ಈ ಪುಟವನ್ನು ಪ್ರಕಟಿಸಲಾಗಿದೆ
(iv)

ತೋರ್ದಡಿಸಿದ ಶೌರ್ಯ ಕ್ಷಾತ್ರತೇಜಗಳೂ ವರ್ಣನೀಯವಾಗಿವೆ. ಅವರ ಮೈ ಬಣ್ಣ, ಮೈ ಕಟ್ಟು, ಸ್ನಾಯು ಬಲ, ಪ್ರತಿಭಾ ಶಾಲಿಯಾದ ಬುದ್ಧಿ, ಪರಿ ಸ್ಥಿತಿಗನುಸರಿಸಿ ಸಮಾಜದಲ್ಲಿ ಮಾಡಿಕೊ೦ಡು ತಿದ್ದುಪಾಟುಗಳು, ತಮ್ಮ ಸಂಸ್ಕೃತಿ ಸುಧಾರಣೆಯ ಪತಾಕೆಯನ್ನು ಎಲ್ಲ ಕಡೆಗೂ ಊರಿ ಕಾಡು ಜನರನ್ನೂ ಉದ್ಧರಿಸಿ ತಮ್ಮಲ್ಲಿ ಒಂದು ಮಾಡಿಕೊಳ್ಳೋಣ, ಶಾಂತರೀತಿಯಿ೦ದ ಧರ್ಮಪ್ರಸಾರ ಇವೇ ಮೊದಲಾದ ವಿಷಯಗಳು ದ೦ಗುಬಡಿ ಸುವಂಥವೂ ಬೋಧಪ್ರದವೂ ಆಗಿರುತ್ತವೆ. ಈ ಕಾಲದಲ್ಲಿಯೇ ನಮ್ಮ ದೇಶವು ಸುಧಾರಣೆಯ ಉಚ್ಚಶಿಖರವನ್ನು ಏರಿತ್ತು. ಜಗತ್ತಿನೊಳಗಿನ ಉಳಿದ ಅನೇಕ ದೇಶಗಳು ಅಜ್ಞಾನಾಂಧಕಾರದಲ್ಲಿ ಮುಳುಗಿ ತೀರ ಕಾಡು ಸ್ಥಿತಿಯಲ್ಲಿರುತ್ತಿದ್ದವು. ಈ ನಮ್ಮ ಪ್ರಾಚೀನ ಆರ್ಯರ ವೈಭವ ಕಾಲದ ಚರಿತ್ರೆಯನ್ನು ನಾವು ಪುನಃ ಪುನಃ ಓದಿ ಮನನಮಾಡಿ ಅವರ ತೇಜಸ್ಸು ನಮ್ಮಲ್ಲಿ ಇಳಿದು ಒಡಮೂಡುವಂತೆ ಯತ್ನಿಸಬೇಕು.

ಆದರೆ ಈಗಿನ ಶಿಕ್ಷಣ ಪದ್ಧತಿಯಯೇ ವಿಲಕ್ಷಣವಾಗಿದೆ. ಈಗ ಶಾಲೆ ಕಾಲೇಜುಗಳಲ್ಲಿ ಕಲಿಸುವ ಇತಿಹಾಸವು ಹುರುಪುಗೊಳಿಸುವದೂ ಇಲ್ಲ; ಪೂರ್ವಜರ ಅನುಭವದ ಲಾಭವನ್ನು ಮಾಡಿಕೊಡುವದೂ ಇಲ್ಲ; ಜನತೆಯ ನಿಜವಾದ ಸಂಸ್ಕೃತಿಪ್ರಧಾನವಾದ ಚರಿತ್ರೆಯ ಅಲ್ಲ. ಅದು ಕೇವಲ ರಾಜರ ವಂಶಾವಳಿಯ ಇಸವಿಗಳ ಪಟ್ಟಿಯೂ ಆಗಿರುತ್ತದೆ. ಯುದ್ಧಗಳ ಹೆಸರುಗಳು, ಸ್ಥಳ, ನಮ್ಮ ಸೈನ್ಯದ ಬಹುಸಂಖ್ಯ, ಶತ್ರು ಪಕ್ಷದ ಅಲ್ಪ ಸಂಖ್ಯೆ, ಅದರೂ ಜಯವು ಶತ್ರುಗಳಿಗೇ, ನಮಗೆ ಕಟ್ಟಿ ಟ್ಟದ್ದು ಸೋಲು, ರಾಜರಿಗಿದ್ದ ಸ್ತ್ರೀಯರ ಸಂಖ್ಯೆ, ಅವರ ಹಲ್ಲಿನ ಸ್ಮಾರಕಕ್ಕಾಗಿ ಕಟ್ಟಿದ ಗೆರೆಗಳು ಇವೇ ಮೊದಲಾದ ಅನುಪಯುಕ್ತ ವಿಷಯಗಳ ಕತ್ತೆಯ ಭಾರದಿಂದ ತುಂಬಿದ ಚರಿತ್ರೆಗಳನ್ನು ಶ್ರವಣ ಮಾಡಿದ ಈಗಿನ ಯುವಕರಲ್ಲಿ ರಾಮಾಯಣ ಮಹಾಭಾರತಾದಿ ಉದ್ಗ್ರಂಥಗಳನ್ನು ಶ್ರವಣಮಾಡಿದ ಶಿವಾಜಿ ಮಹಾರಾಜರ ಓಜಸ್ವಿತೆಯು ಎತ್ತ ತಲೆದೋರಬೇಕು? ಬಾಲಕರ ಅಂತಃಕರಣದಲ್ಲಿ ರಜಪೂತರ ಸ್ವದೇಶಾಭಿಮಾನವೂ ಕ್ಷಾತ್ರತೇಜವೂ ಹೇಗೆ ಒಡಮೂಡಬೇಕು? ನಮ್ಮ ಅವನತಿಯ ಕಾಲದ ಚರಿತ್ರೆಯನ್ನೇ ಮೊದಲಿನಿಂದ ಕಡೆತನಕ ಓದು