ಈ ಪುಟವನ್ನು ಪ್ರಕಟಿಸಲಾಗಿದೆ
೧೭೦
ಭಾರತ ದರ್ಶನ

ಸವಿಸ್ತಾರವಾಗಿ ಬರೆದಿದ್ದಾನೆ. ಆದರೆ ಜನರ ಪದ್ಧತಿಗಳು, ಆಹಾರ ಉಡುಗೆ ತೊಡಿಗೆಗಳ ವಿಷಯವೂ ಹೇಳಿದ್ದಾನೆ. ಉತ್ತರ ಹಿಂದೂಸ್ಥಾನದಲ್ಲಿ ಈಗಿನಂತ ಆಗಲೂ ಗೋಧಿಯೇ ಮುಖ್ಯ ಅಹಾರವಾಗಿತ್ತು. ದಕ್ಷಿಣ ಮತ್ತು ಪೂರ್ವ ಭಾರತದಲ್ಲಿ ಅಕ್ಕಿ, ಕೆಲವು ವೇಳೆ ಅಪರೂಪವಾಗಿ ಮಾಂಸವನ್ನೂ ತಿನ್ನು ತಿದ್ದರು. ಅವನು ಹೇಳುವದರಲ್ಲಿ ಪ್ರಾಯಶಃ ಬುದ್ಧ ಸಂನ್ಯಾಸಿಗಳ ವಿಷಯವೇ ಹೆಚ್ಚು. ತುಪ್ಪ, ಎಣ್ಣೆ, ಹಾಲು, ಕೆನೆ ಎಲ್ಲ ಕಡೆಯಲ್ಲೂ ಸಮೃದ್ಧವಾಗಿ ಸಿಗುತ್ತಿತ್ತು. ಕಡುಬು, ಹಣ್ಣುಗಳು ಹೇರಳ ವಾಗಿದ್ದು ದೊರೆಯುತ್ತಿದ್ದವು. ಭಾರತೀಯರು ಕೆಲವು ವಿಧಿಕ್ರಮದ ಪಾವಿತ್ರ್ಯತೆಗೆ ಕೊಡುತ್ತಲಿದ್ದ ಪ್ರಾಮುಖ್ಯತೆಯನ್ನು ತಿಳಿದುಕೊಂಡ. “ ಇಂಡಿಯದ ಪಂಜಾಬಿಗೂ ಮತ್ತು ಇತರ ದೇಶಗಳಿಗೂ ಇರುವ ಮೊದಲನೆಯ ಪ್ರಮುಖ ವ್ಯತ್ಯಾಸವೆಂದರೆ ಪವಿತ್ರತೆ ಮತ್ತು ಅಪವಿತ್ರತೆಯ ಭಾವನೆ, ಉಚ್ಚಿಷ್ಟ ವನ್ನು ಉಳಿಸುವ ಚೀನೀ ಪದ್ಧತಿಯು ಭಾರತೀಯ ಭಾವನೆಗೆ ವಿರುದ್ಧ ” ಎಂದಿದ್ದಾನೆ.
ಇತ್ಸಿಂಗ್ ಇಂಡಿಯಾ ದೇಶವನ್ನು ಸಾಮಾನ್ಯವಾಗಿ ಪಶ್ಚಿಮ ದೇಶ (ಸಿಫ್ಯಾಂಗ್) ಎಂದು ಕರೆದಿದ್ದಾನೆ; ಆರ್ಯದೇಶ ಎಂದೂ ಕರೆದಿದ್ದಾನೆ. “ಆರ್ಯ ಎಂದರೆ ಉತ್ತಮ. ಉತ್ತಮ ಚರಿತರು ಪರಂಪರಾನುಗತವಾಗಿ ಅಲ್ಲಿ ಜನ್ಮತಾಳಿರುವುದರಿಂದ ಆ ದೇಶಕ್ಕೆ ಈ ಹೆಸರು ಬಂದಿದೆ. ನೂರಾರು ದೇಶಗಳ ಮಧ್ಯೆ ಇರುವುದರಿಂದ ಅದನ್ನು ಮಧ್ಯದೇಶ ಎಂದು ಕರೆದಿರುತ್ತಾರೆ. ಈ ಹೆಸರು ಸಾಮಾನ್ಯವಾಗಿ ಎಲ್ಲ ಜನರಿಗೂ ತಿಳಿದಿದೆ. ಉತ್ತರದ ಜನರು ( ಹೂ ಅಥವ ಮಂಗೋಲ್ ಜನರು ಅಥವ ತುರುಕರು) ಈ ಆರ್ಯದೇಶವನ್ನು ಹಿಂದೂ (ಸಿನ್-ತು) ಎಂದು ಕರೆಯುತ್ತಾರೆ. ಆದರೆ ಇದು ಹೆಚ್ಚು ಬಳಕೆಯಲ್ಲಿಲ್ಲ, ಅದು ಒಂದು ದೇಶಭಾಷೆಯ ಹೆಸರು, ಅದಕ್ಕೆ ಯಾವ ವಿಶೇಷ ಅರ್ಥವೂ ಇಲ್ಲ. ಇ೦ಡಿಯ ದೇಶದ ಜನರಿಗೆ ಈ ಹೆಸರು ಅಪರಿಚಿತ, ಇ೦ಡಿಯ ದೇಶಕ್ಕೆ “ ಉತ್ತಮ ದೇಶ ” ಅಥವ ಆರ್ಯದೇಶ ಎಂಬುದೇ ಸರಿಯಾದ ಹೆಸರು,
'ಹಿಂದೂ' ಶಬ್ದಕ್ಕೆ ಇಂಗನ ವಿವರಣೆ ಆಶ್ಚರ್ಯಕರವಾಗಿದೆ. ” ಇಂದು ಎಂದರೆ ಚಂದ್ರ ನೆಂದು ಕೆಲವರು ಹೇಳುತ್ತಾರೆ. ಇಂಡಿಯ ದೇಶದ ಚೀನೀ ಹೆಸರು “ ಇಂದು ” (ಇನ್-ಟು) ಅದ ರಿಂದಲೇ ಹುಟ್ಟಿದೆ. ಆರ್ಥ ಅದೇ ಇರಬಹುದಾದರೂ ಆ ಹೆಸರು ಸಾಮಾನ್ಯ ಬಳಕೆಯಲ್ಲಿಲ್ಲ. ಇಂಡಿಯಾ ದೇಶದ ಜನರು - ಚೌ' ಮಹಾರಾಷ್ಟ್ರಕ್ಕೆ ಚೀನಾ ಎಂದು ಒಂದೇ ಹೆಸರಿನಿಂದ ಕರೆಯು ತ್ತಾರೆ. ಅದಕ್ಕೆ ವಿಶೇಷ ಅರ್ಥವೂ ಏನೂ ಇಲ್ಲ. ” ಎಂದು ಹೇಳಿದ್ದಾನೆ. ಕೊರಿಯ ಮತ್ತು ಇತರ ದೇಶಗಳ ಸಂಸ್ಕೃತ ಹೆಸರುಗಳನ್ನೂ ತಿಳಿಸುತ್ತಾನೆ.
ಇಂಡಿಯ ದೇಶವನ್ನೂ, ಅನೇಕ ಭಾರತೀಯ ವಸ್ತುಗಳನ್ನೂ ಇಷ್ಟು ಹೊಗಳಿದರೂ ಸ್ವದೇಶವಾದ ಚೀನಾ ದೇಶಕ್ಕೇನೆ ಆತನು ಮೊದಲನೆಯ ಸ್ಥಾನ ಕೊಡುತ್ತಾನೆ. ಇಂಡಿಯ ಆರ್ಯ ಭೂಮಿ ' ಆದರೆ ಚೀನ ( ದೇವಭೂಮಿ, ' ಭಾರತದ ಪಂಚದೇಶಗಳ ಜನರು ತಮ್ಮ ಶೀಲ ಮತ್ತು ಉತ್ತಮ ಜೀವನದ ವಿಷಯದಲ್ಲಿ ಹೆಮ್ಮೆ ಪಡುತ್ತಾರೆ, ಆದರೆ ಉನ್ನತ ಸಂಸ್ಕೃತಿ, ಸಾಹಿತ್ಯದ ಸೊಬಗು, ಔಚಿತ್ಯ, ಮರ್ಯಾದೆ, ಸ್ವಾಗತಿಸುವ ಬೀಳ್ಕೊಡುವ ಸಮಾರಂಭ, ಊಟದ ರುಚಿ, ದಾನ ಧರ್ಮಗಳು, ಶ್ರೀಮಂತಿಕೆಯನ್ನು ಕಾಣಬೇಕಾದರೆ ಚೀನಾ ದೇಶಕ್ಕೆ ಹೋಗಬೇಕು. ಬೇರಾವ ದೇಶವೂ ಅದನ್ನು ಮಾರಿಸಲಾರದು ಎಂದಿದ್ದಾನೆ. ವೈದ್ಯದಲ್ಲಿ ಶಸ್ತ್ರ ವಿದ್ಯ, ಚುಟುಕಹಾಕುವುದು, ನಾಡಿ ನೋಡುವುದರಲ್ಲಿ ಭಾರತೀಯರಲ್ಲಿ ಯಾರೂ ಚೀನಾ ದೇಶವನ್ನು ಮಾರಿಸಿಲ್ಲ. ಆಯುಸ್ಸನ್ನು ವೃದ್ಧಿ ಮಾಡತಕ್ಕ ಔಷಧವು ಚೀನ ದೇಶಕ್ಕೆ ಮಾತ್ರ ತಿಳಿದಿದೆ. ಜನರ ಉದಾತ್ತ ಜೀವನ ಮತ್ತು ವಸ್ತು ಶ್ರೇಷ್ಠತೆಯಿಂದ ಚೀನ ದೇಶವನ್ನು ದೇವಲೋಕವೆಂದು ಕರೆಯಲಾಗಿದೆ. ಇಂಡಿಯದ ಪಂಚ ದೇಶಗಳಲ್ಲಿ ಚೀನಾ ದೇಶವನ್ನು ಹೊಗಳದ ಜನ ಯಾರಾದರೂ ಇದ್ದಾರೆಯೇ ” ? ಎಂದು ಕೇಳಿದ್ದಾನೆ.
ಚೀನ ದೇಶದ ಚಕ್ರವರ್ತಿಗೆ ಹಳೆಯ ಸಂಸ್ಕೃತ ಗ್ರಂಥಗಳಲ್ಲಿ ದೇವಪುತ್ರ' (ಅಂದರೆ ಸ್ವರ್ಗ ದಲ್ಲಿ ಹುಟ್ಟಿದವನು) ಎಂದು ಕರೆದಿರುತ್ತಾರೆ.
ಸಂಸ್ಕೃತದಲ್ಲಿ ಸ್ವತಃ ಪಂಡಿತನಾದ ಇಟ್ಟಿಂಗ್ ಸಂಸ್ಕೃತವನ್ನು ತುಂಬ ಶ್ಲಾಘಿಸಿದ್ದಾನೆ.