ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೩೯

ನಾಲಗೆಯಿಂದ ಬರುವುದಲ್ಲ, ಕುಳಿತಲ್ಲೇ ಆಚಾರ ಹೇಳುವವನು ಸುಲಭವಾಗಿ ಓದುವ ಲೇಖನಿಯಿಂದ ಬರುವುದಲ್ಲ ಆದರೆ ಹೃದಯದಿಂದ ಹೊರಹೊಮ್ಮುವುದು. ನವಯೌವನದ ಸೌಂದರ್ಯ, ಪ್ರೇಮ, ಮತ್ತು ಉತ್ಕೃಷ್ಟ ಸಹನೆಯೂ ಆತನ ಗಾಂಭೀರಕ್ಕೊಂದು ಹದವನ್ನು ಕೊಟ್ಟಿತು. ಕಲ್ಪನಾ ಚಮ ಇಾರದ ಒಂದು ತೊಡಕಿನ ಕಥೆ, ವಿಷಯ ಅತ್ಯಲ್ಪ ; ಆದರೂ ಅದು ಮಾನವನ ದಯೆಗೆ ಮತ್ತು ಸದ್ಗುಣದಲ್ಲಿ ನಂಬಿಕೆಗೆ ಒಂದು ಮಾರ್ಗವಾಗಬಹುದು ಎಂದು ಅರಿತುಕೊಳ್ಳುವಷ್ಟು ಅನುಭವಶಾಲಿ ಯಾಗಿದ್ದ....ಅಂಥ ಒಂದು ನಾಟಕ ಆಳವಾದ ಅನುಭವ ಪೂರ್ಣ ನಾಗರಿಕತೆಯಿಂದ ಮಾತ್ರ ಹುಟ್ಟ ಬಲ್ಲುದು. ಎದುರು ಬಂದ ಎಲ್ಲ ಸಮಸ್ಯೆಗಳನ್ನೆ ದುರಿಸಿ ತನ್ನ ದಾರಿಯನ್ನರಿತ ನಾಗರಿಕತೆಯು ಇಂತಹ ಒಂದು ಶಾಂತ ನಿಷ್ಟ ಪಟ ವಾತಾವರಣದಲ್ಲಿ ಮನಶ್ಯಾಂತಿ ಪಡೆಯಬೇಕು, ಮ್ಯಾಕ್ ಬೆತ್ ಮತ್ತು ಒಥೆಲ್ಲೊ ಎಷ್ಟೇ ದೊಡ್ಡ ವ್ಯಕ್ತಿಗಳೂ, ಹೃದಯವನ್ನು ತಲ್ಲಣಿಸತಕ್ಕವರೂ ಇದ್ದರೂ ಅವರು ಪಾಶವೀ ಸ್ವಭಾವದ ನಾಯಕರು. ಏಕೆಂದರೆ ಆ ಪಾತ್ರಗಳು ಷೇಕ್ಸ್ಪಿಯರನ ಭಾವಾವೇಶದ ತುಮುಲ ಹೊಸಜೀವನದ ಶೀಲಕ್ಕೂ ಪಶುಜೀವನದಿಂದ ರಕ್ತಗತವಾಗಿ ಬಂದ ನೈತಿಕಭಾವನೆಗಳಿಗೂ ಮಧ್ಯೆ ಎದ್ದ ಹೋರಾಟದ ಫಲ. ನಮ್ಮ ಆಧುನಿಕ ಕಾಲದ ವಾಸ್ತವಿಕ ನಾಟಕಗಳು ಸಹ ಅದೇ ಬಗೆಯ ಮನೋವಿಕಲ್ಪದ ಫಲ. ಆದರೆ ಸಮಸ್ಯೆಗಳು ಪರಿಹಾರವಾಗಿ ಭಾವೋದ್ರೇಕವು ಮನಃಸ್ಥೆ' ದಿಂದ ಶಾಂತವಾದಾಗ ಉಳಿಯುವುದು ರೂಪರಚನೆಯೊಂದೆ. ನಮ್ಮ ಯೂರೋಪಿನ ಪೂರ್ವೆತಿಹಾ ಸದಲ್ಲಿ ಎಲ್ಲೂ ಇಷ್ಟು ಸುಸಂಸ್ಕೃತ ಕೃತಿಯನ್ನು ಮಹಾಕಾವ್ಯವನ್ನು ಕಾಣಲಾರೆವು” ಎಂದಿದ್ದಾನೆ.

ಸಂಸ್ಕೃತದ ಜೀವಾಳ ಮತ್ತು ದಾರ್ಡ್ಯ


ಅಪಾರವಾದ ಭಾಷಾಸಂಪತ್ತು, ಪ್ರತಿಭೆ, ಎಲ್ಲ ಬಗೆಯ ಕಾವ್ಯ ಸಮೃದ್ಧಿ ಸಂಸ್ಕೃತಭಾಷೆಗೆ ಇದೆ. ಆದರೂ ಅದು ಎರಡು ಸಾವಿರದ ಆರುನೂರು ವರ್ಷಗಳ ಹಿಂದೆ ಪಾಣಿನಿಯು ಬರೆದ ವ್ಯಾಕರಣದ ಚೌಕಟ್ಟಿನಲ್ಲಿಯೇ ಬೆಳೆದಿದೆ. ಅದು ವಿಶಾಲವಾಗಿ ಹಬ್ಬಿ, ಸರ್ವತೋಮುಖವಾಗಿ ತನ್ನ ಸಂಪತ್ತನ್ನು ಅಭಿವೃದ್ಧಿ ಪಡಿಸಿಕೊಂಡು ಪುಷ್ಟವೂ, ಸರ್ವಾ೦ಗಸುಂದರವೂ ಆಗಿ ಬೆಳೆದರೂ ಅದರ ಬುಡವು ಮಾತ್ರ ಯಾವಾಗಲೂ ಭದ್ರವಿತ್ತು. ಸಂಸ್ಕೃತ ಸಾಹಿತ್ಯವು ಅವನತಸ್ಥಿತಿಗೆ ಬಂದಾಗ ಅದರ ಶಕ್ತಿಯು ಸ್ವಲ್ಪ ಕುಂದಿತು, ಭಾಷಾಸರಳತೆಯು ಹೋಯಿತು ಮತ್ತು ರಚನಾ ಜಟಿಲತೆಯು ಹೆಚ್ಚಿತು; ಉಪಮೆ ಮತ್ತು ಲಕ್ಷಣಗಳ ಅವಾಂತರವು ಹೆಚ್ಚಾಯಿತು. ಶಬ್ದ ಸಂಯೋಜನೆಗೆ ಸಹಾಯವಾಗಲೆಂದು ರಚಿಸಿದ ವ್ಯಾಕರಣ ನಿಯಮಗಳು ಪಂಡಿತರ ಕೈಯಲ್ಲಿ ಜಟಿಲ ಶಬ್ದ ಜೋಡಣೆಗೆ ಅವರ ಪಾಂಡಿತ್ಯ ಪ್ರದರ್ಶನಕ್ಕೆ ಅನುಕೂಲವಾದವು.
ಸರ್ ವಿಲಿಯಮ್ ಜೋನ್ಸ್ ೧೭೮೪ರಲ್ಲಿ “ಸಂಸ್ಕೃತಭಾಷೆಯು ಎಷ್ಟೇ ಪ್ರಾಚೀನವಿರಲಿ ಅದಕ್ಕೆ ಅದ್ಭುತ ರಚನಾಶಕ್ತಿಯಿದೆ. ಗ್ರೀಕ್ ಭಾಷೆಗಿಂತ ಸ್ವಸಂಪೂರ್ಣವಿದೆ, ಲ್ಯಾಟಿನ್ ಭಾಷೆಗಿಂತ ವಿಪುಲ ವಿದೆ'; ಎರಡೂ ಭಾಷೆಗಳಿಗಿಂತ ಪೂರ್ಣ ಪರಿಶುದ್ದವಿದೆ. ಆದರೂ ಧಾತುಗಳ ಮೂಲ ಸ್ವರೂಪದಲ್ಲ ವ್ಯಾಕರಣರೂಪಗಳಲ್ಲಿ ಸಂಸ್ಕೃತಕ್ಕೂ ಈ ಎರಡು ಭಾಷೆಗಳಿಗೂ ಇರುವ ಸಾಮ್ಯವು ಕೇವಲ ಆಕಸ್ಮಿಕ ಕ್ಕಿಂತ ಹೆಚ್ಚು ಇದೆ. ಯಾವ ಭಾಷಾ ಪಂಡಿತನೇ ಆಗಲಿ ಈ ಸಮೀಪ ಸಂಬಂಧವನ್ನು ನೋಡಿದರೆ ಈ ಮೂರು ಭಾಷೆಗಳೂ ಪ್ರಾಯಶಃ ಈಗ ಆದೃಶ್ಯವಿರುವ ಯಾವುದೋ ಒಂದೇ ಮೂಲದಿಂದ ಹೊರಟಿರಬೇಕೆಂದು ಊಹಿಸದೆ ಅವುಗಳನ್ನು ವಿಮರ್ಶೆ ಮಾಡಲು ಸಾಧ್ಯವೇ ಇಲ್ಲ' ಎಂದು ಹೇಳಿದ್ದಾನೆ.
ವಿಲಿಯಂ ಜೋನ್ಸ್ ತರುವಾಯ ಇಂಗ್ಲಿಷ್, ಫ್ರೆಂಚ್, ಜರ್ಮನ್ ಮತ್ತು ಇತರ ಯೂರೊಪಿರ್ಯ ವಿದ್ವಾಂಸರು ಸಂಸ್ಕೃತವನ್ನು ಅಭ್ಯಾಸಮಾಡಿ ತುಲನಾತ್ಮಕ ಭಾಷಾ ಶಾಸ್ತ್ರವೆಂಬ ಹೊಸ ವಿಜ್ಞಾನಕ್ಕೆ ತಳಹದಿಯನ್ನು ಹಾಕಿದರು. ಈ ಹೊಸ ಶಾಸ್ತ್ರಭಾಗದಲ್ಲಿ ಜರ್ಮನರ ವಿದ್ವತ್ತು ಬಹಳ ಮುಂದು ವರಿಯಿತು. ೧೯ನೆಯ ಶತಮಾದ ಈ ಸಂಸ್ಕೃತ ಸಾಹಿತ್ಯದಲ್ಲಿನ ಇತ್ತೀಚಿನ ಸಂಶೋಧನೆಯ ಗೌರವ ವೆಲ್ಲ ಅವರಿಗೆ ಸಲ್ಲಬೇಕಾಗುತ್ತದೆ. ಪ್ರಾಯಶಃ ಪ್ರತಿಯೊಂದು ಜರ್ಮನ್ ವಿಶ್ವವಿದ್ಯಾನಿಲಯದಲ್ಲ