ಈ ಪುಟವನ್ನು ಪ್ರಕಟಿಸಲಾಗಿದೆ
ರಾಜ್ಯವ್ಯವಸ್ಥೆ, ದಂಡು ಮು೦ತಾದವು.
೨೮೭

ಫಲ' ವೆಂಬೀ ಹುಟ್ಟು ಹಾಗೂ ಧರ್ಮಾತಿರೇಕದ ಕಲ್ಪನೆಗಳೂ ಶಕುನಾದಿಗಳಲ್ಲಿ ಅವರ ಶ್ರದ್ದೆಯೂ ಇವೇ ಕಾರಣವಾದವೆನ್ನಲಿಕ್ಕೆ ಅಡ್ಡಿಯಿಲ್ಲ. ಇವೆಲ್ಲ ಮಡ್ಡತನದ ಯೋಚನೆಗಳು ಮೆದುಳಿನಲ್ಲಿ ಮನೆಮಾಡಿಕೊ೦ಡಿದ್ದುದರಿಂದ ಹಿಂದೂಜನರ ಮೆದುಳಿನಲ್ಲಿಯ ರಾಜ್ಯಕಾರ್ಯ ವ್ಯವಸಾಯದ ಅಲೋಚನೆಗೈಯುವದೊಂದು ಭಾಗವೇ ಪಾರ್ಶ್ವವಾಯುವಿಗೆಡೆಯಾಯಿತು. ಈ ವಿಚಾರಗಳೇ ಜನರನ್ನು ಹೆಣಮಾಡಿ ಕುಳ್ಳಿರಿಸಿದವು. ರಾಜ್ಯದೊಳಗೆ ಬೇಕಾದಂಧ ಕಲಕುಮಲಕುಗಳಾಗಲಿ, ಜನರು ಜೀವಾ ಒತ್ತಿಯಿಟ್ಟು ಬೇಕಾದಷ್ಟು ಕಷ್ಟಪಡುತ್ತಿದ್ದರೇ ವಿನಾ ಅವನ್ನು ಪ್ರತಿಭಟಿಸುತ್ತಿರಲಿಲ್ಲ. ರಣಹೇಡಿಯಾದ ರಾಜನಿದ್ದರೆ ಬಲಿಷ್ಠನಾದ ದಂಡನಾಯಕನಿಗಾಗಲಿ, ಮಂತ್ರಿಗಾಗಲಿ ರಾಜ್ಯಸೂತ್ರವು ಕೈ ಸೇರಿತೆಂತಲೇ ತಿಳಿಯತಕ್ಕದ್ದು ! ಈ ಕಾಲದೊಳಗಾದ ರಾಜ್ಯಕ್ರಾಂತಿಗೆ ಪ್ರಾಯಶಃ ಮಂತ್ರಿಗಳೂ ಸೇನಾನಾಯಕರೂ ಪ್ರವರ್ತಕರಿದ್ದುದೇ ನಮ್ಮ ತರ್ಕಕ್ಕೆ ಅಡಿಗಲ್ಲಾಗಿದೆ. ಜನರಲ್ಲಿ ನಾಗರಿಕ ಕಲ್ಪನೆಯ ಕೆಂಡವು ಧಗಧಗಿಸುತ್ತಿದ್ದರೆ ಇಂತಹ ವೈಯಕ್ತಿಕ ರಾಜ್ಯಕ್ರಾಂತಿಗಳಿಗೆ ಅವಕಾಶ ಸಿಗುತ್ತಿತ್ತೇ? ನಾವು, ನಮ್ಮ ರಾಜ್ಯವೆಂಬ ಕಲ್ಪನೆಗಳಲ್ಲಿ ಒಗ್ಗಟ್ಟಿನ ಬೆಸುಗೆಯಿಲ್ಲದ್ದರಿಂದಲೂ ಜನರಲ್ಲಿ ರಾಷ್ಟ್ರಜೀವನದ ಬಾಳುವೆಯ ತಿಳಿವಿಲ್ಲದ್ದರಿಂದಲೂ ಇಂತಹ ಘೋರ ಪರಿಣಾಮಗಳಾದವು. ಒಮ್ಮೆ ಮುಗಿಲಿನಲ್ಲಿಯ ಮೆಟ್ಟುತಪ್ಪಿ ಕೆಳಗೆ ಬಿದ್ದ ಗಂಗೆಯು ನೆಲದ ಪಾಲಾಗಿ ಧೋ ಧೋ ಎಂದು ಭೋರ್ಗರೆಯುತ್ತ ಹರಿಯುವಂತೆ, ಪ್ರಾತಿನಿಧಿಕ ಉಚ್ಚ ಮೆಟ್ಟಲಿನಿಂದ ಅಪ್ಪಿ ತಪ್ಪಿ ಅಜ್ಞಾನದಿಂದ ನೆಲಕ್ಕುರುಳಿದ ಹಿಂದೂ ರಾಜಕೀಯ ತತ್ವಗಳು ಗತಿಗಾಣದೆ ಬಹುದಿನಗಳ ವರೆಗೆ ಹಾಗೆಯೇ ಉರುಳುತ್ತರುಳುತ್ತ ನಡೆದು ಕೊನೆಗೆ ಮೇಲಕ್ಕೇಳದಂತೆ ನೆಲಹಿಡಿದು ಬಿದ್ದು ಕೊ೦ಡವು. ಹಿಂದೂ ಜನಾ೦ಗಕ್ಕೆ ಹೇಡಿತನ ಮುತ್ತಿದ ಈ ಗ್ರಹಣಕಾಲವು ಮು೦ದೆಕ್ರಮವಾಗಿ ಬೆಳೆಯುತ್ತಲೇ ಹೋಯಿತಲ್ಲದೆ ಇಳಿಯಲಿಲ್ಲವೆಂಬುದು ಮು೦ಬರುವ ಸಂಗತಿಗಳಿ೦ದ ತಿಳಿಯುವದು.


ರಾಜ್ಯವ್ಯವಸ್ಥೆ, ದಂಡು ಮುಂತಾದವು :- ಹರ್ಷಕಾಲೀನ