ಈ ಪುಟವನ್ನು ಪ್ರಕಟಿಸಲಾಗಿದೆ

ಶಿಕ್ಷಣ ಪದ್ಧತಿ.

೨೮೫

ನೃತ್ಯ, ಆನೆ ಕುದುರೆಗಳನ್ನು ಸಾಕುವ ಬಗೆ, ಮಿಕ್ಕ ಕೈಗಾರಿಕೆ ಅವೇ ಮು೦ತಾದ ವಿದ್ಯೆಗಳನ್ನು ಕಲಿಸುತ್ತಿದ್ದರು. ಹರ್ಷಮಹಾರಾಯನು ಯುದ್ದದಲ್ಲಿ ಹೇಗೋ ಹಾಗೆ ಸಾಹಿತ್ಯ ಶಾಸ್ತ್ರದೊಳಗೂ ಪಾರೀಣನಾಗಿರುವದಕ್ಕೆ ಆತನು ಸ್ವತಃ ಬರೆದ ನಾಗಾನಂದ, ರತ್ನಾವಳಿ, ಪ್ರಿಯದರ್ಶಿಕಾ ಅವೇ ಮುಂತಾದ ಕಾವ್ಯಗಳು ಆದರ್ಶವಾಗಿವೆ. ಯಾವ ವಿದ್ಯೆಯೆಂದರೆ ಅದರಲ್ಲಿ ಆತನು ಮೀರಬುದ್ದಿಯಾದುದರಿಂದ ಭಾರತ ಜನಾ೦ಗವು ಸರ್ವ ವಿಧದಿಂದಲೂ ಉತ್ಕರ್ಷೆಗೇರಬೇಕೆಂಬ ಮೀಸಲ ತಿಳಿವಳಿಕೆಯಿಂದ ಮೀಸಲ ಬುದ್ಧಿಯ ಅಷ್ಟಾವಧಾನಿಯಾದ ಈ ಲೋಕೈಕವೀರನನ್ನು ದೇವರು ಹುಟ್ಟಿಸಿದ೦ತೆ ಕಾಣುತ್ತಿತ್ತು. ಬ್ರಾಮ್ಹಣರ ಅಗ್ರಹಾರದ ಗುರುಮನೆಗಳಲ್ಲಿರುವ ಬ್ರಮ್ಹಚಾರಿಗಳು ಬೆಳಗಿನ ಜಾವಕ್ಕೆದ್ದು ಗುರುಗಳಿಂದ ವೇದಶಾಸ್ತ್ರಾಧ್ಯಾಯನದ ಸ೦ತೆ ಹೇಳಿಸಿಕೊಂಡು ಗಟ್ಟಿ ಮಾಡುತ್ತಿದ್ದುದರಿಂದ ಅಗ್ರಹಾರವೆಲ್ಲವೂ ಅವರ ಘೋಷದಿಂದ ಗರ್ಜಿಸುತ್ತಿದ್ದಿತು. ಮಗಧ ದೇಶದೊಳಗೆ ಈ ಕಾಲಕ್ಕೆ ನಾಲಂದವೆಂಬ ಬೌದ್ಧವಿಹಾರವು ಬಹು ಘನತೆಗೇರಿದ್ದು, ಇತ್ಸಿಂಗನೆಂಬೊಬ್ಬ ಚೀನ ದೇಶದ ಯಾ೦ತ್ರಿಕನು ೧೦ ವರ್ಷಗಳ ತನಕ ಅಲ್ಲಿದ್ದು ಅಭ್ಯಾಸಮಾಡಿದನಂತೆ ! ಈತನಿರುವ ಕಾಲದಲ್ಲಿ ನಾಲಂದ ವಿಶ್ವವಿದ್ಯಾಲಯದೊಳಗೆ ಮೂರು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದರು. ನ್ಯಾಯ, ವ್ಯಾಕರಣ, ವೈದ್ಯಶಾಸ್ತ್ರ ಮೊದಲಾದವುಗಳ ಅಧ್ಯಯನಗಳು ಇಲ್ಲಿ ಸಾರೋದ್ಧಾರವಾಗಿ ಸಾಗುತ್ತಿದ್ದವು. ಜನಸಾಮಾನ್ಯರ ಶಿಕ್ಷಣದ ಕಲ್ಪನೆಯು ಮೊದಲಿನ ಜನರಿಗಿದ್ದಿಲ್ಲವೆಂದು ದುಃಖದಿಂದ ಹೇಳಬೇಕಾಗುತ್ತದೆ; ಆದರೂ ಧರ್ಮ ಶಿಕ್ಷಣವೇ ಕೆಳತರಗತಿಯ ಜನರಿಗೂ ಹೆಂಗಸರಿಗೂ ಸಮಾಧಾನದ ಮೆಟ್ಟು ಆದುದರಿ೦ದ ಈ ತೆರದ ಧರ್ಮಶಿಕ್ಷಣವು ಜನರಿಗೆ ಸನ್ಯಾಸಿಗಳಿ೦ದಲೂ, ತಮ್ಮ ವಿದ್ಯೆಯಿಂದಲೇ ಜೀವನ ನಡಿಸಿರುವ ವಿದ್ಯಾವಂತರಿಂದಲೂ ಒಂದಿಲ್ಲೊಂದು ಬಗೆಯಿಂದ ದೊರೆಯುತ್ತಿತ್ತು. ಹೀಗಾಗಿ ವಿದ್ಯೆಕಲಿತವರ ಸಂಖ್ಯೆಯು ಜನಾಂಗದ ಪ್ರಮಾಣದಿಂದ ಕಡಿಮೆಯಿದ್ದರೂ ಅನುಭವಿಕರ ಸಂಖ್ಯೆಯು ಹೆಚ್ಚಿಗಿತ್ತು.