ಈ ಪುಟವನ್ನು ಪರಿಶೀಲಿಸಲಾಗಿದೆ

೧೦೬

ಭಾರತ ದರ್ಶನ

ಅಪರಿವರ್ತಿತವೂ ಅಲ್ಲ, ಆದರೆ ಒಂದು ಬಗೆಯ ಉಜ್ವಲ ಶಕ್ತಿಯ ಪ್ರಭಾವ ಪೂರ್ಣ, ಚಲನವಲನ ವಸ್ತು ಕ್ರಮಾನುಗತ ಪರಿಣಾಮ ಪರಂಪರೆ, ಕಾಲದ ಕಲ್ಪನೆಯು ಆ ಈ ಘಟನೆಯಿಂದ ಕೇವಲ ರೂಢಿಯಿಂದ ಬೇರ್ಪಡಿಸಿದ ಭಾವನೆ. ಪರಿವರ್ತನೆಯಾಗುವ ಶಾಶ್ವತ ವಸ್ತುವಿನ ಅಂತರ್ಭಾಗ ಯಾವುದೂ ಇಲ್ಲದಿರುವುದರಿಂದ ಒಂದು ಇನ್ನೊಂದರ ಕಾರಣದಿಂದ ಎಂದು ಹೇಳಲು ಸಾಧ್ಯವಿಲ್ಲ. ಇತರ ವಸ್ತುಗಳೊಡನೆ ಒಂದು ವಸ್ತುವಿನ ಸಂಬಂಧದ ಅಂತರ್ನಿಯಮವೇ ಆ ವಸ್ತುವಿನ ಮೂಲತತ್ವ, ನಮ್ಮ ದೇಹಗಳು ಮತ್ತು ಆತ್ಮಗಳು ಕ್ಷಣಕ್ಷಣಕ್ಕೂ ಪರಿವರ್ತನೆ ಹೊಂದುತ್ತಿವೆ. ಹೋದ ಕ್ಷಣದಲ್ಲಿದ್ದಂತೆ ಈ ಕ್ಷಣದಲ್ಲಿಲ್ಲ; ಅವು ಇಲ್ಲವಾಗಿ ಅವುಗಳ೦ತೆ ಬೇರೆ ಯಾವುವೋ ಆದರೆ ಪ್ರತ್ಯೇಕವಾದ ವಸ್ತುಗಳಾಗಿ ಅವೂ ಗತಕಾಲವನ್ನು ಸೇರುತ್ತವೆ. ಒಂದು ದೃಷ್ಟಿಯಲ್ಲಿ ಪ್ರತಿಕ್ಷಣವೂ ನಾವು ಸಾಯುತ್ತಿದ್ದೇವೆ, ಮತ್ತು ಪುನರ್ಜನ್ಮ ತಾಳುತ್ತಿದ್ದೇವೆ ; ಈ ಅನುಕ್ರಮಣ ಪರಂಪರೆ ಅವಿಚ್ಛಿನ್ನ ಅನನ್ಯತೆಯ ರೂಪುಕೊಟ್ಟಿದೆ. ಅದು “ಸದಾ ಪರಿವರ್ತನೆಯಾಗುತ್ತಿರುವ ಅನನ್ಯತೆಯ ನೈರಂತರ್ಯ.” ಎಲ್ಲವೂ ಪರಿವರ್ತನೆ, ಚಲನೆ, ರೂಪಾಂತರ.

ಭೌತಕಾರ್ಯವನ್ನು ಯಾವುದೋ ನಿಯತಮಾರ್ಗದಲ್ಲೇ ಭಾವಿಸಿ, ಅರ್ಥಮಾಡಿಕೊಳ್ಳುತ್ತಿರುವ ನಮಗೆ ಈ ವಿಷಯಗಳನ್ನೆಲ್ಲ ಗ್ರಹಿಸುವುದು ಕಷ್ಟ. ಆದರೂ ಆಧುನಿಕ ಭೌತಶಾಸ್ತ್ರ ಮತ್ತು ಆಧುನಿಕ ತತ್ವಶಾಸ್ತ್ರಗಳ ಭಾವನೆಗೆ ಬೌದ್ಧದರ್ಶನ ಎಷ್ಟು ಸಮಾಪವಿದೆ ಎಂಬುದನ್ನು ಗಮನಿಸಿದರೆ ಅತ್ಯಾಶ್ಚರ್ಯವಾಗುತ್ತದೆ.

ಬುದ್ಧನ ಮಾರ್ಗ ಮನಶ್ಯಾಸ್ತ್ರದ ವಿಶ್ಲೇಷಣ ಪದ್ಧತಿ, ಅಲ್ಲಿಯೂ ಸಹ ಆಧುನಿಕ ವಿಜ್ಞಾನ ಶಾಸ್ತ್ರಗಳಲ್ಲೊಂದಾದ ಮನಶ್ಯಾಸ್ತದ ಇತ್ತೀಚಿನ ಸಂಶೋಧನೆಗಳಿಗೆ ಎಷ್ಟು ಸಮಾಪವಿದ್ದಾನೆಂದು ನೋಡಿದರೆ ಆರ್ಶಯವಾಗುತ್ತದೆ, ಪರಮಾತ್ಮನ ಸಂಪರ್ಕವಿಲ್ಲದೆ ಮಾನವ ಜೀವನವನ್ನು ಯೋಚಿಸಿ ಪರೀಕ್ಷಿಸಲಾಯಿತು, ಏಕೆಂದರೆ ಅಂತಹ ಪರಮಾತ್ಮನಿದ್ದರೂ ಅವನು ನಮ್ಮ ಜ್ಞಾನದೃಷ್ಟಿಗೆ ಅತೀತ. ಮನಸ್ಸು ಮನಶ್ಯಕ್ತಿಗಳ ಸಂಗ್ರಹವಾದ ದೇಹದ ಒಂದು ಅಂಗ, ವ್ಯಕ್ತಿಯೂ ಈ ರೀತಿ ಮಾನಸಿಕ ಅವಸ್ಥೆಗಳ ಒಂದು ಗುಚ್ಛ, ಆತ್ಮವು ಭಾವನೆಗಳ ಒಂದು ವಾಹಿನಿಮಾತ್ರ. “ನಮ್ಮ ಭಾವನೆಗಳ ಪರಿಣಾಮವೇ ನಮ್ಮ ಇಂದಿನ ಇರವು.”

ಜೀವನದಲ್ಲಿ ನೋವು ಮತ್ತು ಸಂಕಟಗಳಿಗೆ ಮಹತ್ವ ಕೊಡಲಾಗಿದೆ. ಬುದ್ಧನು ಬೋಧಿಸಿದ ನಾಲ್ಕು ಮಹಾ ಸತ್ಯಗಳು ಈ ಸಂಕಟ, ಅದರ ಕಾರಣ, ಅದರ ನಿವಾರಣೆಯ ಸಾಧ್ಯಾಸಾಧ್ಯತೆ ಮತ್ತು ನಿವಾರಣಾಮಾರ್ಗಗಳ ವಿಷಯವನ್ನೇ ತಿಳಿಸುತ್ತವೆ. ಅವನು ತನ್ನ ಶಿಷ್ಯರಿಗೆ ಬೋಧೆಮಾಡುತ್ತ, “ಯುಗಯುಗಗಳಿಂದ ನೀವು ಈ ಸಂಕಟವನ್ನು ಅನುಭವಿಸುತ್ತಾ ಬಂದಾಗ ಚತುಸ್ಸಾಗರಗಳ ನೀರಿಗಿಂತ ಹೆಚ್ಚು ಕಣ್ಣೀರು ಸುರಿಸಿದ್ದೀರಿ; ಈ ಜೀವನ ಯಾತ್ರೆಯಲ್ಲಿ ದಾರಿತಪ್ಪಿ ಅಲೆದು ವ್ಯಥೆಪಟ್ಟು ಅತ್ತಿದ್ದೀರಿ; ಏಕೆಂದರೆ ನಿಮಗೆ ಅಹಿತವಾದುದೇ ನಿಮ್ಮ ಪಾಲಿಗೆ ಬಂದಿತು ; ನಿಮಗೆ ಪ್ರಿಯವಾದದ್ದು ನಿಮ್ಮ ಪಾಲಿಗೆ ಬರಲಿಲ್ಲ” ಎಂದು ಹೇಳಿದನಂತೆ.

ಈ ಸಂಕಟ ಸ್ಥಿತಿಯ ನಿವಾರಣೆಯೇ “ನಿರ್ವಾಣ.' 'ನಿರ್ವಾಣ' ಎಂದರೇನು ಎನ್ನುವುದರಲ್ಲಿ ಅನೇಕರು ಅನೇಕ ವಿಧವಾಗಿ ಅರ್ಥಮಾಡುತ್ತಾರೆ. ನಮ್ಮ ಪರಿಮಿತ ಮನೋಭಾವನೆಗಳ ಪ್ರಮಾಣ ದಲ್ಲಿ, ಅಸಮರ್ಥ ಭಾಷೆಯಲ್ಲಿ ಅಲೌಕಿಕ ಗಹನಸ್ಥಿತಿಯನ್ನು ವರ್ಣಿಸುವುದು ಬಹು ಕಷ್ಟ, ನಿರ್ವಾಣ ಎಂದರೆ ನಿರ್ನಾಮವಾಗುವುದು, ನಾಶವಾಗುವುದು ಎಂದು ಕೆಲವರ ಮತ. ಆದರೆ ಬುದ್ದನು “ಅದು ಒಂದು ಉತ್ಕಟಕ್ರಿಯಾವಸ್ಥೆ” ಎಂದು ಹೇಳಿದನಂತೆ. ಅದು ದುರ್ವ್ಯಾಮೋಹದ ನಾಶ, ಬರಿ ನಾಶ ವಲ್ಲ. ಇದಲ್ಲ ಇದಲ್ಲ ಎಂದು ಹೇಳಬಹುದೇ ವಿನಾ ಇದೇ ಎಂದು ಹೇಳಲು ಸಾಧ್ಯವಿಲ್ಲ.

ಬುದ್ಧನ ಮಾರ್ಗ ಭೋಗಾಸಕ್ತ ಜೀವನಕ್ಕೂ, ಆತ್ಮನಿಗ್ರಹಕ್ಕೂ ಮಧ್ಯಮಾರ್ಗ. ತಾನೇ ದೇಹದಂಡನೆ ಮಾಡಿಕೊಂಡ ತನ್ನ ಅನುಭವದಿಂದ, ದೇಹಶಕ್ತಿಯಿಲ್ಲದವನು ಸನ್ಮಾರ್ಗದಲ್ಲಿ ಮುಂದುವರಿಯಲಾರ ಎಂದು ಹೇಳಿದ. ಈ ಮಧ್ಯಮಾರ್ಗವೇ ಆರರ ಅಷ್ಟ ವಿಧಮಾರ್ಗ, ಸದಾಚಾರ, ಸದಾಶೆ,