ಸಂಸ್ಕೃತಶಾಖೆ ಇತ್ತು; ಅದರ ಆಡಳಿತಕ್ಕೆ ಒಬ್ಬರೋ, ಇಬ್ಬರೂ ಸಂಸ್ಕೃತ ಪ್ರಾಧ್ಯಾಪಕರಿರುತ್ತಿದ್ದರು. ಭಾರತೀಯ ವಿದ್ವತ್ತು ಅಪಾರವಿದ್ದರೂ ಪುರಾತನ ಸಂಪ್ರದಾಯವೇ ಹೆಚ್ಚಾಗಿತ್ತು. ವಿಮರ್ಶಾ ದೃಷ್ಟಿ ಇರಲಿಲ್ಲ. ಅರಬ್ಬಿ ಮತ್ತು ಪಾರಸಿ ಭಾಷೆಗಳ ಹೊರತಾಗಿ ಬೇರೆ ಪ್ರಾಚೀನ ಪರಭಾಷೆಗಳ ಪರಿಚಯವೇ ಇರುತ್ತಿರಲಿಲ್ಲ. ಯೂರೋಪಿಯನರ ಪ್ರೋತ್ಸಾಹದಿಂದ ಒಂದು ಹೊಸ ಬಗೆಯ ವಿದ್ವತ್ತು ಆರಂಭವಾ ಯಿತು. ಅನೇಕ ಭಾರತೀಯರು ನೂತನ ಸಂಶೋಧನೆಗಳ ಮಾರ್ಗದಲ್ಲಿ ಮತ್ತು ವಿಮರ್ಶಾತ್ಮಕ ಮತ್ತು ತುಲನಾತ್ಮಕ ಅಭ್ಯಾಸದಲ್ಲಿ ಶಿಕ್ಷಣ ಪಡೆಯಲು ಯೂರೋಪಿಗೆ ಅದರಲ್ಲೂ ಹೆಚ್ಚಾಗಿ ಜರ್ಮನಿಗೆ ಪ್ರಯಾ ಣಬೆಳೆಸಿದರು. ಈ ಭಾರತೀಯರಿಗೆ ಯೂರೋಪಿಯನರಿಗಿ೦ತ ಒ೦ದು ಅನುಕೂಲವಿದ್ದರೂ ಇನ್ನೊಂದು ಬಗೆಯ ಪ್ರತಿಕೂಲವೂ ಇತ್ತು. ಅವರ ಕೆಲವು ಪೂರ್ವ ಪ್ರತಿಷ್ಠಿತ ಅಭಿಪ್ರಾಯಗಳು, ವಂಶಾನುಗತ ನಂಬಿಕೆಗಳು ಮತ್ತು ಸಂಪ್ರದಾಯಗಳು ಅವರ ನಿಷ್ಪಕ್ಷಪಾತ ವಿಮರ್ಶೆಗೆ ಅಡ್ಡಿ ಬಂದುವು. ಕವಿ ಹೃದಯವನ್ನರಿತು ಕಾವ್ಯ ಸತ್ವವನ್ನು ತಿಳಿದುಕೊಳ್ಳುವ ಶಕ್ತಿ, ಅದರ ವಿಕಸನದ ಸನ್ನಿವೇಶವನ್ನು ಊಹಿಸಿ ಅದರೊಂದಿಗೆ ಹೆಚ್ಚು ತಲ್ಲೀನವಾಗುವ ಶಕ್ತಿಯ ಅತಿ ಮಹತ್ವದ ಅನುಕೂಲವೂ ಇತ್ತು.
ವ್ಯಾಕರಣ ಮತ್ತು ಭಾಷಾಶಾಸ್ತ್ರಕ್ಕಿಂತ ಭಾಷೆಯು ಅತಿ ಮುಖ್ಯವಾದದ್ದು. ಅದು ಒಂದು ಜನಾಂಗದ ಅಂತಃಶಕ್ತಿಯ ಅಸ್ತಿತ್ವದ ಮತ್ತು ಸಂಸ್ಕೃತಿಯ ಕಾವ್ಯ ರೂಪ ಮತ್ತು ಇಂದಿನ ಜನಾಂಗ ರಚನೆಗೆ ರೂಪಕೊಟ್ಟ ಭಾವನೆಗಳ ಮತ್ತು ಕಲ್ಪನೆಗಳ ಜೀವಂತ ಮೂರ್ತ ಸ್ವರೂಪ. ಶಬ್ದಾರ್ಥವು ಯುಗದಿಂದ ಯುಗಕ್ಕೆ ವ್ಯತ್ಯಾಸವಾಗಬಹುದು. ಹಳೆಯ ಭಾವನೆಗಳು ಹಳೆಯ ರೂಪದಲ್ಲಿ ನಷ್ಟತೆ ಯನ್ನು ಪಡೆಯಬಲ್ಲವು. ಪುರಾತನ ಶಬ್ದ ದ ಆಥವ ಶಬ್ದ ಸಮುದಾಯದ ಅರ್ಥವನ್ನು ಅದರ ಒಳ ಗುಟ್ಟನ್ನು ಅರಿಯುವುದು ಬಹು ಕಷ್ಟ. ಪ್ರಾಚೀನ ಯುಗದಲ್ಲಿ ಆ ಭಾಷೆಯನ್ನು ಬಳಸಿದವರ ಮನೋ ಪ್ರಪಂಚವನ್ನು ಪ್ರವೇಶಿಸಲು ಮತ್ತು ಆ ಹಳೆಯ ಅರ್ಥವನ್ನು ಗ್ರಹಿಸಲು ಯಾವುದೋ ಒಂದು ಬಗೆಯ ಭಾವಾವೇಶದ ಮತ್ತು ಕಾವ್ಯಮಯ ಜೀವನ ಅತ್ಯವಶ್ಯಕ. ಭಾಷೆ ಎಷ್ಟು ಪುಷ್ಟವೂ, ವಿಪುಲವೂ ಇದೆಯೋ ಆ ಪ್ರವೇಶವೂ ಅಷ್ಟೇ ಕಠಿನ. ಇತರ ಪ್ರಾಚೀನ ಭಾಷೆಗಳಂತೆ ಸಂಸ್ಕೃತದಲ್ಲಿ ಸಹ ಕಾವ್ಯ ಸೌಂದರ್ಯ ಮಾತ್ರವಲ್ಲದೆ ಆಳವಾದ ಅರ್ಥವೂ ಪರಭಾಷೆಗಳಿಗೆ ಅನುವಾದಮಾಡಲಾಗದ ಇನ್ನೂ ಅನೇಕ ವಿಶಿಷ್ಟ ಭಾವನೆಯುಳ್ಳ ಮತ್ತು ಭಿನ್ನ ಅಂತಸತ್ವ ಮತ್ತು ದೃಷ್ಟಿ ಯ ಶಬ್ದಗಳೂ ಬಹಳ ಇವೆ. ಸಂಸ್ಕೃತದ ವ್ಯಾಕರಣ ಮತ್ತು ತತ್ವಶಾಸ್ತ್ರದಲ್ಲಿ ಸಹ ಬಲವಾದ ಕಾವ್ಯಶಕ್ತಿಯಿದೆ. ಅದರ ಪ್ರಾಚೀನ ನಿಘಂಟು ಒಂದು ಕಾವ್ಯರೂಪದಲ್ಲಿದೆ.
ಸಂಸ್ಕೃತ ಭಾಷೆಯಲ್ಲಿ ನಿಷ್ಣಾತರಾದ ನಮ್ಮಲ್ಲಿ ಕೆಲವರಿಗೆ ಸಹ ಈ ಪ್ರಾಚೀನ ಭಾಷೆಯ ಅಂತಃ ಶಕ್ತಿಯನ್ನು ಗ್ರಹಿಸಿ ಆ ಪ್ರಾಚೀನ ಯುಗದ ಪ್ರಪಂಚವನ್ನು ಕಾಣುವುದು ಬಹು ಕಷ್ಟ, ಆದರೂ ಪ್ರಾಚೀನ ಪ್ರಪಂಚವು ನಮಗೆ ಇನ್ನೂ ಅಂಟಿಕೊಂಡಿರುವುದರಿಂದಲೂ, ಆ ಪ್ರಾಚೀನ ಸಂಪ್ರದಾಯ ಗಳು ಇನ್ನೂ ನಮ್ಮ ಆಸ್ತಿಯಾಗಿರುವುದರಿಂದಲೂ ನಮಗೆ ಆ ಶಕ್ತಿಯು ಸ್ವಲ್ಪ ಇದ್ದರೂ ಇರಬಹುದು. ಭಾರತದ ಆಧುನಿಕ ಭಾಷೆಗಳೆಲ್ಲ ಸಂಸ್ಕೃತ ಜನ್ಯ, ಅವುಗಳ ಶಬ್ದ ಸಂಪತ್ತು, ಮತ್ತು ರಚನಾ ರೂಪ ಎಲ್ಲವೂ ಸಂಸ್ಕೃತದಿಂದ ಬಂದುವು. ಸಂಸ್ಕೃತಕಾವ್ಯ ಮತ್ತು ತತ್ವಶಾಸ್ತ್ರದ ಅನೇಕ ಅಮೂಲ್ಯ ಅರ್ಥ ಗರ್ಭಿತ ಶಬ್ದಗಳ ಅನುವಾದವು ಅಶಕ್ಯವಾದರೂ ಅವು ನಮ್ಮ ಜಾನಪದ ಭಾಷೆಗಳಲ್ಲಿ ಇನ್ನೂ ಪ್ರಚುರವಿವೆ. ಜನರು ಆಡುವ ಭಾಷೆಯಾಗಿ ಬಹು ಹಿಂದೆಯೇ ನಿಂತು ಮೃತಭಾಷೆಯಾದರೂ ಈಗಲೂ ಅದರಲ್ಲಿ ಅದ್ಭುತಶಕ್ತಿಯಿದೆ. ಆದರೆ ವಿದೇಶೀಯರು ಎಷ್ಟೇ ವಿದ್ವಾಂಸರಿರಲಿ ಅವರಿಗೆ ಈ ಕಷ್ಟ ಇನ್ನೂ ಹೆಚ್ಚು, ವಿದ್ವಾಂಸರು ಮತ್ತು ಪಂಡಿತರು ಕವಿಗಳಲ್ಲದಿರುವುದು ಒಂದು ದುರ ದೃಷ್ಟ. ಈ ಭಾಷೆಯ ಅರ್ಥನಿರೂಪಣೆಗೆ ವಿದ್ವತ್ತೂರ್ಣ ಕವಿಗಳೇ ಬೇಕು. ಈ ವಿದ್ವಾಂಸರಿಂದ ಸಾಮಾನ್ಯವಾಗಿ ನಮಗೆ ದೊರಕುವುದು * ಸಾಹಿತ್ಯಸತ್ವದ ಅಪಭ್ರಂಶ ” ಎಂದು ಬಾರ್ತ್ ಎಂಬ ಫ್ರೆಂಚ್ ವಿದ್ವಾಂಸನು ಹೇಳುತ್ತಾನೆ.
ಈ ವಿಮರ್ಶಾತ್ಮಕ ಭಾಷಾಶಾಸ್ತ್ರದ ಅಭ್ಯಾಸವೂ ಮತ್ತು ಸಂಶೋಧನಕಾರವೂ ಬಹಳಮಟಗೈ
ಪುಟ:ಭಾರತ ದರ್ಶನ.djvu/೧೫೭
ಈ ಪುಟವನ್ನು ಪ್ರಕಟಿಸಲಾಗಿದೆ
೧೪೦
ಭಾರತ ದರ್ಶನ