ಭಾರತ ಮತ್ತು ಗ್ರೀಸ್ ಎರಡು ದೇಶಗಳಲ್ಲೂ ಜೀವನದ ವಾಸ್ತವಿಕತೆಯನ್ನು ಒಪ್ಪಿಕೊಂಡು ತುಂಬುಜೀವನ ನಡೆಸಿದರು. ಆದರೂ ಯಾವುದೋ ಒಂದು ಆಂತರಿಕ ಜೀವನದ ಪಾರಮ್ಯತೆಯಲ್ಲಿ ನಂಬಿಕೆಯನ್ನಿಟ್ಟಿದ್ದರು. ಇದರಿಂದ ಜಿಜ್ಞಾಸೆ ಮತ್ತು ಮಿಾಮಾಂಸೆಗೆ ಅವಕಾಶವಾಯಿತು. ಆದರೆ ಈ ವಿಚಾರದೃಷ್ಟಿ ಯು ವಾಸ್ತವಿಕ ಅನುಭವದ ಕಡೆಗೆ ಹೆಚ್ಚು ಗಮನ ಕೊಡಲಿಲ್ಲ. ಆದರೆ ಸ್ಪಷ್ಟ ಸತ್ಯಗಳೆಂದು ನಂಬಿದ ಕೆಲವು ಪ್ರಮಾಣಗಳ ಆಧಾರದ ಮೇಲೆ ತಾರ್ಕಿಕ ವಿಮರ್ಶೆಯು ಮುಂದು ವರಿಯಿತು. ವಿಜ್ಞಾನ ಪದ್ದತಿಯ ಆರಂಭಕ್ಕೆ ಮೊದಲು ಎಲ್ಲ ಕಡೆಯಲ್ಲೂ ಸಾಮಾನ್ಯವಾಗಿ ಇದೇ ರೀತಿ ಇತ್ತು. ಪ್ರಾಯಶಃ ಈ ವಿಚಾರ ವಿಮರ್ಶೆಯು ಕೆಲವು ವಿದ್ವಾಂಸರಲ್ಲಿ ಮಾತ್ರ ನಡೆಯುತ್ತಿದ್ದಿರ ಬಹುದು. ಆದರೂ ಸಾಮಾನ್ಯ ಜನರ ಮೇಲೆ ಅದರ ಪ್ರಭಾವ ಬೀಳದೆ ಇರಲಿಲ್ಲ ಮತ್ತು ಅವರ ಸಾರ್ವಜನಿಕ ಸಭೆಗಳಲ್ಲಿ ಇತರ ಎಲ್ಲ ವಿಷಯಗಳನ್ನು ಚರ್ಚಿಸುತ್ತ ಇದ್ದ೦ತೆ ದಾರ್ಶನಿಕ ವಿಚಾರ ಗಳನ್ನೂ ಚರ್ಚಿಸುತ್ತಿದ್ದರು. ಈಗಲೂ ಮುಖ್ಯವಾಗಿ ಗ್ರಾಮಾಂತರಗಳಲ್ಲಿ ಕಂಡುಬರುವಂತೆ ಭಾರ ತೀಯ ಜೀವನವು ಮತೀಯ ಜೀವನವಾಗಿತ್ತು. ಜನರು ಸಂತೆಪೇಟೆಗಳಲ್ಲಿ, ದೇವಸ್ಥಾನ ಅಥವ ಮಸೀದಿಯ ಒಳಾಂಗಣದಲ್ಲಿ, ಬಾವಿಕಟ್ಟೆ, ಪಂಚಾಯತಿ ಮಂದಿರ ಅಥವ ಸಾರ್ವಜನಿಕ ಸಭಾಸ್ಥಾನ ಗಳಲ್ಲಿ ಸಭೆ ಸೇರಿ ದೈನಂದಿನ ವರ್ತಮಾನಗಳನ್ನೂ, ತಮ್ಮ ಅವಶ್ಯಕತೆಗಳನ್ನೂ ಚರ್ಚಿಸುತ್ತಿದ್ದರು. ಸಾರ್ವಜನಿಕ ಅಭಿಪ್ರಾಯ ಈ ರೀತಿ ರೂಪುಗೊಂಡು ಪ್ರಕಟವಾಗುತ್ತಿದ್ದಿತು. ಈ ಚರ್ಚೆಗಳಿಗೆ ಬೇಕಾದ ವಿರಾಮವೂ ಇತ್ತು.
ಆದರೂ ಗ್ರೀಕ್ ಸಂಸ್ಕೃತಿಯಲ್ಲಿ ಇತರ ಸಂಸ್ಕೃತಿಗಳಿಗಿಂತ ವಿಶೇಷವಾಗಿ ಕೆಲವು ಮಹಾ ಸಾಧನಗಳಿವೆ. ಪ್ರಾಯೋಗಿಕ ವಿಜ್ಞಾನದ ಆರಂಭದೆಸೆಯು ಬೆಳೆದದ್ದು ಗ್ರೀಸಿಗಿಂತ ಹೆಚ್ಚಾಗಿ ಅಲೆಕ್ಸಾಂಡ್ರಿಯ ಸುತ್ತ ಮುತ್ತಲಿನ ಹೆಲೆನಿಕ್ ಪ್ರಪಂಚದಲ್ಲಿ. ಕ್ರಿಸ್ತ ಪೂರ್ವ ೩೩೦ ರಿಂದ ೧೩೦ ರ ವರೆಗೆ ಎರಡು ಶತಮಾನಗಳ ಕಾಲದಲ್ಲಿ ವೈಜ್ಞಾನಿಕ ಪ್ರಗತಿ, ಯಂತ್ರೋಪಕರಣಗಳ ರಚನೆ ಬಹಳ ಮುಂದುವರಿಯಿತು. ಇದಕ್ಕೆ ಸರಿತೂಗುವ ಕಾಲವು ಭಾರತದ ಇತಿಹಾಸದಲ್ಲೆಲ್ಲೂ ಕಾಣುವುದಿಲ್ಲ. ಏಕೆ, ಹದಿನೇಳನೆಯ ಶತಮಾನದಿಂದೀಚೆಗೆ ಪುನಃ ವಿಜ್ಞಾನವು ದೊಡ್ಡ ಹೆಜ್ಜೆ ಇಡಲು ಆರಂಭಿಸುವ ವರೆಗೂ ಎಲ್ಲಿಯೂ ಅ೦ತಹ ಕಾಲವು ಕಾಣುವುದಿಲ್ಲ. ರೋಮನ್ ಚಕ್ರಾಧಿಪತ್ಯಕ್ಕೆ ವಿಶಾಲದೇಶ, ಗ್ರೀಕ್ ನಾಗರಿಕತೆಯ ಸಂಪರ್ಕ, ಅನೇಕ ಜನರ ಅನುಭವ ಮತ್ತು ಜ್ಞಾನ ಭಂಡಾರವನ್ನು ಸೂರೆ ಗೊಳ್ಳುವ ಅವಕಾಶ, ಇವೆಲ್ಲ ವಿಶೇಷವಾಗಿ ಇದ್ದರೂ, ವಿಜ್ಞಾನ ಶೋಧನೆ ಮತ್ತು ಯಂತ್ರೋಪಕರಣ ರಚನೆಗೆ ಅಲ್ಲಿ ಯಾವ ಹೆಚ್ಚಿನ ಅವಕಾಶವೂ ದೊರೆಯಲಿಲ್ಲ. ಯೂರೋಪಿನ ಪುರಾಣ ಕಾಲದ ನಾಗರಿಕತೆಯು ಕುಸಿದು ಬಿದ್ದೊಡನೆ ವಿಜ್ಞಾನ ಜ್ಯೋತಿಯನ್ನು ಮಧ್ಯ ಯುಗದಲ್ಲಿ ಬೆಳಗುತ್ತ ಬಂದವರು ಅರಬ್ಬಿ ಜನರು,
ಸಮಾಜ ರಚನೆಯ ಜಟಿಲತೆ, ವ್ಯಾಪಾರಾಭಿವೃದ್ಧಿ ಮುಂತಾದ ಸಾಮಾಜಿಕ ಅವಶ್ಯಕತೆಗಳಿ೦ದ ಭಾರತದಲ್ಲಿ ಗಣಿತಶಾಸ್ತ್ರ, ಬೀಜಗಣಿತ, ಶೂನ್ಯದ ಉಪಯೋಗ, ಸಂಖೆಯ ಸ್ಥಾನ ನಿರ್ದೇಶದಿಂದ ಬೆಲೆಯ ನಿರ್ಧಾರ ಮುಂತಾದ ಶೋಧನೆಗಳು ಮುಂದುವರಿದಂತೆಯೇ ಅಲೆಕ್ಸಾಂಡ್ರಿಯದ ಸುತ್ತಲು ನಡೆದ ವಿಜ್ಞಾನ ಚಟುವಟಿಕೆಗೆ ಮತ್ತು ಸಂಶೋಧನೆಗೆ ಸಹ ಆ ಕಾಲದ ಜನರ ಸಾಮಾಜಿಕ ಬೆಳೆವ ಣಿಗೆ, ಸಮುದ್ರಯಾನಗಳ ಅವಶ್ಯಕತೆಯೇ ಕಾರಣವಾಯಿತು. ಒಟ್ಟಿನಲ್ಲಿ ಪ್ರಾಚೀನ ಗ್ರೀಕರಲ್ಲಿ ಈ ವಿಜ್ಞಾನದೃಷ್ಟಿ ಇತ್ತೊ ಏನೋ, ಮನುಷ್ಯನು ಪ್ರಕೃತಿಯೊಡನೆ ಏಕೀಭವಿಸಿ ಸಮರಸತೆಯನ್ನು ಕಾಣುವುದೇ ಅವರ ದಾರ್ಶನಿಕ ದೃಷ್ಟಿ, ಈ ಸಾಂಪ್ರದಾಯಿಕ ದೃಷ್ಟಿಯೇ ಅವರ ಜೀವನದಲ್ಲೂ ಇದ್ದಿರಬೇಕು. ಗ್ರೀಸ್ ಮತ್ತು ಭಾರತಗಳೆರಡಕ್ಕೂ ಈ ಜೀವನ ದೃಷ್ಟಿ ಸಾಮಾನ್ಯವಾಗಿದೆ.
ಭಾರತದಂತೆ ಗ್ರೀಸ್‌ನಲ್ಲಿ ಸಹ ವರ್ಷವನ್ನು ಋತುಸಂಕ್ರಾಂತಿಯನ್ನು ಸೂಚಿಸುವ ನಾಡ ಹಬ್ಬಗಳಿಂದ ವಿಭಜನೆ ಮಾಡಿದ್ದರು. ಈ ರೀತಿ ಪ್ರಕೃತಿಯ ಸ್ವಭಾವಕ್ಕನುಗುಣವಾಗಿ ಮನುಷ್ಯ ಹೊಂದಿಕೊಳ್ಳುತ್ತಿದ್ದ. ಭಾರತದಲ್ಲಿ ಸಹ ವಸಂತಕಾಲವನ್ನು, ಸುಗ್ಗಿಯ ಕಾಲವನ್ನು ಸೂಚಿಸುವ