ಭಾರತೀಯರ ಇತಿಹಾಸವು.
೧ ನೇ ಪ್ರಕರಣ.
ಪ್ರಾಕೃತಿಕ ಸ್ವರೂಪವು.
ಯಾವುದೊ೦ದು ಜನಾಂಗದ ಪ್ರಾಕೃತಿಕ ಸ್ವರೂಪವೆ೦ದರೆ ಅದರ ಬಾಹ್ಯ ಸ್ವರೂಪವು. ಜನಾ೦ಗದೊಳಗಿನ ಹವೆ, ನೀರು, ಗುಡ್ಡ ಗಾಡು, ಭೂಗುಣ ಅವೇ ಮುಂತಾದ ಬಾಹ್ಯ ಸ್ವರೂಪಗಳು, ಆ ಜನಾಂಗದಲ್ಲಿ ಹುಟ್ಟುವ ಮನುಷ್ಯ ಪ್ರಾಣಿ ಮೊದಲಾದವುಗಳ ಸ್ವಭಾವ ಗುಣಧರ್ಮಗಳನ್ನು ಮಾರ್ಪಡಿಸಲಿಕ್ಕೆ ಕಾರಣವಾಗುತ್ತವೆ. ಒಂದು ಬಗೆಬ೦ದ ಮನುಷ್ಯನಾಗಲಿ, ಪ್ರಾಣಿಯಾಗಲಿ, ಯಾವ ಭೂಮಿಯಲ್ಲಿ ಹುಟ್ಟಿ ಬೆಳೆಯುವವೊ, ಆ ಭೂಮಿತಾಯಿಯ ಅನ್ನ, ನೀರು, ಹವೆ, ಇವುಗಳನ್ನು೦ಡು ಬೆಳೆದ ಭೂಮಿತಾಯಿಯ ಮಕ್ಕಳೆ; ಆದ್ದರಿಂದ ಆ ಭೂಮಿಯಲ್ಲಿ ಅನ್ನ, ನೀರು, ಹವೆ, ಗುಡ್ಡಗಾಡು ಮೊದಲಾದವುಗಳಲ್ಲಿ ರುವ ಗುಣಗಳೆಲ್ಲವೂ ಆ ಮನುಷ್ಯ ಪ್ರಾಣಿಗಳಲ್ಲಿ ಸೇರಿ, ಒಳಗಿಂದೊಳಗೆ ಯಾರಿಗೂ ತಿಳಿ ಗೊಡದಂತೆ, ಶಾರೀರಿಕ ಹಾಗೂ ಮಾನಸಿಕ ಅ೦ತಃಶಕ್ತಿಗಳನ್ನು ಕಣ್ಣಿಗೆ ಕಾಣಿಸುವಂತೆ ರೂಪುಗೊಳಿಸಿ ಬೆಳಿಸುತ್ತಿರುತ್ತವೆ. ಇದನ್ನು ಮನಗಾಣಿಸಿಕೊಳ್ಳಬೇಕೆಂದರೆ, ನಾವು ಬೇರೆ ಬೇರೆ ನಾಡುಗಳಲ್ಲಿರುವ ಹವ, ನೀರು, ಭೂಗುಣಗಳನ್ನು ತಿಳಿದು, ಆ ನಾಡಿನಲ್ಲಿ ಹುಟ್ಟಿ ಬೆಳೆದ ಮನುಷ್ಯ ಪ್ರಾಣಿಗಳ ಆರೋಗ್ಯ, ಮನೋಧರ್ಮಗಳನ್ನು ಅಳೆದು ನೋಡತಕ್ಕದ್ದು. ಹೀಗೆ ನೋಡಿದರೆ, ಹೊರಗಿನ ನಿಸರ್ಗದೃಷ್ಟಿಯು ತನ್ನ ಮಕ್ಕಳಾದ ಮನುಷ್ಯ ಪ್ರಾಣಿಗಳ ಹೊರ ಒಳಗಿನ ಶಕ್ತಿಗಳನ್ನು ಹೇಗೆ ಅಳುತ್ತಿರುತ್ತದೆಂಬುದು ಮನದಟ್ಟಾಗಿ, ಹೊರಗಣ ಸೃಷ್ಟಿಯು ಒಳಗಿನ ಸೃಷ್ಟಿಯಲ್ಲಿ ಮಾಡಿ ತನ್ನ ಕಾರ್ಯವನ್ನೆಷ್ಟು