ಜನರ ರಾಜಕೀಯ ಕಲ್ಪನೆಗಳು :-ಹಿಂದೆ ಭಾರತೀಯ ಕಾಲೀನವಾದ ರಾಜ್ಯವ್ಯವಸ್ಥೆಯನ್ನು ಕುರಿತು ಬರೆಯುವಾಗ ರಾಜಕಾರ್ಯದೊಳಗೆ ಭಾರತೀಯರ ವಿಚಾರಗಳು ಎಷ್ಟು ಮು೦ದರಿದಿದ್ದವೆಂಬುದನ್ನು ಹೇಳಿದ್ದೇವೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಆ ಕಾಲದ ರಾಜ್ಯವೆಂದರೆ ರಾಷ್ಟ್ರ, ರಾಜ್ಯ ಹಾಗೂ ರಾಜ ಅವು ಮೂರೂ ಒ೦ದೇ ಸರದೊಳಗಿನ ದೊಡ್ಡ ಮಣಿಗಳು. ಜನರಿ೦ದ ನಾಡು, ನಾಡಿನಿಂದ ಆ ನಾಡಿನ ಧೊರೆ. ಹೀಗಿರುವದರಿಂದ ಯಾವ ನಾಡಿನಲ್ಲಿ ಯಾವ ಬಗೆಯ ಜನರು ವಾಸಿಸುತ್ತಿದ್ದರೋ, ಅವರಿಗೆ ಆ ನಾಡಿನ ಹೆಸರಿನಿಂದ ಕರೆಯುತ್ತಿದ್ದರು. ಮತ್ತು ಯಾವ ನಾಡಿನವರನ್ನು ರಾಜನು ಆಳುತ್ತಿರುವನೋ, ಅದೇ ನಾಡಿನವರ ಹೆಸರನ್ನು ರಾಜನಿಗೆ ಕೊಡುತ್ತಿದ್ದರು. ಮು೦ದೆ ಮು೦ದೆ ಧರ್ಮಶಾಸ್ತ್ರಕ್ಕನುಗುಣವಾಗಿ ಅಳುವಂಧ ಕ್ಷತ್ರಿಯ ರಾಜರ ಆಳಿಕೆಯು ಬಲಗುಂದಿ ಅನಾರ್ಯರ ಅಳಿಕೆಯೇ ಪ್ರಬಲವಾದ್ದರಿಂದ ಧರ್ಮಕ್ಕೂ ರಾಜ್ಯಕ್ಕೂ ರಾಜನಿಗೂ ಇರುವ ಜೀವಾಳ ಸ೦ಬ೦ಧವು ತಪ್ಪಿಹೋಗಿ, ಕಡಿವಾಣಿಲ್ಲದ ಕುದುರೆಯ೦ತೆ ಅರಸುಗಳ ಸ್ಥಿತಿಯಾಯಿತು; ಇದರಿಂದ ಜನಾ೦ಗದ ಆಳಿಕೆಯಲ್ಲಿ ಜನರ ಕೈ ಸ೦ಪೂರ್ಣವಾಗಿ ಇಲ್ಲದಂತಾಗಿ ಕ್ರಮೇಣ, ನಾಗರಿಕತೆಯ ಕಲ್ಪನೆಗಳೂ ಹಕ್ಕುಗಳೂ ಮರೆತುಹೋದವು. ಇದುವರೆಗೆ ಜನಾ೦ಗದ ಆಳಾಗಿ, ಜನರ ಕ್ಷೇಮ ನೆಮ್ಮದಿಗಳನ್ನು ಒದಗಿಸಲಿಕ್ಕಿದ್ದ ಅರಸನು ಈಗೊಬ್ಬಪುಂಡ ಬಲುಮೆಗಾರನಾದನು. ರಾಜ್ಯ ಪ್ರಜೆಗಳೆಂದರೆ ಈ ಪುಂಡನು ತನ್ನ ಸುಖಕ್ಕಾಗಿ ಮಾರಲಿಕ್ಕೆ ಕೊಂಡಿರುವ ಆಸ್ತಿ. ಒಬ್ಬರೂ ರಾಜನ ಉಗುಳು ದಾಟಲಿಕ್ಕಾಗದು. ಇಂಥ ದುರವಸ್ಥೆಯಲ್ಲಿ ಜನಮ ತವನ್ನು ಲೆಕ್ಕಿಸುವರಾರು ? ಜನಮತವನ್ನಾದರಿಸಿದ ರಾಜನು ರಾಜನಲ್ಲವೆಂದು ಸಾರಿ, ಅವನನ್ನು ಪಟ್ಟದಿ೦ದ ತಳ್ಳುವಷ್ಟು ನೈತಿಕ ಧೈರ್ಯವು ತತ್ಕಾಲೀನ ಹಿಂದೂಜನರಿಗೆ ಸಾಲದ್ದರಿಂದ, ರಾಜ್ಯಪದ್ಧತಿಯ ಭಟ್ಟಿಯೇ ಕೆಟ್ಟುಹೋಯಿತು. ಹಿಂದೂ ಜನರನ್ನು ಈಬಗೆಯಾಗಿ ದಾರಿಗೇಡು ಮಾಡಲಿಕ್ಕೆ ತತ್ಕಾಲಕ್ಕೆ ಅವರಲ್ಲಿ ಬಳಕೆಯಲ್ಲಿರುವ 'ರಾಜನೆಂದರೆ ದೇವರ ಅ೦ಶಾವತಾರ, ರಾಜ್ಯವು ಪೂರ್ವಜನ್ಮದಲ್ಲಿ ಮಾಡಿದ ತಪಸ್ಸಿನ
ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೩
ಈ ಪುಟವನ್ನು ಪ್ರಕಟಿಸಲಾಗಿದೆ
೨೮೬
ಭಾರತೀಯರ ಇತಿಹಾಸವು.