ಅಧ್ಯಾಯ ೫: ಯುಗಾಂತರಗಳು
೧. ಗುಪ್ತರ ಕಾಲದಲ್ಲಿ ರಾಷ್ಟ್ರೀಯಭಾವ ಮತ್ತು ಸಾಮ್ರಾಜ್ಯಭಾವ
ಮೌರ್ಯ ಸಾಮ್ರಾಜ್ಯವು ಬಲಗುಂದಿ ಸುಂಗ ರಾಜವಂಶಕ್ಕೆ ಅವಕಾಶಕೊಟ್ಟಿತು. ಸುಂಗರ ರಾಜ್ಯ ಬಹಳ ಚಿಕ್ಕದು. ದಕ್ಷಿಣದಲ್ಲಿ ಮಹಾರಾಷ್ಟ್ರಗಳು ಉದ್ಭವಿಸುತ್ತ ಇದ್ದವು. ಉತ್ತರದಲ್ಲಿ ಬ್ಯಾಕ್ಟಯನರು ಅಥವ ಇಂಡೋ ಗ್ರೀಕರು ಕಾಬೂಲಿನಿಂದ ಪಂಜಾಬ್‌ವರೆಗೆ ಹರಡುತ್ತ ಇದ್ದರು ; ಮಿನಾಂಡರನ ನಾಯಕತ್ವದಲ್ಲಿ ಪಾಟಲೀಪುತ್ರನನ್ನು ಮುತ್ತಿಗೆ ಹಾಕುವ ಪ್ರಯತ್ನದಲ್ಲಿದ್ದರು; ಆದರೆ ಅಷ್ಟರಲ್ಲಿ ಸೋತು ಹಿಂದಿರುಗಿದರು. ಮಿನಾಂಡರ್ ಭಾರತೀಯ ಸಂಸ್ಕೃತಿ ಮತ್ತು ವಾತಾವರಣಕ್ಕೆ ಮನ ಸೋತು ಬುದ್ದನಾದ. ಬೌದ್ಧ ಗ್ರಂಥಗಳಲ್ಲಿ ರಾಜಮಿಲಿಂದ ಎಂದು ಪ್ರಸಿದ್ಧನಾಗಿದ್ದಾನೆ. ಮತ್ತೆ ಆತನೂ ಒಬ್ಬ ಬೌದ್ಧ ಗುರುವೆಂದೇ ಭಾವಿಸಲ್ಪಟ್ಟಿದಾನೆ, ಭಾರತೀಯ ಮತ್ತು ಗ್ರೀಕ್ ಸಂಸ್ಕೃತಿಗಳ ಸಂಯೋಗ ದಿಂದ ಆ ಪ್ಲಾನಿಸ್ಥಾನ ಮತ್ತು ಗಡಿನಾಡಿನಲ್ಲೆಲ್ಲ ಹಬ್ಬಿರುವ ಗಾಂಧಾರದ ಗ್ರೀಕ್ ಬೌದ್ಧ ಕಲೆ ಹುಟ್ಟಲು ಅವಕಾಶವಾಯಿತು.
ಮಧ್ಯ ಇ೦ಡಿಯದಲ್ಲಿ ಸಾಂಚಿಯ ಹತ್ತಿರ ಬೆಸ್ನಗರದಲ್ಲಿ ಕ್ರಿಸ್ತಪೂರ್ವ ಒಂದನೆಯ ಶತಮಾನದ ಸಂಸ್ಕೃತ ಲಿಪಿ ಶಾಸನವಿರುವ ಹೆಲಿಯೊಡೊರಸ್ ಕಂಬ ಎನ್ನುವ ಒಂದು ಕಲ್ಲು ಕಂಬವಿದೆ. ವಾಯವ್ಯ ಪ್ರಾಂತ್ಯಕ್ಕೆ ಬಂದ ಗ್ರೀಕರು ಹೇಗೆ ಭಾರತೀಯರಾದರು, ಭಾರತೀಯ ಸಂಸ್ಕೃತಿ ಅವರನ್ನು ತನ್ನೊಳಗೆ ಹೇಗೆ ಸೇರಿಸಿಕೊಂಡಿತು ಎಂಬುದಕ್ಕೆ ಇದು ಒಂದು ಕಿರು ನೋಟ, ಆ ಶಾಸನ ಈ ರೀತಿ ಇದೆ. “ಆ ಪದ್ಯಕ್ಷನಾದ ಕಾಶಿ ಪುತ್ರ ಭಾಗಭದ್ರನ ರಾಜಾಸ್ಥಾನಕ್ಕೆ ಆತನ ರಾಜ್ಯಭಾರದ ಹದಿನಾಲ್ಕನೆಯ ವರ್ಷದಲ್ಲಿ ಆ೦ಟಿಯಾಲ್ಕಿಡಾಸ್ ಮಹಾರಾಜನ ಗ್ರೀಕ್ ರಾಯಭಾರಿಯಾಗಿ ಬಂದ ಡೈಯಾನ್ನ ಮಗನೂ, ತಕ್ಷಶಿಲೆಯ ವಾಸಸ್ಥನೂ, ವಿಷ್ಣು ಆರಾಧಕನೂ ಆದ ಹೆಲಿಯೊಡೊರಸ್ ದೇವದೇವನಾದ ವಾಸುದೇವ (ವಿಷ್ಣು ವಿನ) ಈ ಗರುಡಗಂಭವನ್ನು ನಿಲ್ಲಿಸಿದನು.
“ಅಮರ ಸಿದ್ಧಾಂತಗಳು ಮೂರು : ಆತ್ಮ ನಿಗ್ರಹ, ಆತ್ಮತ್ಯಾಗ ಮತ್ತು ಆತ್ಮಸಾಕ್ಷಿ. ಇವುಗಳ ಸರಿಯಾದ ಆಚರಣೆಯೇ ಮೋಕ್ಷಕ್ಕೆ ಮಾರ್ಗ.”
ಮಧ್ಯ ಏಷ್ಯದ ಶಕರು ಅಥವ ಸಿಥಿಯನರು ಆಕ್ಸಸ್ ಕಣಿವೆಯಲ್ಲಿ ನೆಲಸಿದ್ದರು. ಅದಕ್ಕೂ ಪೂರ್ವದಿಂದ ಬಂದ ಯೂಯೆ ಚಿ ಅವರನ್ನು ಅಲ್ಲಿಂದ ಓಡಿಸಿ ಉತ್ತರ ಭಾರತದೊಳಕ್ಕೆ ನೂಕಿದ. ಈ ಶಕರು ಬೌದ್ಧ ಮತ್ತು ಹಿಂದೂ ಧರ್ಮಗಳನ್ನು ಅವಲಂಬಿಸಿದರು. ಯೂಯೇ ಚಿಗಳಲ್ಲಿ ಕುಶಾನರೆಂಬ ಒಂದು ಪಂಗಡ ತಮ್ಮ ಸ್ವಸಾಮರ್ಥ್ಯದಿಂದ ರಾಜ್ಯ ಸ್ಥಾಪನೆಮಾಡಿ ಉತ್ತರ ಹಿಂದೂಸ್ಥಾನವನ್ನೆಲ್ಲ ಆಕ್ರಮಿಸಿದರು. ಅವರು ಶಕರನ್ನೂ ಸೋಲಿಸಿ ಅವರನ್ನು ಇನ್ನೂ ದಕ್ಷಿಣಕ್ಕೆ ದೂಡಿದರು. ಶಕರು ಕಾಥೇವಾಡ ಮತ್ತು ದಕ್ಷಿಣಕ್ಕೆ ಬಂದರು. ಆಮೇಲೆ ಕುಶಾನರು ಸಂಪೂರ್ಣ ಉತ್ತರ ಹಿಂದೂಸ್ತಾನ ಮತ್ತು ಮಧ್ಯ ಏಷ್ಯದ ಬಹುಭಾಗದಲ್ಲಿ ವಿಶಾಲವೂ ಭದ್ರವೂ ಆದ ಒಂದು ಸಾಮ್ರಾಜ್ಯವನ್ನು ಕಟ್ಟಿದರು. ಅವರಲ್ಲಿ ಕೆಲವರು ಹಿಂದೂ ಧರ್ಮವನ್ನವಲಂಬಿಸಿದರು. ಆದರೆ ವಿಶೇಷವಾಗಿ ಬೌದ್ಧ ಮತವನ್ನೇ ಸೇರಿದರು. ಅವರ ಪ್ರಖ್ಯಾತ ರಾಜನಾದ ಕಾನಿಷ್ಕ ಬುದ್ದ ಚರಿತ್ರೆಯಲ್ಲಿ ಒಬ್ಬ ಮಹಾ ಪುರುಷ. ಅನೇಕ ಸತ್ಕಾರಗಳನ್ನೂ ಜನೋಪಯುಕ್ತ ಕಾವ್ಯಗಳನ್ನೂ ಮಾಡಿದ್ದಾನೆ. ತಾನು ಬುದ್ದನಾದರೂ ರಾಷ್ಟ್ರದ ಧರ್ಮವು ಯಾವುದೋ ಸಂಮಿಶ್ರ ಧರ್ಮವಾಗಿತ್ತು. ಅದರಲ್ಲಿ ಒಂದು ಬಗೆಯ ಸರ್ವಧರ್ಮ ಸಮಿಾಕರಣವಿತ್ತು. ಜೊರೋಸ್ಟರ್ ಧರ್ಮದ ಛಾಯೆ ಸಹ ಅದರಲ್ಲಿದ್ದಿತಂತೆ. ಕುಶಾನಚಕ್ರಾಧಿಪತ್ಯ ಎಂದು ಹೆಸರು ಪಡೆದ ಈ ಗಡಿರಾಜ್ಯದ ರಾಜಧಾನಿ ಈಗಿನ ಪೆಷಾವರ್ ಬಳಿ ಇತ್ತು. ಸಮೀಪದಲ್ಲೆ ತಕ್ಷಶಿಲೆ ಇದ್ದುದರಿಂದ ಅನೇಕ ಜನಾಂಗಗಳು ಮತ್ತು ಜನರು ಸೇರುತ್ತಿದ್ದ ನಗರವಾಯಿತು. ಈ ರೀತಿ ಭಾರತೀಯರು, ಸಿಥಿಯನರು, ಯೂಯೇ ಚಿಗಳು,