ಈ ಪುಟವನ್ನು ಪ್ರಕಟಿಸಲಾಗಿದೆ

ಯುಗಾಂತರಗಳು

೧೭೩

ವೈಚಿತ್ರದಿಂದ ಇoಡಿಯ ಚೀನಾಗಳೆರಡೂ ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಅಧೀನಕ್ಕೊಳ ಗಾದವು. ಇಂಡಿಯ ಬಹುಕಾಲ ಈ ದಾಸ್ಯವನ್ನು ಅನುಭವಿಸಬೇಕಾಗಿ ಬಂದಿತು; ಚೀನ ಅತ್ಯಲ್ಪ ಕಾಲದಲ್ಲಿ-ಆ ಸಂಬಂಧವನ್ನು ಕಳಚಿಕೊಂಡರೂ ಅಫೀಮು ಮತ್ತು ಒಳ ಯುದ್ದಗಳಿಂದ ಪಾರಾಗಲಿಲ್ಲ.
ಈಗ ಕಾಲಚಕ್ರವು ಪುನಃ ಮೇಲೆ ಹೊರಳಿದೆ. ಚೀನಾ ಮತ್ತು ಇ೦ಡಿಯ ದೇಶಗಳು ಪರಸ್ಪರ ಪುನರ್ಮಿಲನದಿಂದ ಲಾಭ ಪಡೆದು ತಮ್ಮ ಗತವೈಭವನ್ನು ಸ್ಮರಿಸುತ್ತಿವೆ. ಹೊಸ ಬಗೆಯ ಯಾತ್ರಿಕರು ಮಧ್ಯೆ ಇರುವ ಪರ್ವತಶ್ರೇಣಿಗಳನ್ನು ದಾಟಿ ಶುಭಸಂದೇಶ ಮತ್ತು ಹರ್ಷವನ್ನು ಕೊಂಡೊಯ್ದು ಹೊಸ ಸ್ನೇಹ ತಂತುಗಳನ್ನು ಸೃಜಿಸುತ್ತಿದಾರೆ.

೧೬. ಭಾರತೀಯ ಪಾಳೆಯಗಳು ಮತ್ತು ಆಗ್ನೆಯ ಏಷ್ಯ ಸಂಸ್ಕೃತಿ


ಭಾರತವನ್ನು ಅರಿತು ಅರ್ಥ ಮಾಡಿಕೊಳ್ಳಬೇಕಾದರೆ ಇಂದಿನ ಸಂಶಯ ಸಂಕುಚಿತ ಮನೋ ಭಾವ, ಮತ್ತು ಭಯಂಕರ ಪರಿಸ್ಥಿತಿಯನ್ನು ಸ್ವಲ್ಪ ಮರೆತು ಹಿಂದೆ ಅದು ಯಾವ ಸ್ಥಿತಿಯಲ್ಲಿತ್ತು ಮತ್ತು ಏನನ್ನು ಸಾಧಿಸಿತು ಎಂಬುದನ್ನು ತಿಳಿದುಕೊಳ್ಳಬೇಕು. ಅದರ ಕಿರುನೋಟ ಕಾಣಲು ಪ್ರಸ್ತುತ ಕಾಲ, ದೇಶಗಳಿಂದ ಬಹುಕಾಲ ಹಿಂದೆ ಹೋಗಬೇಕು. ರವೀಂದ್ರನಾಥ ಠಾಕೂರರು “ ನನ್ನ ದೇಶವನ್ನರಿಯಲು, ಭಾರತವು ತನ್ನ ಆತ್ಮವನ್ನರಿತು, ತನ್ನ ಪ್ರಾಕೃತಿಕ ಮೇರೆಗಳನ್ನು ಮಾರಿ ಪೂರ್ವ ದಿಗಂತವನ್ನೆಲ್ಲ ತನ್ನ ಜಾಜ್ವಲ್ಯಮಾನವಾದ ದಿವ್ಯಜ್ಯೋತಿಯಿಂದ ಬೆಳಗಿ, ತನ್ನ ವಿರಾಟ್ ವ್ಯಕ್ತಿ ಸ್ವರೂಪ ದರ್ಶನ ತೋರಿ, ಆ ದೂರ ತೀರದ ಜನರಿಗೊಂದು ಅಚ್ಚರಿಯ ನವಜೀವನವನ್ನು ಕೊಟ್ಟು ತಾವೂ ಭಾರತೀಯರೆಂಬ ಭಾವನೆಯನ್ನು ೦ಟು ಮಾಡಿದ ಯುಗಕ್ಕೆ ಹೋಗಬೇಕು. ಇಂದಿನ ಕೂಪ ಮಂಡೂಕದ ಸಂಕುಚಿತ ಜೀವನದ ಯುಗದಲ್ಲಿ ಅದು ಸಾಧ್ಯವಿಲ್ಲ. ಇಂದಿನ ಬಹಿಷ್ಕಾರ ಮನೋ ವೃತ್ತಿಯ, ಲೋಭಿತನದ, ದುರಹಂಕಾರದಲ್ಲಿಲ್ಲ. ಕಾರ್ಗತ್ತಲಿನ ಗತಕಾಲದ ಅರ್ಥರಹಿತ ಸ್ಮರಣೆಯಲ್ಲಿ ಮೂಕಮೃಗದಂತೆ ತನ್ನ ಸುತ್ತ ತಾನೇ ತಿರುಗುತ್ತ ಭಾವೀಯಾತ್ರಿಕರಿಗೆ ಯಾವ ಸಂದೇಶವನ್ನೂ ಕೊಡಲಾಗದ ಭಾವನಾಶ್ರೀಯ ದಿವಾಳಿತನದ ಕಾಲದಲ್ಲಿ ” ಅಲ್ಲ ಎಂದಿದ್ದಾರೆ.
ಗತಯುಗಕ್ಕೆ ಹೋಗುವದಲ್ಲದೆ, ಪ್ರತ್ಯಕ್ಷ ಪ್ರಯಾಣ ಅಸಾಧ್ಯವಾದರೂ ಮನಸ್ಸಿನ ಕಲ್ಪನೆಯ ಲ್ಲಾದರೂ, ಇಂಡಿಯ ದೇಶವು ಅನೇಕ ವಿಧವಾಗಿ ಹಬ್ಬಿ ಹರಡಿ ತನ್ನ ಆತ್ಮಚೈತನ್ಯವನ್ನು ಅಪಾರ ಶಕ್ತಿಯನ್ನು, ಸೌಂದರ್ಯ ಪ್ರೇಮದ ಶಾಶ್ವತ ಪ್ರತಿಭೆಯನ್ನು ಬೀರಿದ ಏಷ್ಯದ ನಾನಾ ರಾಷ್ಟ್ರಗಳಿಗೆ ಹೋಗಬೇಕು. ಗತಕಾಲದ ನಮ್ಮ ಈ ಅದ್ಭುತ ಸಾಧನೆಯನ್ನು ಎಷ್ಟು ಜನರು ಅರಿತಿದ್ದೇವೆ. ಇಂಡಿಯ ಭಾವನೆ ಮತ್ತು ದರ್ಶನಗಳಲ್ಲಿ ಮಾತ್ರವಲ್ಲದೆ ಕಾರ್ಯತತ್ಪರತೆಯಲ್ಲಿ ಸಹ ಅತ್ಯುನ್ನತ ವಿತ್ತು ಎಂದು ಎಷ್ಟು ಜನರು ತಿಳಿದಿದ್ದೇವೆ. ಭಾರತೀಯ ಪುರುಷರು ತಮ್ಮ ತಾಯ್ಯಾಡನ್ನು ಬಿಟ್ಟು ಬಹುದೂರದ ದೇಶಗಳಲ್ಲಿ ಸಾಧಿಸಿದ ಕಾರ್ಯದ ಇತಿಹಾಸವನ್ನು ಇನ್ನೂ ಬರೆಯಬೇಕಾಗಿದೆ. ಅನೇಕ ಪಾಶ್ಚಿಮಾತ್ಯರು ಪ್ರಾಚೀನ ಇತಿಹಾಸವೆಲ್ಲ ಭೂಮದ್ಯ ಸಮುದ್ರ ತೀರದ ದೇಶಗಳಿಗೆ ಸಂಬಂಧ ಪಟ್ಟಿದ್ದು, ಮಧ್ಯಯುಗ ಮತ್ತು ಆಧುನಿಕ ಕಾಲದ ಇತಿಹಾಸವೆಲ್ಲ ಚೋಟುದ್ದದ ಜಗಳಗಂಟಕ ಯೂರೋಪಿಗೆ ಸಂಬಂಧಿಸಿದ್ದು ಎಂದೇ ಭಾವಿಸಿರುತ್ತಾರೆ. ಯೂರೋಪ್ ಒಂದರಿಂದ ಪ್ರಪಂಚದ ಅಳಿವು ಉಳಿವು ಉಳಿದುದೆಲ್ಲ ಲೆಕ್ಕಕ್ಕೆ ಬಾರದು ಎಂದೇ ಇನ್ನೂ ಗುಣಾಕಾರ ಮಾಡುತ್ತಿದಾರೆ.
ಸರ್ ಚಾರ್ ಸ್ ಇಲಿಯಟ್ “ ಇಂಡಿಯ ದೇಶದ ಮೇಲೆ ದಂಡೆತ್ತಿ ಬಂದವರ ಸಾಹಸ ಗಳನ್ನು ಮಾತ್ರ ಗಮನಿಸಿ ಭಾರತೀಯರು ನಿರ್ವಿಯ್ರರು. ಹಗಲುಗನಸು ಕಾಣುವವರು, ಒಂದು ಕರೆ ಪರ್ವತಶ್ರೇಣಿ ಉಳಿದ ಕಡೆ ಸಮುದ್ರದ ಗಡಿಯೊಳಗೆ ಸುರಕ್ಷಿತವಾಗಿ ಮಾನವನ ಪ್ರಪಂಚದಿಂದ ದೂರವಿರುವವರು ಎಂದು ಯೂರೋಪಿಯನರು ಬರೆದ ಚರಿತ್ರೆಗಳು ಪ್ರಪಂಚದಲ್ಲಿ ಭಾರತೀಯರ ಸ್ಥಾನಮಾನಗಳಿಗೆ ತುಂಬ ಅನ್ಯಾಯ ಮಾಡಿವೆ. ಆ ಚಿತ್ರದಲ್ಲಿ ಹಿಂದೂಗಳ ಮಾನಸಿಕ ದಿಗ್ವಿಜಯ ಗಳಿಗೆ ಯಾವ ಸ್ಥಾನವೂ ಇಲ್ಲ. ಅವರ ರಾಜಕೀಯ ದಿಗ್ವಿಜಯಗಳನ್ನೂ ಉಪೇಕ್ಷೆ ಮಾಡುವಂತಿಲ್ಲ,