ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೮೫

ತುಳುಕುತ್ತಿವೆ. ಸುಪ್ರಸಿದ್ದ ನೂ ಇಂಗ್ಲೆಂಡಿನ ಪ್ರತಿನಿಧಿ ಎನ್ನಬಹುದಾದವನೂ ಆದ ಇಂಗ್ಲಿಷ್ ಗ್ರಂಥಕರ್ತ ಆಸ್ಪರ್ಟ್ ಸಿಟೈಲ್ ಸಹ ತನ್ನ “ಎಸ್ಕೇಪ್ ವಿತ್ ಮಿ ' (Escape With Me) ಎಂಬ ಗ್ರಂಥದಲ್ಲಿ ಅನೇಕ ಮಹಾ ವೈಚಿತ್ರಗಳಿಂದ ತುಂಬಿದ್ದರೂ ಭಾರತವೆಂದರೆ ಒಂದು ತಾತ್ಕಾರ ಭಾವನೆ ಇತ್ತು. ಹಿಂದೂ ಕಲಾಕೃತಿಗಳಲ್ಲಿ ಏನೋ ಒಂದು ಅಸಹ್ಯಕರ ಜಿಗಟುಗುಣವಿದೆ ಎನ್ನುತ್ತಾನೆ.
ಭಾರತೀಯ ಕಲೆ ಮತ್ತು ಭಾರತದ ವಿಷಯದಲ್ಲಿ ಈ ಅಭಿಪ್ರಾಯ ಕೊಡಲು ಸಿಟೈಲ್ಗೆ ಪೂರ್ಣ ಅಧಿಕಾರವಿದೆ. ಅದು ನ್ಯಾಯವೂ ಇದೆ. ಪ್ರಾಯಶಃ ಅದೇ ಆತನ ಭಾವನೆಯಿರಬಹುದು. ಭಾರತದಲ್ಲಿ ಎಷ್ಟೋ ವಿಷಯಗಳನ್ನು ಕಂಡು ನನಗೂ ಅದೇ ಭಾವನೆ ಬರುತ್ತದೆ. ಆದರೆ ಇಡೀ ಭಾರತವನ್ನು ತೆಗೆದುಕೊಂಡರೆ ಆ ಭಾವನೆ ಬರುವುದಿಲ್ಲ. ಸ್ವಾಭಾವಿಕವಾಗಿ ನಾನು ಭಾರತೀಯ. ಎಷ್ಟೇ ಅಯೋಗ್ಯ ನಿದ್ದರೂ ನನ್ನನ್ನು ನಾನೇ ದ್ವೇಷಿಸುವುದು ಸುಲಭವಲ್ಲ. ಆದರೆ ಇದು ಕೇವಲ ಕಲೆಯ ಮೇಲಿನ ಅಭಿಪ್ರಾಯ ಅಥವ ಕಲಾವಿಮರ್ಶೆಯಲ್ಲ. ಒಂದು ಜನಾಂಗವನ್ನೇ ವ್ಯಕ್ತವಾಗಿಯೋ, ಅವ್ಯಕ್ತವಾ ಗಿಯೋ ವೈರಿ ಎಂದು ದ್ವೇಷಿಸುವ ವಿರುದ್ದ ಮೈತ್ರಿ ಮನೋಭಾವ, ನಾವು ಯಾರಿಗೆ ಕೆಡುಕು ಮಾಡಿ ದೇವೆಯೋ ಅವರನ್ನು ಪ್ರೀತಿಸುವುದಿಲ್ಲ, ದ್ವೇಷಿಸುತ್ತೇವೆ, ಎಂಬುದು ನಿಜವೆ ?
ಭಾರತೀಯ ಕಲೆಯನ್ನು ಶ್ಲಾಘಿಸಿ ಹೊಸ ದೃಷ್ಟಿಯಿಂದ ನ್ಯಾಯವಿಮರ್ಶೆ ಮಾಡಿದವರಲ್ಲಿ ಲಾರೆನ್ಸ್ ಬಿನಿಯನ್ ಮತ್ತು ಇ. ಬಿ. ಹವೆಲ್ ಮುಖ್ಯರು. ಭಾರತೀಯ ಕಲೆಯ ಆದರ್ಶ ಮತ್ತು ಅದರ ಮೂಲಧೈಯದ ವಿಷಯದಲ್ಲಿ ಹೆವೆಲ್ ವಿಶೇಷ ಆಸಕ್ತಿಯನ್ನು ವ್ಯಕ್ತ ಪಡಿಸಿದ್ದಾನೆ. ಒಂದು ಮಹಾ ರಾಷ್ಟ್ರದ ಕಲೆಯು ಆ ರಾಷ್ಟ್ರದ ಭಾವನೆ ಮತ್ತು ಗುಣವನ್ನು ಚಿತ್ರಿಸುತ್ತದೆ; ಆದರೆ ಅದನ್ನು ಅರ್ಥಮಾಡಿಕೊಳ್ಳುವ ಮೊದಲು, ಆ ಕಲೆಯ ಹಿಂದಿನ ಆದರ್ಶಗಳ ಪರಿಚಯ ಅವಶ್ಯಕ ಎಂದು ಸಾರುತ್ತಾನೆ. ಅಧಿಕಾರ ದರ್ಪದಿಂದ ದಾಸ್ಯದಲ್ಲಿಟ್ಟಿರುವ ಪರರಾಷ್ಟ್ರವು ಈ ಆದರ್ಶಗಳಿಗೆ ಯಾವ ಬೆಲೆಯನ್ನೂ ಕೊಡದೆ ಸದಾ ತೆಗಳಿ ಒಂದು ಮಾನಸಿಕ ದ್ವೇಷಭಾವನೆಯನ್ನು ಬೆಳೆಸುತ್ತದೆ. ಭಾರತೀಯ ಕಲೆಯು ಹುಟ್ಟಿದ್ದು ಅಲ್ಪ ಸಂಖ್ಯಾತ ಪಂಡಿತ ಮಂಡಲಕ್ಕಲ್ಲ. ಧರ್ಮ ಮತ್ತು ದರ್ಶನದ ಮೂಲ ತತ್ವಗಳನ್ನು ಸಾಮಾನ್ಯ ಜನರಿಗೆ ಬೋಧಿಸುವುದೇ ಅದರ ಘನ ಉದ್ದೇಶ.” “ ಹಿಂದೂ ಕಲೆಯು ಈ ಮಹಾ ಶಿಕ್ಷಣಧೈಯದಲ್ಲಿ ಕೃತ ಕೃತ್ಯವಾಗಿತ್ತು ಎನ್ನುವುದು ಭಾರತೀಯ ಜೀವನದ ನಿಕಟ ಪರಿಚಯ ಪಡೆದವರಿಗೆಲ್ಲ ತಿಳಿದಿರಬಹುದು. ಭಾರತದ ರೈತನು ಪಾಶ್ಚಿಮಾತ್ಯದ ದೃಷ್ಟಿಯಿಂದ ಅನಕ್ಷರಸ್ಥ ನಾ ದರೂ, ಪ್ರಪಂಚದ ಯಾವ ಭಾಗದ ರೈತರಲ್ಲ ಇಲ್ಲದ ಶ್ರೇಷ್ಠ ಸಂಸ್ಕೃತಿಯೊಂದು ಅವನಲ್ಲಿದೆ ಎಂದಿದ್ದಾನೆ.
ಸಂಸ್ಕೃತ ಕಾವ್ಯ ಮತ್ತು ಭಾರತೀಯ ಸಂಗೀತದಂತೆ ಭಾರತೀಯ ಕಲೆಯಲ್ಲಿ ಸಹ ಕಲಾವಿ ದನು ಪ್ರಕೃತಿಯ ಎಲ್ಲ ಸ್ಥಿತಿಯಲ್ಲೂ ತಾದಾತ್ಮ ಹೊಂದಿ ಮನುಷ್ಯನಿಗೂ ಪ್ರಕೃತಿ ಮತ್ತು ಪ್ರಪಂಚಕ್ಕೂ ಇರುವ ಮೂಲ ಸಾಮರಸ್ಯವನ್ನು ವ್ಯಕ್ತಪಡಿಸಬೇಕೆಂಬ ಧೈಯ ಅವನಿಗೆ ಇತ್ತು. ಇಲ್ಲಿ ಏಷ್ಯದ ಕಲೆಯ ಜೀವಾಳವೂ ಇದೇ. ವಿಶೇಷ ವೈವಿಧ್ಯ ಮತ್ತು ರಾಷ್ಟ್ರೀಯ ಭಿನ್ನತೆಗಳು ಸ್ಪಷ್ಟವಿದ್ದರೂ ಏಷ್ಯದ ಕಲೆಯಲ್ಲಿ ಮಾತ್ರ ಒಂದು ಏಕೀಭಾವವಿದೆ. ಅಜಂತ ಗುಹಾಂತರ ದೇವಾಲಯಗಳನ್ನು ಬಿಟ್ಟರೆ ಇ೦ಡಿಯದಲ್ಲಿ ಪುರಾತನ ಚಿತ್ರಕಲೆಯು ಹೆಚ್ಚು ಇಲ್ಲ. ಪ್ರಾಯಶಃ ಅದರ ಬಹುಭಾಗವು ನಾಶವಾಗಿದೆ. ಚೀನಾ ಮತ್ತು ಜಪಾನ್ ಚಿತ್ರಕಲೆಯಲ್ಲಿ ಪ್ರಾವೀಣ್ಯತೆ ಪಡೆದಂತ ಭಾರತವು ಶಿಲ್ಪ ಕಲೆ ಮತ್ತು ವಾಸ್ತು ಶಿಲ್ಪದಲ್ಲಿ ಮಹೋನ್ನತಿ ಪಡೆಯಿತು.
ಯುರೋಪಿನ ಸಂಗೀತಕ್ಕಿಂತ ತೀರ ಭಿನ್ನ ವಿರುವ ಭಾರತೀಯ ಸಂಗೀತವು ತನ್ನ ದಾರಿಯಲ್ಲಿ ಬಹಳ ಪ್ರಗತಿ ಪಡೆಯಿತು. ಸಂಗೀತದಲ್ಲಿ ಭಾರತವು ಮುಂದಾಳುತನವಹಿಸಿ ಚೀನ ಮತ್ತು ದೂರ ಪೂರ್ವ ದೇಶಗಳ ಹೊರತು ಇತರ ಏಷ್ಯದ ಎಲ್ಲ ರಾಷ್ಟ್ರಗಳ ಮೇಲೂ ತನ್ನ ಪ್ರತಿಭೆಯನ್ನು ಬೀರಿತು. ಪರ್ಷಿಯ, ಆಫ್ಘಾನಿಸ್ಥಾನ, ಅರೇಬಿಯ, ತುರ್ಕಿಸ್ಥಾನ ಮತ್ತು ಅರಬ್ಬಿ ನಾಗರಿಕತೆಗಳು ಹಬ್ಬಿದ ಇತರ ರಾಷ್ಟ್ರಗಳಲ್ಲಿ ಸಹ-ಉದಾಹರಣೆಗಾಗಿ ಉತ್ತರ ಆಫ್ರಿಕ-ಸಂಗೀತವು ಒಂದು