ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೧೩

ಇರಾಣರು, ಬ್ಯಾಕ್ಟ್ರಿರ್ಯ ಗ್ರೀಕರು, ತುರ್ಕಿಜನರು, ಚೀನೀಯರು ಅಲ್ಲಿ ಕಲಿಯುತ್ತಿದ್ದರು. ಭಿನ್ನ ಭಿನ್ನ ಸಂಸ್ಕೃತಿಗಳು ಒಂದರ ಮೇಲೊಂದು ಪರಸ್ಪರ ಪರಿಣಾಮ ಮಾಡಿದವು. ಐತಿಹಾಸಿಕ ದೃಷ್ಟಿಯಿಂದ ಚೀನೀ ಮತ್ತು ಭಾರತೀಯರ ಮೊದಲ ಬಾಂಧವ್ಯ ಇಲ್ಲಿಂದ ಆರಂಭವಾಯಿತೆನ್ನಬಹುದು. ಕ್ರಿಸ್ತಶಕ ೭೪ ರಲ್ಲಿ ಚೀನದ ರಾಯಭಾರಿ ಭಾರತಕ್ಕೆ ಬಂದನು. ಅಲ್ಪವಾದರೂ ಆಗ ಚೀನದಿಂದ ಇಂಡಿಯಕ್ಕೆ ಬಂದ ಪೀಚ್ ಮತ್ತು ಪೇರು ಹಣ್ಣು ಗಳ ಗಿಡಗಳು ಭಾರತೀಯರಿಗೆ ಬಹಳ ಪ್ರಿಯ ವಸ್ತುಗಳಾದವು. ಗೋಬಿ ಮರುಭೂಮಿಯ ಅಂಚಿನಲ್ಲಿ ತುರ್ಫಾ ಮತ್ತು ಕುಚ್ ನಗರಗಳಲ್ಲಿ ಭಾರತೀಯ, ಚೀನೀ ಮತ್ತು ಇರಾನಿ ಸಂಸ್ಕೃತಿಗಳ ಸಮಿಾಕರಣವಾಯಿತು. ವಿಚಿತ್ರ ವೈಶಿಷ್ಟದ ಸಂಸ್ಕೃತಿಗಳುದ್ಭವಿಸಿದವು.

ಕುಶಾನರ ಕಾಲದಲ್ಲಿ ಬೌದ್ಧ ಮತದಲ್ಲಿ ಅಂತರ್ಭೇದ ಉದ್ಭವಿಸಿ ಮಹಾಯಾನ ಹೀನಯಾನ ಎಂದು ಎರಡು ಪಂಗಡಗಳಾಗಿ ಬೌದ್ಧ ಮತವು ಇಬ್ಬಾಗವಾಯಿತು. ಇಬ್ಬರ ಮಧ್ಯೆ ಚರ್ಚೆಗಾರಂಭವಾಯಿತು. ಭಾರತೀಯ ಸಂಪ್ರದಾಯದಂತೆ ಮಹಾಸಭೆಗಳು ಸೇರಿ ದೇಶದ ಮೂಲೆ ಮೂಲೆಗಳಿಂದ ಪ್ರತಿನಿಧಿಗಳು ಬಂದು ಚರ್ಚೆಗಳಲ್ಲಿ ಭಾಗವಹಿಸಿದರು. ಈ ಚರ್ಚೆಗಳಲ್ಲೆಲ್ಲ ಕ್ರಿಸ್ತಶಕ ಒಂದನೆಯ ಶತಮಾನದಲ್ಲಿ ಜೀವಿಸಿದ್ದ ನಾಗಾರ್ಜುನನ ಹೆಸರು ಅತಿ ಮುಖ್ಯವಾದುದು. ಬೌದ್ಧ ಧರ್ಮಜ್ಞರಲ್ಲಿ, ಭಾರತೀಯ ದಾರ್ಶನಿಕರಲ್ಲಿ ಆತ ಅತ್ಯುನ್ನತ ವ್ಯಕ್ತಿ. ಭಾರತದಲ್ಲಿ ಮಹಾಯಾನ ಪಂಥವು ಜಯಭೇರಿ ಹೊಡೆದದ್ದು ಆತನಿಂದ. ಚೀನಾಕ್ಕೆ ಹರಡಿದ್ದು ಮಹಾಯಾನ, ಸಿಂಹಳ ಮತ್ತು ಬ್ರಹ್ಮ ದೇಶದಲ್ಲಿ ಹೀನಯಾನ ಹರಡಿತು.

ಕುಶಾನರು ಭಾರತೀಯರಾಗಿ ಭಾರತೀಯ ಸಂಸ್ಕೃತಿಯ ಪೋಷಕರಾದರು. ಆದರೂ ಅವರ ಆಡಳಿತವನ್ನು ಕೊನೆಗಾಣಿಸಲು ರಾಷ್ಟ್ರೀಯ ಚಳವಳಿಯೊಂದು ಒಳ ಗೋಳಗೆ ಹೊಗೆಯಾಡುತ್ತಿತ್ತು. ಅನಂತರ ಗಡಿನಾಡಿನ ಮೂಲಕ ವಿದೇಶೀಯರ ಹೊಸ ಹೊಸ ತಂಡಗಳು ಭಾರತವನ್ನು ಪ್ರವೇಶಿಸಿದಾಗ ಈ ರಾಷ್ಟ್ರೀಯ ಆಂದೋಲನವೂ ಪರಾಕ್ರಮಣ ವಿರೋಧದ ಚಳವಳಿಯ ಕ್ರಿಸ್ತಶಕ ನಾಲ್ಕನೆಯ ಶತಮಾನದ ಆದಿಭಾಗದಲ್ಲಿ ಉಗ್ರರೂಪವನ್ನು ತಾಳಿದವು. ಚ೦ದ್ರಗುಪ್ತನೆಂದೇ ಹೆಸರುಳ್ಳ ಇನ್ನೊಬ್ಬ ರಾಜನು ಪರಕೀಯರನ್ನು ಓಡಿಸಿ ಪುನಃ ಒಂದು ವಿಶಾಲವೂ ಬಲಿಷ್ಠವೂ ಆದ ರಾಜ್ಯವನ್ನು ಕಟ್ಟಿದನು.

ಈ ರೀತಿ ಯುದ್ಧದಲ್ಲಿಯೂ, ಶಾಂತಕಾಲದ ಕಲಾ ವೈಭವದಲ್ಲಿಯೂ ಪ್ರಖ್ಯಾತರಾದ ಮಹಾ ಚಕ್ರವರ್ತಿಗಳ ಪರಂಪರೆಯುಳ್ಳ ಸಾಮ್ರಾಟ್ ಗುಪ್ತರ ಕಾಲವು ಕ್ರಿಸ್ತಶಕ ೩೨೦ ರಲ್ಲಿ ಆರಂಭವಾಯಿತು. ಮೇಲಿಂದ ಮೇಲೆ ಒದಗಿದ ದಂಡಯಾತ್ರೆಗಳಿಂದ ರಾಷ್ಟ್ರೀಯ ಭಾವನೆಯು ಬಲಗೊಂಡು ಬೇರೂರಿತು. ಸನಾತನ ಬ್ರಾಹ್ಮಣರು, ಕ್ಷತ್ರಿಯರು ತಮ್ಮ ಮನೆಮಠಗಳ ರಕ್ಷಣೆಗಾಗಿ ತಮ್ಮ ಸಂಸ್ಕೃತಿಯ ಉಳಿವಿಗಾಗಿ ದೇಶದ ಹಿತದೃಷ್ಟಿಯಿಂದ ತು೦ಬ ಯೋಚನೆ ಮಾಡಿದ ಕಾಲ ಅದು. ಭಾರತೀಯ ಸಂಸ್ಕೃತಿ ಯೊಳಗೆ ಐಕ್ಯವಾದ ವಿದೇಶೀಯರನ್ನು ಭಾರತೀಯರೆಂದು ಒಪ್ಪಿಕೊಂಡರು; ಆದರೆ ಉಳಿದೆಲ್ಲ ಪರಕೀಯರನ್ನು ಉಗ್ರವಾಗಿ ವಿರೋಧಿಸಿ ಎದುರಿಸಿದರು. ವೈದಿಕ ಬ್ರಾಹ್ಮಣ ಧರ್ಮದ ಆದರ್ಶದ ಆಧಾರದ ಮೇಲೆ ಒಂದು ಬಲವಾದ ಏಕಛತ್ರಾಧಿಪತ್ಯವನ್ನು ಕಟ್ಟುವ ಪ್ರಯತ್ನ ನಡೆಯಿತು. ಆದರೆ ಹಳೆಯ ಆತ್ಮ ವಿಶ್ವಾಸ ಮಾಯವಾಗುತ್ತಿತ್ತು. ಈ ಆದರ್ಶಗಳು ತಮ್ಮ ನೈಜಸ್ವಭಾವಕ್ಕೆ ವಿರುದ್ಧವಾದ ಒಂದು ಕಾಠಿಣ್ಯತೆಯನ್ನು ತಾಳುತ್ತಿರುವಂತೆ ತೋರುತ್ತಿತ್ತು. ಬಾಹ್ಯದಲ್ಲ ಆ೦ತರ್ಯದಲ್ಲೂ ಭಾರತೀಯ ದೃಷ್ಟಿಯೂ ತನ್ನ ಚಿಪ್ಪಿನೊಳಗೇ ಸಂಕುಚಿಸುವಂತೆ ತೋರುತ್ತ ಇತ್ತು.

ಆದರೂ ಆ ಚಿಪ್ಪು ಆಳವಾಗಿಯೂ ವಿಶಾಲವಾಗಿಯೂ ಇತ್ತು. ಹಿಂದೆಯೇ ಆರ್ಯಾವರ್ತ ಅಥವ ಭಾರತವರ್ಷ ಎಂದು ಕರೆದ ಈ ದೇಶಕ್ಕೆ ಬಂದಾಗ ಈ ಹೊಸ ಜನಾಂಗಕ್ಕೂ ದೇಶದ ಪುರಾ ತನ ಸಂಸ್ಕೃತಿಗೂ ಮತ್ತು ಜನರಿಗೂ ಒಂದು ಸಂಘಟನೆಯನ್ನು ಹೇಗೆ ಕಲ್ಪಿಸಬೇಕು ಎಂಬು ದೊಂದು ಮಹತ್ರಶ್ನೆ ಎದ್ದಿತ್ತು. ಭಾರತದ ಮನಸ್ಸು ಆ ಕಡೆ ಯೋಚಿಸಿ ಯೋಚಿಸಿ ಕೊನೆಯಲ್ಲಿ ಪ್ರಾಚೀನ ಭಾರತದ ಮತ್ತು ಆರ್ಯ ಸಂಸ್ಕೃತಿಗಳೆರಡರ ಸಮಿಾಕರಣದ ಬಲವಾದ ತಳಹದಿಯ ಮೇಲೆ

8