ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೭೧

ಉತ್ತರದಲ್ಲಿಯೂ ದಕ್ಷಿಣದಲ್ಲಿಯೂ ಅದಕ್ಕೆ ಮನ್ನಣೆ ಇದೆ, ಎಂದು ಹೇಳಿದ್ದಾನೆ. “ ದೇವಭೂಮಿ (ಚೀನಾ) ಯ ಜನರೂ, ದೇವಲೋಕದ ಉಗ್ರಾಣವಾದ ಇಂಡಿಯಾದ ಜನರೂ ಭಾಷಾಶಾಸ್ತ್ರವನ್ನು ಇನ್ನೂ ಎಷ್ಟು ಬೋಧಿಸಬೇಕು (?) ಎಂದಿದ್ದಾನೆ. ಚೀನಾ ದೇಶದಲ್ಲಿ ಸಂಸ್ಕೃತ ಪಾಂಡಿತ್ಯವು ವಿಪುಲವಾಗಿ ಬೆಳೆದಿರಬೇಕು. ಚೀನಿಭಾಷೆಯಲ್ಲಿ ಸಂಸ್ಕೃತ ಸ್ವರೋಚ್ಚಾರಣೆಯನ್ನು ತರಲು ಚೀನೀ ವಿದ್ವಾಂಸರು ಪ್ರಯತ್ನ ಮಾಡಿದರು. ಅವರಲ್ಲಿ ಮುಖ್ಯನಾದವನು ಟಾಂಗ್ ವಂಶದ ಅರಸರ ಕಾಲ ದಲ್ಲಿದ್ದ ' ಜೊವೆನ್ ' ಎಂಬ ಬೌದ್ಧ ಸಂನ್ಯಾಸಿ ಸಂಸ್ಕೃತದ ಸ್ವರಮಾಲೆಯನ್ನು ಚೀನೀಭಾಷೆಯಲ್ಲಿ ತರಲು ಪ್ರಯತ್ನ ಮಾಡಿದನು.
ಇಂಡಿಯದಲ್ಲಿ ಬೌದ್ಧ ಮತವು ಕ್ಷೀಣಿಸುತ್ತ ಬಂದಂತೆ ಭಾರತದ ಬೌದ್ಧ ಯಾತ್ರಾಸ್ಥಳಗಳನ್ನು ನೋಡಲು ಚೀನದಿಂದ ಯಾತ್ರಿಕರು ಆಗಾಗ ಬಂದರೂ ವಿದ್ವಾಂಸರ ಪ್ರವಾಸವು ನಿಂತುಹೋಯಿತು. ಹನ್ನೊಂದನೆಯ ಶತಮಾನದಿಂದ ಈಚೆಗೆ ನಡೆದ ರಾಜಕೀಯ ವಿಪ್ಲವಗಳ ನಂತರ ಬೌದ್ಧ ಸಂನ್ಯಾಸಿ ಗಳು ತಂಡೋಪತಂಡವಾಗಿ ಹಸ್ತ ಪ್ರತಿಗಳ ಹೊರೆಗಳನ್ನು ಹೊತ್ತು ನೇಪಾಳದ ಮೂಲಕ ಹಿಮಾಲಯ ಪರ್ವತವನ್ನು ದಾಟಿ ತಿಬೆಟ್ಟಿಗೆ ಹೋಗಿ ನೆಲಸಿದರು. ಈ ರೀತಿ ಭಾರತೀಯ ಪ್ರಾಚೀನ ಸಾಹಿತ್ಯದ ಬಹುಭಾಗ ತಿಬೆಟ್ಟಿಗೆ ಮತ್ತು ಆ ಮುಂಚೆ ಚೀನಕ್ಕೆ ಹೋಗಿ ಸೇರಿತು. ಈಚೆಗೆ ಮೂಲ ಪ್ರತಿಗಳೂ ಅನುವಾದಗಳೂ ಅನೇಕ ಗ್ರಂಥಗಳೂ ದೊರೆತಿವೆ. ಬೌದ್ಧ ಧರ್ಮಗ್ರಂಥಗಳಲ್ಲದೆ ಬ್ರಾಹ್ಮಣ ಧರ್ಮ, ಖಗೋಳಶಾಸ್ತ್ರ, ಗಣಿತಶಾಸ್ತ್ರ ಮತ್ತು ವೈದ್ಯಶಾಸ್ತ್ರದ ಅನೇಕ ಪ್ರಾಚೀನ ಮಹಾಕಾವ್ಯಗಳು ಚೀಣೀ ಮತ್ತು ತಿಬೆಟ್ ಭಾಷೆಗಳ ಅನುವಾದಗಳಲ್ಲಿ ದೊರೆತಿವೆ. ಚೀನದಲ್ಲಿ ( ಸೂಂಗ್ ಪಾವೊ ? ಎಂಬ ಒಂದು ಪುಸ್ತಕಭಂಡಾರದಲ್ಲಿಯೇ ೮೦೦೦ ಗ್ರಂಥಗಳಿವೆ. ತಿಬೆಟ್‌ನಲ್ಲಂತೂ ಎಲ್ಲೆಲ್ಲೂ ತುಂಬಿವೆ. ಭಾರತೀಯ, ಚೀನೀ, ತಿಬೆಟ್ ವಿದ್ವಾಂಸರುಗಳಲ್ಲಿ ಪೂರ್ಣ ಸೌಹಾರ್ದ ಸಹಕಾರವಿತ್ತು. ಬೌದ್ಧ ಪಾರಿ ಭಾಷಿಕ ಶಬ್ದಕೋಶಗಳಲ್ಲಿ ಸಂಸ್ಕೃತ-ತಿಬೆಟ್-ಚೀನೀ ಭಾಷೆಗಳ ನಿಘಂಟು ಒಂದು ಇರುವುದು ಈ ಸೌಹಾರ್ದಕ್ಕೆ ದೊಡ್ಡ ನಿದರ್ಶನ. ಇದು ಕ್ರಿಸ್ತಶಕ ೯ ಅಥವ ೧೦ ನೆಯ ಶತಮಾನದಲ್ಲಿ ಬರೆದದ್ದು. ಇದನ್ನು “ ಮಹಾವುತ್ಪತ್ತಿ ” ಎಂದು ಕರೆಯುತ್ತಾರೆ.
ಚೀನಾ ದೇಶದಲ್ಲಿ ಅಚ್ಚಾದ ಅತಿ ಪ್ರಾಚೀನ ಗ್ರಂಥಗಳೆಂದರೆ ಕ್ರಿ. ಶ. ಎಂಟನೆಯ ಶತಮಾನದ ಸಂಸ್ಕೃತ ಗ್ರಂಥಗಳು. ಅವೆಲ್ಲ ಮರದ ಹಲಗೆಗಳ ಮೇಲೆ ಬರೆದವುಗಳು. ಹತ್ತನೆಯ ಶತಮಾನ ದಲ್ಲಿ ಸಾಮ್ರಾಜ್ಯ ಮುದ್ರಣ ಸಮಿತಿಯೊಂದು ನೇಮಕವಾಯಿತು. ಅದರ ಫಲವಾಗಿ ಸೂಂಗ್ ಯುಗದವರೆಗೆ ಮುದ್ರಣ ಕಲೆಯು ಅವಿಚ್ಛಿನ್ನವಾಗಿ ಮುಂದುವರಿಯಿತು. ಚೀನೀ ಮತ್ತು ಭಾರತೀಯ ವಿದ್ವಾಂಸರುಗಳಲ್ಲಿ ಇಷ್ಟು ಬಳಕೆ ಇದ್ದು ನೂರಾರು ವರ್ಷಗಳ ಕಾಲ ಅನೇಕ ಗ್ರಂಥಗಳ ಹಸ್ತ ಪ್ರತಿಗಳ ವಿನಿಮಯವಾಗುತ್ತಿದ್ದರೂ ಆ ಕಾಲದಲ್ಲಿ ಇಂಡಿಯದಲ್ಲಿ ಗ್ರಂಥಗಳ ಮುದ್ರಣವು ನಡೆಯದಿದ್ದುದು ಆಶ್ಚರ್ಯ, ಅಚ್ಚುಗಳ ಮೂಲಕ ಮುದ್ರಣ ಮಾಡುವ ಕಲೆಯು ಬಹು ಕಾಲಕ್ಕೆ ಮುಂಚೆಯೇ ಚೀನದಿಂದ ತಿಬೆಟ್ಗೆ ಹರಡಿತು, ಮತ್ತು ಈಗಲೂ ಅಲ್ಲಿ ನಡೆಯುತ್ತಿದೆ. ೧೨೬೦-೧೩೬೮ರ ವರೆಗಿದ್ದ ಮಂಗೋಲ್ ಅಥವ ಯುವಾನ್ ರಾಜಮನೆತನದ ಕಾಲದಲ್ಲಿ ಚೀನೀ ಮುದ್ರಣ ಕಲೆಯು ಯೂರೋಪಿಗೆ ಹರಡಿತು.
ಇಂಡೋ ಆಪ್ಟನ್ ಮತ್ತು ಮೊಗಲರ ಕಾಲದಲ್ಲಿ ಸಹ ಇಂಡಿಯ ಮತ್ತು ಚೀನಕ್ಕೆ ಆಗಾಗ್ಯ ರಾಜಕೀಯ ಸಂಪರ್ಕವಿರುತ್ತಿತ್ತು. ೧೩೨೬ ರಿಂದ ೫೧ ರ ವರೆಗೆ ದೆಹಲಿಯ ಸುಲ್ತಾನನಾಗಿದ್ದ ಮಹಮದ್ ರ್ಬಿ ತೊಗಲಕ್ಕನು ಅರಬ್ಬಿ ಯಾತ್ರಿಕನಾದ ಇಬನ್ ಬಟೂಟ ಎಂಬಾತನನ್ನು ಚೀಣೀ ಚಕ್ರವರ್ತಿಯ ಆಸ್ಥಾನಕ್ಕೆ ತನ್ನ ರಾಯಭಾರಿಯಾಗಿ ಕಳುಹಿಸಿದ್ದನು. ಅಷ್ಟು ಹೊತ್ತಿಗೆ ವಂಗ ದೇಶವು ದೆಹಲಿಯ ಚಕ್ರವರ್ತಿಯ ಅಧೀನತೆಯನ್ನು ಬಿಟ್ಟು ಸ್ವತಂತ್ರ ರಾಷ್ಟ್ರವಾಗಿತ್ತು. ೧೪ ನೆಯ ಶತಮಾನದ ಮಧ್ಯಭಾಗದಲ್ಲಿ ಚೀನೀ ರಾಜಸಭೆಯಿಂದ ಹು-ಪೀನ್, ಫಿನ್-ಡೀನ್ ಎಂಬ ಇಬ್ಬರು ರಾಯಭಾರಿಗಳು ಬಂಗಾಳದ ಸುಲ್ತಾನನಲ್ಲಿಗೆ ಬಂದರು. ಸುಲ್ತಾನ ಹೈಯಾಸುದ್ದೀನನ ಕಾಲದಲ್ಲಿ