ಪ್ರೇಮಾದರಗಳೂ ಕಡೆತನಕ ಹಗೆತನವನ್ನು ಬೀಳಿಸಿ ವಿರೋಧಛಕ್ತಿಯನ್ನು ತೋರ್ಪಡಿಸಿದ ರಾವಣನಿಗೆ ಮುಕ್ತಿಯನ್ನು ಕೊಟ್ಟದ್ದೂ ಆದರ್ಶಭೂತವಾಗಿವೆ. ನಮ್ಮ ಪ್ರಾಚೀನ ಇತಿಹಾಸ ಪುರಾಣಗಳಲ್ಲಿ ಈ ವಿಚಾರಸರಣಿಯು ತುಂಬಿ ತುಳುಕುತ್ತದೆ. ಈಗಿನ ಚರಿತ್ರೆಯಲ್ಲಿಯೂ ಅದೇ ಪ್ರೇಮಮಯವಾದ ವಾತಾವರಣವಿದ್ದರೆ ಒಳ್ಳೆ ಸಂಸ್ಕಾರವಾಗುವದು.
ಈ ಎಲ್ಲ ವಿಚಾರಗಳನ್ನೊಳಗೊಂಡು ಈ ಇತಿಹಾಸವನ್ನು ಬರೆಯಲಾಗಿದೆ. ಈ ಅರ್ಯವೀರರ ಚರಿತ್ರೆಯನ್ನು ಅಬಾಲವೃದ್ಧರೂ ವಿದ್ಯಾರ್ಥಿಗಳೂ ಓದಿ ಬೋಧ ಪಡೆಯುವಂತೆಯೂ, ವರ್ಣನಾತ್ಮಕ ರೀತಿಯಲ್ಲಿ ಮನೋರ೦ಜನೆಯಾಗುವಂತೆಯೂ, ತಲೆಭಾರವಾಗದಂತೆಯ, ಅವರ ಗುಣಕೀರ್ತನೆಗಳನ್ನು ಹೆಚ್ಚು ಹೆಚ್ಚು ಕೇಳಲು ಕುತೂಹಲವನ್ನುಂಟು ಮಾಡುವಂತೆಯೂ ಬರೆಯಲು ಯತ್ನಿಸಲಾಗಿದೆ. ಅದು ಎಷ್ಟರಮಟ್ಟಿಗೆ ಸಫಲವಾಗಿದೆಂಬದನ್ನು ವಾಚಕರೇ ನಿರ್ಣಯಿಸಬಹುದು. ಇ೦ಧದೊಂದು ಇತಿಹಾಸವನ್ನು ಬರೆಯಬೇಕೆಂದು ನಾವು ಮಾಡಿದ ವಿನಂತಿಯನ್ನು ಮನ್ನಿಸಿ, ಅನೇಕ ಗ್ರಂಥಗಳನ್ನು ಓದಿ ಮಥನ ಮಾಡಿ ಶ್ರಮಪಟ್ಟು ನಮ್ಮನ್ನು ಋಣಿಯಾಗಿ ಮಾಡಿದ ಶ್ರೀ ನಾರಾಯಣ ಶರ್ಮಾ ಅವರ ಉಪಕಾರವನ್ನು ನಾವು ಪುನಃಪುನಃ ಸ್ಮರಿಸುವೆವು. ವೇಳೆಗೆ ಸರಿಯಾಗಿ ಅಂದವಾಗಿ ಅಚ್ಚು ಹಾಕಿದ ಶ್ರೀ. ಮುತಾಲಿಕ ದೇಸಾಯಿ ಹಣಮಂತರಾಯರಿಗೂ ನಾವು ಬಹಳ ಋಣಿಯಾಗಿದ್ದೇವೆ. ಯೋಗ್ಯಪ್ರೋತ್ಸಾಹನವನ್ನು ಕೊಡುವದು ಕನ್ನಡಿಗರ ಕೆಲಸ.
ಧಾರವಾಡ ರಾಷ್ಟ್ರೀಯ ಶಿಕ್ಷಣ ಸಮಿತಿ | ಸುರೇಂದ್ರ ಶಿವರಾವ ದೇಸಾಯಿ, ಕಾರ್ಯದರ್ಶಿ. | |
ಧಾರವಾಡ | ||
ಕ್ಷಯ ಸಂವತ್ಸರ ಚೈತ್ರ ಬ. ೫. |