ಳಿಗು ತಾವು ರನ್ನಾಗಿ ಮಾಡಿ ಆಳುತ್ತಿರಲಿಕ್ಕೆ ಅನುವು೦ಟಾಗಿತೆಂಬದನ್ನೂ ಇತಿಹಾಸವು ತಿಳಿಹೇಳಿ ಎಚ್ಚರಿಸುವದು.

ಹೀಗೆ ಇತಿಹಾಸವು ಸಾರ್ಥಕಗೊಳ್ಳಬೇಕಾದರೆ ಅದು ನಿಜವಾಗಿ ಜನತೆಯ ಚರಿತ್ರೆಯಾಗಿರಬೇಕು. ಜನತಾರೂಪೀ ಪ್ರವಾಹವು ಧರ್ಮ, ನೀತಿ, ರಾಜಕಾರ್ಯ, ವಾಯ, ಕಲಾಕೌಶಲ್ಯ, ವ್ಯಾಪಾ ರೋದ್ಯೋಗ, ಕೈಗಾರಿಕೆ, ಒಕ್ಕಲತನ, ಕಟ್ಟಡಪದ್ಧತಿ, ವಿವಾಹ ಮೊದಲಾದ ಸಂಸ್ಕಾರಪದ್ಧತಿಗಳು, ನಡೆನುಡಿಗಳು, ಭೌತಿಕ ಶಾಸ್ತ್ರ, ತತ್ವಜ್ಞಾನ ಹೀಗೆ ಅನೇಕ ಮುಖವಾಗಿ ಹರಿಯುತ್ತದೆ. ಆಯಾ ಜನಾಂಗದ ಪ್ರಾಕೃತಿಕ ಸ್ಥಿತಿ, ಹವೆ, ಭೂಮಿ, ನೀರು ಮೊದಲಾದವುಗಳಿಂದ ಪರಿಣಮಿಸಲ್ಪಟ್ಟ ಸ್ವಧರ್ಮಕ್ಕನುಸರಿಸಿ ಆ ಜನಾಂಗವು ಹೀಗೆ ಅನೇಕ ಮುಖವಾಗಿ ಹರಿಯುತ್ತದೆ. ಇವುಗಳ ಸಮುದಾಯಕ್ಕೆ ಆ ಜನಾ೦ಗದ ಸಂಸ್ಕೃತಿಯೊ೦ದೆನ್ನಬಹುದು. ಅವರವರ ಸ್ವಧರ್ಮವೂ ಸ೦ಸ್ಕೃತಿಯ ಪರಂಪರಾಗತವಾಗಿ ಹಿರಿಯರ ಅನೇಕ ವರ್ಷಗಳ ಅನುಭವದಿ೦ದ ಬಲಗೊ೦ಡು ಬ೦ದದರಿಂದ ಅವರವರಿಗೆ ಕಲ್ಯಾಣಪ್ರದವು. ಅವೆಲ್ಲವುಗಳ ಜ್ಞಾನವನ್ನು ಇತಿಹಾಸವು ಮಾಡಿಕೊಡುವದು ಅವಶ್ಯ. ಆದ್ದರಿಂದಲೇ ಅದು ಸಂಸ್ಕೃತಿ ಪ್ರಧಾನವಾಗಿರಬೇಕು.

ಇವೆಲ್ಲ ದೃಷ್ಟಿಯಿಂದ ನೋಡಲಾಗಿ ನಮ್ಮ ಪ್ರಾಚೀನ ಹಿಂದುಸ್ಥಾನದ ಇತಿಹಾಸದಷ್ಟು ಮಹತ್ವವಾದ ಭಾಗವು ಮತ್ತೊಂದಿಲ್ಲ' ನಮ್ಮ ಜನಾಂಗದ ಚರಿತ್ರೆಯಲ್ಲಿ ಅದು ಬಹಳ ಉಜ್ವಲವಾದ ಕಾಲವು. ಪ್ರಾಚೀನ ಆರ್ಯರಿಗಿದ್ದ ಬಿಕ್ಕಟ್ಟಿನ ಪರಿಸ್ಥಿತಿ ನೋಡಿದಲ್ಲೆಲ್ಲ ದೊಡ್ಡ ದೊಡ್ಡ ಹಳವುಗಳೂ, ಅರಣ್ಯಗಳೂ, ಕಾಡು ಹಿ೦ಸ್ರಪಶುಗಳ, ನಾಗಾಗದೆ ಇದ್ದ ಭೂಮಿ ವಿಸ್ತಾರವೂ, ಅತಿಶಯ ಮಳೆಯೂ, ಅಲ್ಲಲ್ಲಿಗೆ ಶೀತವುಳ್ಳ ಜವಳು ಪ್ರದೇಶಗಳೂ, ಈಗಿನಂತೆ ತೀವ್ರವಾಹನಗಳ ಅಭಾವ, ದುಷ್ಟ ಸ್ವಭಾವದ ರಾಕ್ಷಸರ ನೆರೆಹೊರೆಯು ಇವೆಲ್ಲ ಅನಾನುಕೂಲತೆಗಳನ್ನು ಸರಿಪಡಿಸಿಕೊಂಡು ಮಾಡಿದ ಸಾಹಸಕೃತ್ಯಗಳೂ