ಈ ಪುಟವನ್ನು ಪರಿಶೀಲಿಸಲಾಗಿದೆ
ಭಾರತ ಸಂಶೋಧನೆ
೧೦೭

ಸನ್ನು ಡಿ, ಸನ್ನಡತೆ, ಸಜೀವನ, ಸತ್ಪ್ರಯತ್ನ, ಸದ್ಭಾವನೆ ಮತ್ತು ಸತ್ರಾರ್ಥನೆ, ಇವೆಲ್ಲ ಆಕ್ರೋನ್ನತಿಯ ವಿಷಯ ಇದರಲ್ಲಿ ವರ ಪ್ರಸಾದವೇನೂ ಇಲ್ಲ. ಯಾರೇ ಆಗಲಿ ಈ ದಾರಿಯಲ್ಲಿ ನಡೆದು ಕೃತಕೃತ್ಯನಾದರೆ ಆತನಿಗೆ ಸೋಲೆಂಬುದಿಲ್ಲ. ಆತ್ಮಾರ್ಪಣೆ ಮಾಡಿದ ಮನುಷ್ಯನ ವಿಜಯವನ್ನು ಅಪಜಯಗೊಳಿಸಲು ದೇವರಿಗೂ ಸಾಧ್ಯವಿಲ್ಲ.

ಬುದ್ಧನು ತನ್ನ ಶಿಷ್ಯರಿಗೆ ಅವರ ತಿಳಿವಿನ ಮಟ್ಟಕ್ಕೆ ನಿಲುಕುವ ಮತ್ತು ಆಚರಣೆಗೆ ಸಾಧ್ಯವಾದ ಬೋಧೆಯನ್ನೇ ಮಾಡಿದ. ಆತನ ಬೋಧೆ ಎಲ್ಲ ವಸ್ತು ವಿನ ಪೂರ್ಣ ರಹಸ್ಯವನ್ನು ತಿಳಿಸುವ ಪ್ರಯತ್ನವಲ್ಲ; ಎಲ್ಲವನ್ನೂ ವಿವರಿಸುವ ಉದ್ದೇಶವೂ ಅದಕ್ಕಿರಲಿಲ್ಲ. ಒಂದು ಬಾರಿ ಕೆಲವು ತರಗೆಲೆಗಳನ್ನು ತನ್ನ ಕೈಲಿ ತೆಗೆದುಕೊಂಡು, ತನ್ನ ಕೈಲಿರುವ ಎಲೆಗಳಲ್ಲದೆ ಬೇರೆ ಎಲೆಗಳು ಏನಾದರೂ ಇವೆಯೇ ಎಂದು ತನ್ನ ಪ್ರಿಯ ಶಿಷ್ಯನಾದ ಆನಂದನನ್ನು ಕೇಳಿದನಂತೆ. “ಮಾಗಿಯ ಎಲೆಗಳು ಸುತ್ತಲೂ ಉದುರುತ್ತಿವೆ. ಇನ್ನೂ ಎಣಿಸಲಾರದಷ್ಟು ಎಲೆಗಳಿವೆ ” ಎಂದನಂತೆ. ಆಗ ಬುದ್ದ “ಅದೇ ರೀತಿ ಕೆಲವು ಸತ್ಯಗಳನ್ನು ಮಾತ್ರ ನಿಮಗೆ ತಿಳಿಸಿದ್ದೇನೆ. ಇವಲ್ಲದೆ ಸಾವಿರಾರು ಸತ್ಯಗಳು ಎಣಿಸಲಾರದಷ್ಟಿವೆ” ಎಂದನಂತೆ.

೨೦. ಬುದ್ಧನ ಕಥೆ

ಬುದ್ದನ ಕಥೆಯು ಬಾಲ್ಯದಲ್ಲಿಯೇ ನನ್ನ ಮನಸ್ಸನ್ನು ಸೆಳೆಯಿತು; ಅನೇಕ ಅಂತರ್ಯುದ್ಧಗಳು ನೋವು ಸಂಕಟಗಳನ್ನು ಅನುಭವಿಸಿ ಬುದ್ದನಾದ ಆ ಹುಡುಗ ಸಿದ್ದಾರ್ಥನು ನನ್ನ ಆದರ್ಶ ಪುರುಷ ನಾದ. ಎಡ್ವಿನ್ ಆರ್ನಾಲ್ಡ್ ನ ಏಷ್ಯದ ಜ್ಯೋತಿ (Light of Asia) ನನ್ನ ಮೆಚ್ಚಿನ ಪುಸ್ತಕವಾಯಿತು, ಅನೇಕ ವರ್ಷಗಳ ನಂತರ ನನ್ನ ಪ್ರಾಂತ್ಯದಲ್ಲಿ ನಾನು ದೀರ್ಘ ಪ್ರವಾಸ ಮಾಡಿದಾಗ ಬುದ್ದನ ಇತಿಹಾಸಕ್ಕೆ ಸಂಬಂಧಿಸಿದ ಸ್ಥಳಗಳನ್ನೆಲ್ಲ ನೋಡಿದೆ, ಕೆಲವು ವೇಳೆ ಅದೇ ಉದ್ದಿಶ್ಯದಿಂದ ಪ್ರಯಾಣಹೋಗುತ್ತಿದ್ದೆ. ಇವುಗಳೆಲ್ಲವೂ ನನ್ನ ಪ್ರಾಂತ್ಯ ಅಥವ ಅದರ ಸಮಾಸದಲ್ಲಿವೆ. ಇದೋ ಇಲ್ಲಿ (ನೇಪಾಲದ ಗಡಿಯಲ್ಲಿ) ಬುದ್ಧನ ಜನ್ಮಸ್ಥಳ, ಇಲ್ಲಿ ಅವನು ಓಡಾಡಿದ ಸ್ಥಳ, ಇಲ್ಲಿ (ಬೀಹಾರಿನ ಗದಲ್ಲಿ) ಬೋಧಿ ವೃಕ್ಷದ ಕೆಳಗೆ ಕುಳಿತು ಬೆಳಕನ್ನು ಕಂಡ ಸ್ಥಳ, ಇಲ್ಲಿ ಅವನು ತನ್ನ ಪ್ರಥಮ ಬೋಧೆಯನ್ನು ಉಪದೇಶ ಮಾಡಿದ ಸ್ಥಳ, ಇಲ್ಲಿ ಅವನು ದೇಹವಿಟ್ಟ ಸ್ಥಳ ; ಎಲ್ಲವೂ ಇಲ್ಲಿಯೇ ?

ಬೌದ್ಧ ಧರ್ಮವು ಇನ್ನೂ ಜೀವಂತ ಮತ್ತು ಪ್ರಧಾನ ಧರ್ಮವಾಗಿರುವ ದೇಶಗಳಿಗೆ ಹೋದಾಗ ಅವರ ದೇವಸ್ಥಾನಗಳನ್ನು ವಿಹಾರಗಳನ್ನು ನೋಡಲು ಹೋಗುತ್ತಿದ್ದೆ. ಅವರ ಸಂನ್ಯಾಸಿಗಳನ್ನೂ, ಇತರರನ್ನೂ ಕಂಡು ಬೌದ್ಧ ಮತವು ಜನರಿಗೆ ಯಾವ ಪ್ರಯೋಜನವಾಡಿದೆ ಎಂದು ತಿಳಿದುಕೊಳ್ಳಲು ಪ್ರಯತ್ನ ಮಾಡಿದೆ, ಅವರ ಮೇಲೆ ಯಾವ ಪ್ರಭಾವ ಬೀರಿತ್ತು, ಅವರ ಮನಸ್ಸಿನ ಮೇಲೆ, ಮುಖದಮೇಲೆ ಯಾವ ವರ್ಚಸ್ಸನ್ನು ಬೀರಿತ್ತು, ಆಧುನಿಕ ಜೀವನಕ್ಕೆ ಅವರ ಪ್ರತಿಕ್ರಿಯೆ ಏನು ? ಎಷ್ಟೋ ವಿಷಯ ನನಗೆ ಸರಿತೋರಲಿಲ್ಲ. ವಿಚಾರಪೂರಿತ ನೈತಿಕ ಧರ್ಮದ ಮೇಲೆ ಅಸಾಧ್ಯ ಶಬ್ದಾಡಂಬರದ ಹೊರೆ, ವಿಧಿ ಕ್ರಮಗಳು, ಶಾಸ್ತ್ರ ನಿಯಮಗಳು, ಮತ್ತು ಬುದ್ಧನೇ ಬೇಡವೆಂದ ತಾತ್ವಿಕವಾದಗಳು ಮತ್ತು ಇಂದ್ರಜಾಲ ವಿದ್ಯೆ ಸಹ ಬೆಳೆದು ಜೊಂಡುಗಟ್ಟಿತ್ತು, ಬುದ್ದನು ಎಚ್ಚರಿಕೆ ಕೊಟ್ಟಿದ್ದರೂ ಅವನನ್ನು ದೈವತ್ವಕ್ಕೇರಿಸಿದ್ದರು. ದೇವಸ್ಥಾನಗಳಲ್ಲಿ, ಇತರ ಕಡೆಗಳಲ್ಲಿ ಅವನ ಬೃಹದಾಕಾರದ ವಿಗ್ರಹಗಳು ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದವು. ಬುದ್ಧನೇ ಪುನರವತಾರ ಮಾಡಿದರೆ ಏನು ಅಂದುಕೊಳ್ಳುತ್ತಾನೋ ಎಂದು ಚಕಿತನಾದೆ, ಸಂನ್ಯಾಸಿಗಳನೇಕರು ಜ್ಞಾನ ಶೂನ್ಯರು ; ದುರಂಹಕಾರಿಗಳು ; ತಮಗಲ್ಲದಿದ್ದರೂ ತಮ್ಮ ಕಾಷಾಯಗಳಿಗೆ ಪೂಜಾಪೇಕ್ಷಿಗಳು. ಪ್ರತಿಯೊಂದು ದೇಶದಲ್ಲಿ ರಾಷ್ಟ್ರದ ಹುಟ್ಟು ಗುಣವು ಧರ್ಮದಮೇಲೂ ತನ್ನ ದರ್ಪ ತೋರಿಸಿತ್ತು. ತನ್ನ ಪೂರ್ವ ಪದ್ಧತಿಯ ಮತ್ತು ಜೀವನ ಕ್ರಮದ ವೈಶಿಷ್ಟಕ್ಕನುಗುಣವಾಗಿ ಧರ್ಮವನ್ನು ವಿಕೃತಿಗೊಳಿಸಿತು.