ರಾಜ್ಯಪದ್ಧತಿಗೆ ಮೊದಲಿನಂತೆ, ಹಳ್ಳಿಯೇ ತಳಹದಿಯ ಸಂಸ್ಥೆಯು ಕಾಡಿಗೆ ಕಾಡನ್ನೇ ಹಾಳುಗೊಳಿಸುವ ಬಿರುಗಾಳಿಗಳ ಉರುಬಿಗೆ ಶಿಲ್ಕು ಹೆಮ್ಮರಗಳು ನೆಲಕ್ಕುರುಳಿದರೂ, ಚಿಕ್ಕ ಚಿಕ್ಕ ಗಿಡಗಳು ಕರಿಕೆಯ ಬೇರಿನಂತೆ ಹಾಗೇ ಅಚ್ಚಳಿಯದೆ ಉಳಿದುಕೊಂಡಿರುವಂತೆ, ದೇಶದೊಳಗೆ ಬೇಕಾದಂಥ ಅನಾಹೂತವಾದ ಕಲಕುಮಲಕುಗಳಾಗಲಿ, ಯುದ್ಧದ ಬೇಗೆ ಏಳಲಿ, ಈ ಗ್ರಾಮಸ೦ಸ್ಥೆಗಳಿಗೇನೂ ಧಕ್ಕೆ ತಗಲದೆ ಯಧಾಪ್ರಕಾರ ನಡೆಯುತ್ತಿದ್ದವು. ಈ ಗ್ರಾಮಸಂಸ್ಥೆಯ ವ್ಯವಸ್ಥೆ ನೋಡಿಕೊಳ್ಳಲಿಕ್ಕೆ ಆಕ್ಷಪಟಲಿಕ (ಪಾಟೀಲ-ಗೌಡ) ರೂ ಕರಣಿಕ (ಕುಲಕರ್ಣಿ) ರೂ ತಲೆತಲಾಂತರಗಳಿಂದ ನಿಯಮಿಸಲ್ಪಡುತ್ತಿದ್ದರು. ಆಡಳಿತೆಯ ಅನುಕೂಲಕ್ಕಾಗಿ ಭುಕ್ತಿ, ಮತ ಅಥವಾ ಮಂಡಲಗಳೆಂದು ವಿಭಾಗಗಳನ್ನು೦ಟು ಮಾಡಿದ್ದರು. ವಿಷಯ ಅಥವಾ ಆಹಾರಗಳೆಂದರೆ ಈಗಿನ ತಾಲೂಕುಗಳು. ದಕ್ಷಿಣ ಹಿಂದೂ ದೇಶದೊಳಗೆ ಇವಕ್ಕೇ ನಾಡುಗಳೆ೦ಬ ಹೆಸರು ಬಳೆಸುತ್ತಿದ್ದರು. ಭುಕ್ತಿಗಳೆಂದರೆ ಜಿಲ್ಹೆಗಳು, ಭೂಮಿಯನ್ನು ಅಳೆಯುವದು ಗೊತ್ತಿತ್ತು. ಜನಜೀವನಕ್ಕಗತ್ಯವಾದ ಉಪ್ಪಿನ ಮಾಳಗಳು ಅಲ್ಲಲ್ಲಿ ಲೆಖ್ಖವಿಲ್ಲದಷ್ಟು ಇದ್ದವು ಇದಕ್ಕಾಗಿ ಜನರು ರಾಜನಿಗೆ ತೆರಿಗೆ ತೆರಬೇಕಾಗುತ್ತಿತ್ತು. ರಾಜ್ಯದ ಮೇರೆಯಲ್ಲಿಯೇ ದೊಡ್ಡ ದೊಡ್ಡ ಕಾಡುಗಳಿದ್ದು, ಅಲ್ಲಿಂದ ಜನರು ತಮಗೆ ಸಾಕಾಗುವಷ್ಟು ಉರುವಲ ಕಟ್ಟಿಗೆಯನ್ನು ಕಡಿದುಕೊಂಡು ಬರುತ್ತಿದ್ದರು. ದನಗಳು ಮೇಯಲಿಕ್ಕೆ ವಿಸ್ತಾರವಾದ ಹುಲ್ಲುಗಾವಲಗಳಿದ್ದು, ಮನೆಯ ದನಗಳಿಗೆ ಮೇವಿಗಾಗಿ ಬೇಕಿದ್ದರೆ, ಪುಕ್ಕಟೆಯಾಗಿಯೂ, ಮಾರಾಟಕ್ಕಾದರೆ ಅದರ ಆರನೇ ಪಾಲನ್ನು ಕರವೆ೦ದು ತೆಗೆದುಕೊ೦ಡೂ ಕೊಡುತ್ತಿದ್ದರು. ಒಂದು ಗ್ರಾಮವೆಂದ ಮೇಲೆ ಒಂದು ಅನ್ನಛತ್ರ, ಒ೦ದು ಅರವಟ್ಟಿಗೆ, ಒಂದು ಧರ್ಮಶಾಲೆ, ಒಂದು ಯಜ್ಞಶಾಲೆ ಇವಿಷ್ಟು ಸಂಸ್ಥೆಗಳು ಇದ್ದೇ ತೀರಬೇಕೆಂದು ಗೊತ್ತುವಳಿ. ಮುಗಿಲು ಹರಿದಿರುವದೇನೋ ಎ೦ಬ೦ತೆ ಮಳೆಗಾಲದಲ್ಲಿ ಬಹು ಭಯಂಕರವಾಗಿ ಮಳೆಯು ಸುರಿಯುತ್ತಿದ್ದುದರಿಂದ ಸಾಧಾರಣವಾಗಿ ಯಾರೂ ಪ್ರಯಾಣಕ್ಕೆ ಹೊರಡುತ್ತಿರಲಿಲ್ಲವಾದ್ದರಿಂದ ಸತ್ರ, ಅರವಟ್ಟಿಗೆ
ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೫
ಈ ಪುಟವನ್ನು ಪ್ರಕಟಿಸಲಾಗಿದೆ
೨೮೮
ಭಾರತೀಯರ ಇತಿಹಾಸವು.