ಈ ಪುಟವನ್ನು ಪ್ರಕಟಿಸಲಾಗಿದೆ
೧೭೨
ಭಾರತ ದರ್ಶನ

ಬಂಗಾಲದಿಂದ ಚೀನಾಕ್ಕೆ ಅನೇಕ ರಾಯಭಾರಿಗಳು ಹೋಗಿದ್ದರು. ಆಗ ಚೀನಾದಲ್ಲಿ ಮಿಂಗ್ ಚಕ್ರವರ್ತಿಗಳ ಕಾಲ, ಸೈಯದ್ ಉದ್ದೀನನ ಕಾಲದಲ್ಲಿ ೧೪೧೪ ರಲ್ಲಿ ಹೋದ ರಾಯಭಾರಿಗಳು ಒಯ್ದ ಬಹುಮಾನಗಳಲ್ಲಿ ಸಜೀವ ಜಿರಾಫೆಯು ಒಂದು, ಜಿರಾಫೆ ಇ೦ಡಿಯಕ್ಕೆ ಹೇಗೆ ಬಂದಿತೋ ಅದೇ ಒಂದು ವಿಚಿತ್ರ. ಪ್ರಾಯಶಃ ಆಫ್ರಿಕದ ಒಂದು ಅಪರೂಪ ವಸ್ತುವಾದ್ದರಿಂದ ಮಿಂಗ್ ಚಕ್ರವರ್ತಿಯು ಪ್ರೀತಿಯಿಂದ ಸ್ವೀಕರಿಸಬಹುದೆಂದು ಕಳುಹಿಸಿರಬೇಕು. ಕನ್ ಪೂಷಿಯಸ್‌ನ ಅನುಯಾಯಿಗಳಿಗೆ ಜಿರಾಫೆ ಒಂದು ಶುಭ ವಸ್ತುವಾದ್ದರಿಂದ ಅದಕ್ಕೆ ಬಹಳ ಆದರದ ಸ್ವಾಗತವು ದೊರೆಯಿತು. ಆ ಪ್ರಾಣಿಯು ಜಿರಾಫ್ ಎನ್ನು ವದರಲ್ಲಿ ಅನುಮಾನವಿಲ್ಲ. ಏಕೆಂದರೆ ಅದರ ದೀರ್ಘ ವರ್ಣನೆ ಇರುವುದ ಲ್ಲದೆ, ರೇಷ್ಮೆಯ ಕರವಸ್ತ್ರದ ಮೇಲೆ ಅದರ ಚಿತ್ರವಿದೆ. ಈ ಚಿತ್ರವನ್ನು ಚಿತ್ರಿಸಿದ ರಾಜ ಕಲಾವಿದ. ಅದನ್ನೂ ಅದರಿಂದ ಒದಗುವ ಅದೃಷ್ಟ ಪರಂಪರೆಯನ್ನೂ ವರ್ಣಿಸಿ ದೊಡ್ಡ ಗ್ರಂಥವನ್ನೇ ಬರೆದಿದ್ದಾನೆ. * ಸಚಿವರು ಮತ್ತು ಪ್ರಜೆಗಳು ಅದರ ದರ್ಶನಕ್ಕಾಗಿ ಗುಂಪುಗಟ್ಟಿದ್ದರು. ಅವರ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ” ಎಂದಿದ್ದಾನೆ.
ಬೌದ್ದರ ಕಾಲದಲ್ಲಿ ಇಂಡಿಯ ಚೀನಾಗಳ ಮಧ್ಯೆ ಬೆಳೆದು ಬಂದಿದ್ದ ವ್ಯಾಪಾರವು ಇಂಡೋ ಆಫ್ಘನರ ಮತ್ತು ಮೊಗಲರ ಕಾಲದಲ್ಲೂ ಮುಂದುವರಿಯಿತು. ಅನೇಕ ವಸ್ತುಗಳ ಕೊಡುವಳಿಯೂ ಇತ್ತು. ಇದು ಉತ್ತರದ ಹಿಮಾಲಯದ ಕಣಿವೆಗಳ ಮೂಲಕ ಮತ್ತು ಮಧ್ಯ ಏಷ್ಯದ ಒಂಟಿ ಮಾರ್ಗಗಳ ಮೂಲಕ ನಡೆಯುತ್ತಿತ್ತು. ಆಗೇಯ ಏಷ್ಯದ ದ್ವೀಪಗಳ ಮೂಲಕವು ಮುಖ್ಯವಾಗಿ ದಕ್ಷಿಣ ಭಾರತದ ಸಮುದ್ರ ತೀರದ ಬಂದರುಗಳಿಗೂ ಸಮುದ್ರ ವ್ಯಾಪಾರವೂ ನಡೆಯುತ್ತಿತ್ತು.
ಈ ಸಹಸ್ರಾರು ವರ್ಷಗಳ ಇ೦ಡಿಯ ಮತ್ತು ಚೀನ ದೇಶಗಳ ಸಂಪರ್ಕದಿಂದ ದಾರ್ಶನಿಕ ಮತ್ತು ಭಾವನಾ ಪ್ರಪಂಚಗಳಲ್ಲಿ ಮಾತ್ರವಲ್ಲದೆ ಜೀವನ ಕಲೆ ಮತ್ತು ವಿಜ್ಞಾನ ವಿಷಯಗಳಲ್ಲಿ ಸಹ ಅನೇಕ ವಿಷಯಗಳನ್ನು ಒಂದರಿಂದ ಒಂದು ಕಲಿತುಕೊಂಡವು. ಚೀನಾ ದೇಶದ ಪ್ರಭಾವವು ಇ೦ಡಿಯ ದೇಶದಮೇಲೆ ಬಿದ್ದು ದಕ್ಕಿಂತ ಹೆಚ್ಚಾಗಿ ಇಂಡಿಯ ದೇಶದ ಪ್ರಭಾವವು ಚೀನಾ ದೇಶದ ಮೇಲೆ ಹೆಚ್ಚು ಪರಿಣಾಮಕಾರಿಯಾದದ್ದು ಒಂದು ದೊಡ್ಡ ನ್ಯೂನತೆ, ಚೀನಾ ದೇಶದ ಪ್ರಭಾವವು ಇಂಡಿಯಾ ದೇಶದ ಮೇಲೆ ಹೆಚ್ಚು ಪರಿಣಾಮಕಾರಿಯಾಗಿದ್ದಿದ್ದರೆ ಚೀನೀಯರ ವ್ಯವಹಾರ ಜ್ಞಾನದಿಂದ ಭಾರತೀಯರು ವಿಶೇಷ ಲಾಭ ಪಡೆದು ಅದರ ಸಹಾಯದಿಂದ ಅವರ ಭಾವಾವೇಶದ ಜೀವನವನ್ನು ಸ್ವಲ್ಪ ಪ್ರಿಮಿತ ಗೊಳಿಸಬಹುದಿತ್ತು. ಭಾರತದಿಂದ ಚೀನಾ ಅನೇಕ ವಿಷಯಗಳನ್ನು ಎರವಲು ಪಡೆದರೂ ಅದನ್ನೆಲ್ಲ ತನ್ನದೇ ಆದ ವಿಶಿಷ್ಟ ಮಾರ್ಗದಲ್ಲಿ ತನ್ನ ಜೀವನದ ಹಾಸು ಹೊಕ್ಕಿಗೆ ಅನುಗುಣವಾಗಿ ಉಪಯೋಗಿಸಿ ಕೊಳುವಷ್ಟು ದಾರ್ಡ್ಯವಿತ್ತು. ಬೌದ್ಧ ಮತದ ಮತ್ತು ಅದರ ಜಟಿಲವಾದ ತತ್ತ್ವಶಾಸ್ತ್ರವು ಸಹ ಕನ್ ಪೂಷೆ ಮತ್ತು ಲೋ-ಷೆ ಪ್ರಭಾವಕ್ಕೆ ಒಳಗಾದವು. ಚೀನೀಯರ ಜೀವನಾಸಕ್ತಿಯನ್ನೂ ಮತ್ತು ಸೌಖ್ಯವನ್ನೂ ನಾಶಮಾಡಲು ಅಥವ ವ್ಯತ್ಯಾಸಗೊಳಿಸಲು ಬೌದ್ಧ ಧರ್ಮದ ನಿರಾಶಾವಾದಿತ್ವದಿಂದ ಸಾಧ್ಯವಾಗಲಿಲ್ಲ. ಚೀನ ದೇಶದಲ್ಲಿ ಒಂದು ಹಳೆಯ ಗಾದೆ ಇದೆ. “ ಸರಕಾರದ ಕೈಗೆ ಸಿಕ್ಕಿದರೆ ಛಡಿ ಏಟಿನಿಂದ ಸಾವು, ಬೌದ್ಧರ ಕೈಗೆ ಸಿಕ್ಕಿದರೆ ಉಪವಾಸದಿಂದ ಸಾವು” ಎಂದು.
ಉ-ಚೇನ್-ಎನ್ ಎಂಬಾತನು ೧೬ ನೆಯ ಶತಮಾನದಲ್ಲಿ ಬರೆದ ಕೋತಿ ' ಎಂಬ ಪ್ರಸಿದ್ದ ಕಾದಂಬರಿಯೊಂದರಲ್ಲಿ (ಆರ್ಥ‌್ರವೇಲೇ ಇದನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾನೆ) ಹುಯನ್ ತ್ವಾಂಗ್ ಇಂಡಿಯಕ್ಕೆ ಹೋಗುವಾಗ ದಾರಿಯಲ್ಲಿ ನಡೆದ ವಿಚಿತ್ರ ಪೌರಾಣಿಕ ಘಟನೆಗಳನ್ನೆಲ್ಲ ವರ್ಣಿಸಿದ್ದಾನೆ. ಆ ಗ್ರಂಥವು ಕೊನೆಯಲ್ಲಿ ಇಂಡಿಯ ದೇಶಕ್ಕೆ ಅರ್ಪಣೆಯಾಗಿದೆ. “ ಈ ಗ್ರಂಥವನ್ನು ಬುದ್ಧನ ಪವಿತ್ರ ನಾಡಿಗೆ ಅರ್ಪಿಸುತ್ತೇನೆ. ಆಶ್ರಯದಾತೃವಿನಂತ ಗುರುವಿನಂತೆ ಸಹಜ ಕರುಣೆ ಯನ್ನು ದಯಪಾಲಿಸಲಿ. ತಪ್ಪು ದಾರಿ ಹಿಡಿವವರ ಮತ್ತು ಪತಿತರ ಸಂಕಷ್ಟಗಳನ್ನು ಪರಿಹರಿಸಲಿ • . .” ಎಂದು ಇದೆ.
ಅನೇಕ ಶತಮಾನಗಳ ಕಾಲ ಪರಸ್ಪರ ಸಂಬಂಧ ಕಡಿದು ಹೋದ ಮೇಲೆ ಕೂರವಿಧಿಯ