ಈ ಪುಟವನ್ನು ಪರಿಶೀಲಿಸಲಾಗಿದೆ
ಭಾರತ ಸಂಶೋಧನೆ
೧೦೧

ಯುದ್ದವು ಶಸ್ತ್ರಸಜ್ಜಿತ ಸೈನ್ಯದಿಂದಲೇ ನಡೆಯಬೇಕು. ಆದರೆ ಶಸ್ತ್ರಾಸ್ತ್ರದ ಶಕ್ತಿಗಿಂತ ಶತ್ರುವನ್ನು
ಅನೀತಿ ಮಾರ್ಗಕ್ಕಿಳಿಸಿ, ಅವನ ಸೈನ್ಯದಲ್ಲಿ ಒಡಕುತಂದು ಯುದ್ಧಾರಂಭದ ಮೊದಲೇ ಅವನ ನಾಶ
ಅಥವ ನಾಶಸನ್ನಿಹಿತ ಮಾಡುವ ಕುಶಾಗ್ರ ಬುದ್ದಿ ಯು ಅತಿ ಮುಖ್ಯ. ತನ್ನ ಕಾರ್ಯ ಸಾಧನೆಯಲ್ಲಿ
ಚಾಣಕ್ಯನು ಯಾವುದಕ್ಕೂ ಹೇಸದವನೂ, ಕಠಿಣ ಮನಸ್ಸನೂ ಆಗಿದ್ದರೂ, ಚತುರನೂ ಉನ್ನತ
ಮನಸ್ಕನೂ ಆದ ಶತ್ರುವನ್ನು ನಾಶ ಮಾಡುವದಕ್ಕಿಂತ ಉಪಾಯದಿಂದ ಒಲಿಸಿಕೊಳ್ಳುವುದು
ಮೇಲೆಂದು ಅರಿತಿದ್ದನು. ಆತನ ಅಂತಿಮ ವಿಜಯವು ಶತ್ರುವಿನ ಪಾಳೆಯದಲ್ಲಿ ಅಸಮಾ
ಧಾನ, ಒಡಕು ತಂದು ಅನೀತಿಯನ್ನು ೦ಟುಮಾಡುವುದರಿಂದಲಾದರೂ ಆ ವಿನಾಶ ಸಮಯದಲ್ಲೇ
ಶತ್ರುವಿಗೆ ಔದಾರ್ ತೋರಿಸೆಂದು ಚಂದ್ರಗುಪ್ತನಿಗೆ ವಿವೇಕ ಹೇಳಿದ. ಚಾಣಕ್ಯನೇ ತನ್ನ ಮಂತ್ರಿ ಪದವಿಯ ಅಧಿಕಾರ ಮುದ್ರೆಯನ್ನು ಎದುರಾಳಿಯ ಮಂತ್ರಿಯ ಕೈಗೆ ಕೊಟ್ಟ ನಂತೆ, ಅದಕ್ಕೆ ಕಾರಣ ಆ ಪ್ರಧಾನಿಯು, ತನ್ನ ರಾಜನಿಗೆ ಅಷ್ಟು ರಾಜನಿಷ್ಠನಾಗಿದ್ದ. ಆ ಕಥೆ ಮುಗಿಯುವುದು ಶತ್ರುವಿನ ಸೋಲು ಮತ್ತು ಅಪಮಾನದಲ್ಲಿ ಅಲ್ಲ ಆದರೆ ಮುಖ್ಯ ಶತ್ರುವು ಸೋತಿದ್ದರೂ ಆತನನ್ನು ಒಲಿಸಿಕೊಂಡು ಶಾಂತಿ ಸಮಾಧಾನದ ಭದ್ರವಾದ ಅಡಿಗಲ್ಲಿನ ಮೇಲೆ ಭದ್ರವಾಗಿ ಕಟ್ಟಿದ ಒಂದು ಹೊಸ ರಾಷ್ಟ್ರ ನಿರ್ಮಾಣದಲ್ಲಿ.

ಮೌರ್ಯ ಸಾಮ್ರಾಜ್ಯವು ಗ್ರೀಕ್ ಪ್ರಪಂಚದೊಡನೆ ರಾಯಭಾರಸಂಬಂಧವನ್ನಿಟ್ಟುಕೊಂಡಿತು ; ಸೆಲ್ಯೂಕಸ್ ನ ವಂಶಜರು ಟೋಲೆಮಿ ಫಿಲೆಡೆಲ್ಪ ಸ್ ರೊಂದಿಗೆ ಸಹ ಸಂಬಂಧವಿತ್ತು. ಪರಸ್ಪರ ಪ್ಯಾಪಾರ ವ್ಯವಹಾರದಮೇಲೆ ಈ ಸಂಬಂಧವು ತುಂಬ ಅನ್ಯೂನ್ಯವಿತ್ತು. “ಕ್ಯಾಸ್ಪಿಯನ್ ಮತ್ತು ಕಪ್ಪು ಸಮುದ್ರಗಳ ಮಾರ್ಗವಾಗಿ ಯೂರೋಪಿಗೆ ಸಾಗುತ್ತಿದ್ದ ಭಾರತೀಯ ವಸ್ತುಗಳಿಗೆ ಮಧ್ಯ ಏಷ್ಯ ದಲ್ಲಿದ್ದ ಆಕ್ಸಸ್ ನದಿಯು ಒಂದು ಮುಖ್ಯ ಮಾರ್ಗವಾಗಿತ್ತು” ಎಂದು ಸ್ವಾಬೊ ಹೇಳುತ್ತಾನೆ. ಈ ಮಾರ್ಗ ಕ್ರಿಸ್ತಪೂರ್ವ ಮೂರನೆಯ ಶತಮಾನದಲ್ಲಿ ಬಹಳ ಜನಾದರಣೀಯವಾಗಿತ್ತು; ಆಗ ಮಧ್ಯ ಏಷ್ಯ ಫಲವತ್ತಾದ ಸಂಪದ್ಯುಕ್ತ ಪ್ರದೇಶವಾಗಿತ್ತು. ಸುಮಾರು ಸಾವಿರ ವರ್ಷಗಳ ನಂತರ ಒಣಗಿ ಮರುಭೂಮಿಯಾಯಿತು. ಚಂದ್ರಗುಪ್ತನ ಆಶ್ವ ಶಾಲೆಯಲ್ಲಿ ಅರಬ್ಬಿ ಕುದುರೆಗಳಿದ್ದವೆಂದು ಅರ್ಥ ಶಾಸ್ತ್ರವು ತಿಳಿಸುತ್ತದೆ.

೧೮. ರಾಜ್ಯ ರಚನೆ

ಕ್ರಿಸ್ತಪೂರ್ವ ೩೨೧ ರಲ್ಲಿ ಜನ್ಮತಾಳಿ, ಭಾರತದ ಬಹು ಭಾಗವನ್ನಾ ಕ್ರಮಿಸಿ ಉತ್ತರದಲ್ಲಿ ಕಾಬೂಲ್‌ವರೆಗೆ ವಿಸ್ತಾರವಾಗಿದ್ದ ಈ ರಾಜ್ಯದ ರಚನೆ ಹೇಗೆ ಇತ್ತು ? ಎಲ್ಲ ಸಾಮ್ರಾಜ್ಯಗಳಿದ್ದಂತೆ ಮತ್ತು ಈಗಲೂ ಇರುವಂತೆ ನಿರಂಕುಶಾಧಿಪತ್ಯ, ಕೇಂದ್ರದಲ್ಲಿ ಸರ್ವಾಧಿಕಾರವಿತ್ತು. ಆದರೆ ನಗರ ಗಳಲ್ಲಿ, ಹಳ್ಳಿಗಳಲ್ಲಿ ಬಹುಮಟ್ಟಿನ ಸ್ಥಳೀಯ ಸ್ವಾತಂತ್ರವಿತ್ತು. ಚುನಾಯಿತ ವೃದ್ದರು ಈ ಸ್ಥಳೀಯ ಅಧಿಕಾರಗಳನ್ನು ನಿರ್ವಹಿಸುತ್ತಿದ್ದರು. ಈ ಸ್ಥಳೀಯ ಸ್ವಾತಂತ್ರಕ್ಕೆ ಬಹಳ ಬೆಲೆಯಿತ್ತು. ಯಾವ ರಾಜನಾಗಲಿ, ಚಕ್ರವರ್ತಿಯಾಗಲಿ ಈ ಸ್ಥಳೀಯ ಸ್ವಾತಂತ್ರವನ್ನು ಅಪಹರಿಸುವ ಧೈರ್ಯ ಮಾಡಲಿಲ್ಲ. ಆದರೂ ಕೇಂದ್ರ ಸರ್ಕಾರದ ಪ್ರಭಾವ ಮತ್ತು ಸರ್ವತೋಮುಖ ಕಾರ್ಯ ಚಟುವಟಿಕೆಗಳು ಸರ್ವವ್ಯಾಪಕವಿದ್ದವು ; ಕೆಲವು ವಿಷಯಗಳಲ್ಲಿ ಮೌರ್ಯ ಚಕ್ರಾಧಿಪತ್ಯವು ಈಗಿನ ಸರ್ವಾಧಿಕಾರ ಪ್ರಭುತ್ವವನ್ನು ಬಹುಮಟ್ಟಿಗೆ ಹೋಲುತ್ತದೆ. ಈಗಿನ ಕಾಲದಹಾಗೆ ರಾಜ್ಯಾಧಿಕಾರದಿಂದ ವ್ಯಕ್ತಿ ಸ್ವಾತಂತ್ರದ ಅಪಹರಣವಾದಂತೆ ಆಗಿನ ಸಂಪೂರ್ಣ ಕೃಷಿಯುಗದಲ್ಲಿ ಖಂಡಿತ ಸಾಧ್ಯವಿರಲಿಲ್ಲ. ಆದರೆ ಈ ತೊಂದರೆಗಳೆಷ್ಟೇ ಇದ್ದರೂ ರಾಷ್ಟ್ರ ಜೀವನವನ್ನು ಹಿಡಿತದಲ್ಲಿಟ್ಟು ಕೊಂಡು ನಿಯತಮಾರ್ಗ ದಲ್ಲೊ ಯ್ಯಲು ಪ್ರಯತ್ನ ನಡೆಯಿತು. ಕೇವಲ ಕಂದಾಯವನ್ನು ವಸೂಲುಮಾಡಿ, ಒಳಹೊರಗಿನ ಶಾಂತಿ ರಕ್ಷಣೆ ಮಾಡಿದರೆ ಆಯಿತೆಂಬ ಪೋಲಿಸ್ ರಾಜ್ಯಕ್ಕೂ ಅದಕ್ಕೂ ಬಹಳ ಅಂತರವಿತ್ತು. ಎಲ್ಲೆಲ್ಲೂ ಹಬ್ಬಿದ್ದ, ಕಠಿಣವಾದ ಅಧಿಕಾರವರ್ಗವಿತ್ತು. ಗೂಢಚಾರರಿದ್ದರೆಂದೂ ಅಲ್ಲಲ್ಲಿ ಉಲ್ಲೇಖ