ಈ ಪುಟವನ್ನು ಪ್ರಕಟಿಸಲಾಗಿದೆ
೧೩೦
ಭಾರತ ದರ್ಶನ

ಹಬ್ಬಗಳನ್ನು ಇನ್ನೂ ಆಚರಿಸುತ್ತಿದೇವೆ-ಮಾಗಿಯ ಕೊನೆಯನ್ನು ಸೂಚಿಸುವ ದೀಪೋತ್ಸವದ ದೀಪಾವಳಿ, ವಸಂತಾಗಮನವನ್ನು ಸೂಚಿಸುವ ಹೋಳಿಹಬ್ಬ ಮತ್ತು ಪುರಾಣ ಕಥೆಗಳ ಮಹಾನಾಯ ಕರ ವಿಷಯದ ಹಬ್ಬಗಳು. ಈ ಕೆಲವು ಹಬ್ಬಗಳಲ್ಲಿ ಈಗಲೂ ಜನರು ನೃತ್ಯ, ಸಂಗೀತಗಳಲ್ಲಿ ಮೈ ಮರೆಯುತ್ತಾರೆ, ನಾಡಹಾಡುಗಳು, ರಾಸಲೀಲೆ, ಕೃಷ್ಣ ಗೋಪಿಯರ ನೃತ್ಯ ಮುಂತಾದ ಜಾನಪದ ನೃತ್ಯಗಳಿವೆ.
ರಾಜ ಮನೆತನಗಳು ಮತ್ತು ಶ್ರೀಮಂತರಲ್ಲಿ ಕೆಲವರನ್ನು ಬಿಟ್ಟರೆ ಪ್ರಾಚೀನ ಭಾರತದಲ್ಲಿ ಸ್ತ್ರೀಯರು ಅವರುದ್ಧರಾಗಿರಲಿಲ್ಲ. ಆಗಿನ ಕಾಲದಲ್ಲಿ ಪ್ರಾಯಶಃ ಭಾರತಕ್ಕಿಂತ ಹೆಚ್ಚಾಗಿ ಗ್ರೀಸಿನಲ್ಲೇ ಸ್ತ್ರೀ ಪುರುಷರ ಪ್ರತ್ಯೇಕಜೀವನ ಹೆಚ್ಚು ಇತ್ತು. ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ಪ್ರಸಿದ್ಧ ರೂ ಮಹಾವಿಜ್ಞಾನಿಗಳೂ ಆದ ಅನೇಕ ಸ್ತ್ರೀಯರ ಹೆಸರುಗಳಿವೆ. ಅವರಲ್ಲಿ ಕೆಲವರು ಸಾರ್ವಜನಿಕ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಗ್ರೀಸ್‌ನಲ್ಲಿ ವಿವಾಹವು ಕೇವಲ ಒಂದು ಒಪ್ಪಂದದ ವಿಚಾರ ವಾಗಿತ್ತು. ಭಾರತದಲ್ಲಿ ಇನ್ನೂ ಅನೇಕ ಬಗೆಯ ವಿವಾಹಗಳ ಉಲ್ಲೇಖವಿದ್ದರೂ ವಿವಾಹವು ಒಂದು ಪವಿತ್ರ ವಿಧಿ.
ಗ್ರೀಕ್ ಸ್ತ್ರೀಯರಿಗೆ ಭಾರತದಲ್ಲಿ ಒಳ್ಳೆಯ ಸ್ವಾಗತವಿತ್ತು. ಪ್ರಾಚೀನ ನಾಟಕಗಳಲ್ಲಿ ಕಂಡು ಬರುವಂತೆ ರಾಜಸಭೆಯಲ್ಲಿ ಕಂಚುಕಿಯರು ಗ್ರೀಕ್ ಕನೈಯರು, ಬೇರಿಗಾಜಾ (ಪಶ್ಚಿಮ ತೀರದ ಭಡೂಚ) ಬಂದರಿಗೆ ಗ್ರೀಸ್‌ನಿಂದ ಭಾರತಕ್ಕೆ ಆಮದಾಗಿ ಬರುತ್ತಿದ್ದ ಅಪರೂಪ ವಸ್ತುಗಳೆಂದರೆ "ಗಾನಕಲಾವಿದರಾದ ಹುಡುಗರು, ಸ್ಪುರದ್ರೂಪಿ ಕನ್ನೆ ಯರು,” ಮೆಗಾಸ್ತನೀಸ್ ಮೌಲ್ಯ ಚಕ್ರವರ್ತಿ ಚಂದ್ರಗುಪ್ತನ ಜೀವನವನ್ನು ವರ್ಣಿಸುತ್ತ “ರಾಜನ ಊಟಕ್ಕೆ ಅಡಿಗೆ ಮಾಡಿದ ಸ್ತ್ರೀಯರೇ ಬಡಿಸು ತಿದ್ದರು. ಎಲ್ಲ ಭಾರತೀಯರೂ ಸಾಮಾನ್ಯವಾಗಿ ಉಪಯೋಗಿಸುತ್ತಿದ್ದಂತೆ ರಾಜನಿಗೆ ಅವರು ಮಧು ವನ್ನೂ ಬಡಿಸುತ್ತಿದ್ದರು” ಎಂದು ಹೇಳಿದ್ದಾನೆ ಮಾದಕ ದ್ರವ್ಯಗಳಲ್ಲಿ ಕೆಲವಂತೂ ಗ್ರೀಸ್ ದೇಶ ಗಳಿಂದ ಅಥವ ಅವರ ಅಧೀನ ರಾಷ್ಟ್ರಗಳಿಂದ ಬಂದಿರಬೇಕು. ತಮಿಳು ಕವಿಯೊಬ್ಬ “ತಂಪಾದ ಸುವಾಸನೆಯುಳ್ಳ ಮಧುವನ್ನು 'ಯವನರು' (ಅಯೋನಿಯನರು ಅಥವ ಗ್ರೀಕರು) ತಮ್ಮ ಹಡಗು ಗಳಲ್ಲಿ ತರುತ್ತಿದ್ದರು” ಎಂದು ಬರೆದಿದ್ದಾನೆ. ಒಂದು ಗ್ರೀಕ್‌ ಗ್ರಂಥದಲ್ಲಿ, ಪಾಟಲಿಪುತ್ರದ ದೊರೆಯೊಬ್ಬ (ಪ್ರಾಯಶಃ ಅಶೋಕನ ತಂದೆಯಾದ ಬಿಂದುಸಾರ) ಆ೦ಟಿಯೋಕಸನಿಗೆ ಸಿಹಿ ಮಧು, ಒಣಗಿದ ಅಂಜೂರ ಮತ್ತು ಒಬ್ಬ ಸೋಫಿಸ್ಟ್ ದಾರ್ಶನಿಕ ಇವರನ್ನು ಕೊಂಡು ಕಳುಹಿಸಲು ಬರೆದಿದ್ದ ಎಂದು ಹೇಳಿದೆ, ಆ೦ಟಿಯೋಕಸ್ “ಅಂಜೂರ ಮತ್ತು ದ್ರಾಕ್ಷಾರಸವನ್ನು ಕಳುಹಿಸುತ್ತೇವೆ. ಗ್ರೀಕ್ ಶಾಸನದ ಪ್ರಕಾರ ದಾರ್ಶನಿಕನ ವಿಕ್ರಯಕ್ಕೆ ಅವಕಾಶವಿಲ್ಲ” ಎಂದು ಉತ್ತರಕೊಟ್ಟನಂತೆ. ಗ್ರೀಕ್ ಸಾಹಿತ್ಯದಲ್ಲಿ ಕಂಡುಬರುವಂತೆ ಸಮಲಿಂಗ ರತಿಗೆ ನಿಷೇಧವಿರಲಿಲ್ಲ. ನಿಶ್ಚಯವಾಗಿ ನೋಡಿದರೆ ಒಂದು ಬಗೆಯ ಮೆಚ್ಚುಗೆಯೂ ಇದೆ. ಪ್ರಾಯಶಃ ಯೌವನದಲ್ಲಿ ಸ್ತ್ರೀ ಪುರುಷರ ಪ್ರತ್ಯೇಕ ಜೀವನದ ಪರಿಣಾಮವಿದ್ದರೂ ಇರಬಹುದು. ಇರಾಣದಲ್ಲಿಯೂ ಈ ಪದ್ಧತಿಯು ಆಚರಣೆ ಯಲ್ಲಿತ್ತು. ಪಾರ್ಸಿ ಸಾಹಿತ್ಯದಲ್ಲಿ ಇದಕ್ಕೆ ಅನೇಕ ನಿದರ್ಶನಗಳಿವೆ. ಪ್ರಿಯ ವ್ಯಕ್ತಿಯನ್ನು ಸಖನೆಂದು ಬಣ್ಣಿಸುವುದು ಒಂದು ಸಾಹಿತ್ಯ ಪದ್ಧತಿ ಅಥವ ಸಂಪ್ರದಾಯವಿದ್ದಂತೆ ತೋರುತ್ತದೆ. ಸಂಸ್ಕೃತ ಸಾಹಿತ್ಯಕ್ಕೆ ಇದು ತೀರ ಅಪರಿಚಿತ, ಸಮಲಿಂಗರತಿ ಭಾರತದಲ್ಲಿ ಇರಲೂ ಇಲ್ಲ ; ಅದಕ್ಕೆ ಪುರಸ್ಕಾರವೂ ಸಿಗಲಿಲ್ಲ.
ಗ್ರೀಸ್ ಮತ್ತು ಭಾರತದ ಸಂಬಂಧವು ಅತಿ ಪ್ರಾಚೀನ ಇತಿಹಾಸ ಕಾಲದಿಂದಲೂ ನಡೆದು ಬಂದಿದೆ. ಅನಂತರ ಗ್ರೀಸಿನ ಅಧೀನಕ್ಕೆ ಬಂದ ಪಶ್ಚಿಮ ಏಷ್ಯದ ದೇಶಗಳಿಗೂ ಭಾರತಕ್ಕೂ ಇನ್ನೂ ಹೆಚ್ಚಿನ ಸಂಬಂಧ ಬೆಳೆಯಿತು. ಮಧ್ಯ ಇಂಡಿಯದ ಉಜ್ಜಯಿನಿಯ ಖಗೋಳ ಶಾಸ್ತ್ರದ ಮಹಾ ಸಮೀಕ್ಷಾ ಮಂದಿರಕ್ಕೂ ಈಜಿಪ್ಟ್ ದೇಶದ ಅಲೆಕ್ಸಾಂಡ್ರಿಯದ ಸಮೀಕ್ಷಾಮಂದಿರಕ್ಕೂ ಸಂಬಂಧ ವಿತ್ತ೦ತ. ಈ ಮಹಾ ವ್ಯವಹಾರಕಾಲದಲ್ಲಿ ಜ್ಞಾನ ಮತ್ತು ಸಂಸ್ಕೃತಿಗಳ ಪ್ರಪಂಚದಲ್ಲಿ ಸಹ ಈ