ಸ್ನೇಹಸಾಧನವಾಯಿತು. ಪ್ರಾಯಶಃ ಈ ಎಲ್ಲ ರಾಷ್ಟ್ರಗಳಲ್ಲಿ ಭಾರತದ ಶಾಸ್ತ್ರೀಯ ಸಂಗೀತಕ್ಕೆ ಮನ್ನಣೆ ಇದೆ.
ಭಾರತದಲ್ಲಿ ಕಲೆಯ ಬೆಳೆವಣಿಗೆಗೆ ಮುಖ್ಯ ಪರಿಣಾಮಕಾರಿಯಾಗಿದ್ದು ದು ಕಡೆದ ವಿಗ್ರಹಗಳ ಮೇಲಿನ ಧಾರ್ಮಿಕ ವಿರೋಧ, ವೇದಗಳು ವಿಗ್ರಹ ಸೂಚನೆಯನ್ನು ನಿಷೇಧಿಸಿದ್ದವು. ಬೌದ್ಧ ಧರ್ಮ ಪ್ರಚಾರವಾದ ಬಹು ಕಾಲದ ನಂತರ ವಿಗ್ರಹಶಿಲೆಯಲ್ಲಿ ವರ್ಣಚಿತ್ರದಲ್ಲಿ ಬುದ್ಧನು ಬಂದದ್ದು. ಮಧುರೆಯ ಪ್ರದರ್ಶನ ಶಾಲೆಯಲ್ಲಿ ಆಜಾನುಬಾಹುವೂ, ತೇಜಸ್ವಿಯೂ ಆದ ಬೋಧಿವನ ದೊಡ್ಡ ಶಿಲಾವಿಗ್ರಹ ಒಂದಿದೆ, ಇದು ಕ್ರಿಸ್ತಾ ಬಿ ಯ ಆರಂಭದ ಕುಶಾನರ ಕಾಲದ್ದು. - ಭಾರತೀಯ ಕಲೆಯ ಆರ೦ಭ ದೆಸೆಯಲ್ಲಿ ಪ್ರಾಯಶಃ ಚೀನೀಯರ ಪ್ರಭಾವದಿಂದ ಪೂರ್ಣ ನೈಸರ್ಗಿಕತೆ ಇದೆ. ಭಾರತೀಯ ಆದರ್ಶ
ಭಾರತೀಯ ಚೀನಾ ಜಪಾನ್‌ಗಳಿಗೆ ಹೋಗಿ ಆ ದೇಶಗಳ ಮಹಾಯುಗಗಳಲ್ಲಿ ಅದ್ಭುತ ಪ್ರಭಾವವನ್ನು ಬೀರಿದ೦ತ, ಭಾರತೀಯ ಕಲೆಯ ಇತಿಹಾಸದ ಬೇರೆ ಬೇರೆ ಕಾಲಗಳಲ್ಲಿ ಸಹ ಚೀನಾ ಕಲೆಯ ಪ್ರಭಾವವನ್ನು ಮುಖ್ಯವಾಗಿ ಈ ನೈಸರ್ಗಿಕ ಭಾವನೆಯಲ್ಲಿ ಕಾಣಬಹುದು.
ಭಾರತದ ಸ್ವರ್ಣಯುಗವೆಂದು ಖ್ಯಾತಿ ಹೊಂದಿದ ಕ್ರಿಸ್ತಶಕ ನಾಲ್ಕನೆಯ ಶತಮಾನದಿಂದ ಆರ ನೆಯ ಶತಮಾನದವರೆಗೆ ಗುಪ್ತರ ಕಾಲದಲ್ಲಿ ಅಜಂತ ಗುಹೆಗಳ ನಿರ್ಮಾಣವಾಗಿ ವರ್ಣಚಿತ್ರಗಳು ಬರೆಯಲ್ಪಟ್ಟವು. ಬಾಗ್ ಮತ್ತು ಬದಾಮಿ ದೇವಾಲಯಗಳು ಅದೇ ಕಾಲದವುಗಳು, ಅಜಂತ ಚಿತ್ರಗಳು ಸುಂದರವಿರುವುವಲ್ಲದೆ ಅವುಗಳ ಸಂಶೋಧನೆಯಿಂದೀಚೆಗೆ ಆಧುನಿಕ ಕಲಾವಿದರ ಮೇಲೆ ವಿಶೇಷ ಪರಿಣಾಮವನ್ನುಂಟುಮಾಡಿದೆ. ಅವರು ಅಜಂತಕಲೆಯನ್ನೇ ಅನುಸರಿಸಿ ಹೋಗಿ ಇಂದಿನ ಜೀವನದಿಂದ ದೂರವಾಗಿ ದುಷ್ಪರಿಣಾಮ ಮಾಡಿದಾರೆ.
ಅಜಂತ ನಮ್ಮನ್ನು ಯಾವುದೋ ಒಂದು ಕನಸಿನ ರಾಜ್ಯಕ್ಕೆ ಕರೆದೊಯ್ಯುತ್ತದೆ. ಆದರೂ ಅದು ಸತ್ಯ ಪ್ರಪಂಚ. ಅದನ್ನು ಚಿತ್ರಿಸಿದವರು ಬುದ್ಧ ಸಂನ್ಯಾಸಿಗಳು, ಸ್ತ್ರೀಯರಿಂದ ದೂರ ಇರು, ಕಣ್ಣೆತ್ತಿ ನೋಡಬೇಡ, ಅದರಿಂದ ಅಪಾಯವಿದೆ ಎಂದು ಅನೇಕ ವರ್ಷಗಳ ಹಿಂದೆ ಅವರ ಗುರುವು ಉಪದೇಶ ಮಾಡಿದ್ದನು. ಆದರೂ ಅಲ್ಲಿ ಅನೇಕ ಸ್ತ್ರೀಯರಿದ್ದಾರೆ-ಸುಂದರಿಯರು, ರಾಜಕುವರಿ ಯರು, ಗಾಯಕಿಯರು, ನರ್ತಕಿಯರು, ಕುಳಿತವರು, ನಿಂತವರು, ಅಲಂಕರಿಸಿಕೊಳ್ಳುತ್ತಿರುವವರು, ಮೆರವಣಿಗೆ ಹೋಗುತ್ತಿರುವವರು; ಈ ಚಿತ್ರ ಚತುರ ಸಂನ್ಯಾಸಿಗಳು ಪ್ರಪಂಚವನ್ನು, ಜೀವನ ನಾಟಕದ ಚಲನಚಿತ್ರವನ್ನು, ಶಾಂತಮೂರ್ತಿ, ಪರಲೋಕದ ಅಧಿದೇವತೆ ಬೋಧಿಸ್ಕವನನ್ನು ಚಿತ್ರಿಸಿದಂತೆ ಎಷ್ಟು ಸುಂದರವಾಗಿ ಚಿತ್ರಿಸಿದ್ದಾರೆ!
ಏಳು ಮತ್ತು ಎಂಟನೆಯ ಶತಮಾನಗಳಲ್ಲಿ ಮಧ್ಯೆ ಕೈಲಾಸ ದೇವಾಲಯ ಉಳ್ಳ ಎಲ್ಲೋರ ಗುಹೆಯ ಮಹಾದೇವಾಲಯಗಳನ್ನು ಒಂದೇ ಬಂಡೆಯಿಂದ ಕಡೆದರು. ಆ ಮಹಾ ವ್ಯಕ್ತಿಗಳು ಇದನ್ನು ಹೇಗೆ ಊಹಿಸಿದರು, ಊಹಿಸಿ ಹೇಗೆ ಅದಕ್ಕೊಂದು ರೂಪಕೊಟ್ಟರು ಎಂದು ಕಲ್ಪನೆ ಮಾಡು ವುದು ಸಹ ಕಷ್ಟ. ಅಮೋಘವೂ ಗಹನವೂ ಇರುವ ತ್ರಿಮೂರ್ತಿಯ
ಎಲಿಫೆಂಟಾ ಗುಹೆಗಳು ಸಹ ಅದೇ ಕಾಲದವು. ದಕ್ಷಿಣ ಭಾರತದ ಮಾಮಲ್ಲಪುರದ ಸ್ಮಾರಕಗಳ ಕಾಲವೂ ಅದೇ.
ಎಲಿಫೆಂಟ ಗುಹೆಗಳಲ್ಲಿ ತಾಂಡವ ನೃತ್ಯದ ಶಿವನ ವಿಗ್ರಹ ಒಂದಿದೆ. ಭಿನ್ನವಾಗಿದ್ದರೂ ಅದೊಂದು ಅದ್ಭುತ ಕಲ್ಪನೆ. ವಿರಾಟ್ ಶಕ್ತಿಯ ಮೂರ್ತಿಸ್ವರೂಪ ಎಂದು ಹೆವೆಲ್ ಹೇಳುತ್ತಾನೆ. “ ಆ ಮಹಾ ನೃತ್ಯದ ಲಯಬದ್ದ ತಾನದೊಂದಿಗೆ ಆ ಬಂಡೆಯೇ ಕ೦ಪಿಸುವಂತೆ ಕಂಡರೂ ಮುಖದಲ್ಲಿ ಮಾತ್ರ ನಿಶ್ಚಲ ಶಾಂತಿ ಮತ್ತು ಸ್ಥಿತಪ್ರಜ್ಞ ದೃಷ್ಟಿ” ಎಂದಿದಾನೆ.
ಬ್ರಿಟಿಷ್ ಪ್ರದರ್ಶನಾಲಯದಲ್ಲಿ ಇನ್ನೊಂದು ನಟರಾಜ ಶಿವನ ವಿಗ್ರಹವಿದೆ. ಅದನ್ನು ನೋಡಿ * ಪ್ರಪಂಚಗಳನ್ನು ಸೃಜಿಸುತ್ತ, ಲಯಮಾಡುತ್ತ ಶಿವನು ನಾಟ್ಯವಾಡುತ್ತಾನೆ. ಆತನ ಮಹಾಲಯ ದಿಂದ ಯುಗಯುಗಗಳೇಳುತ್ತವೆ. ಆತನ ಗತಿಯಲ್ಲೊಂದು ಕಠೋರವಾದ ಮಂತ್ರಮೋಹಕ ಶಕ್ತಿ ಇದೆ. ಪ್ರೇಮದಲ್ಲಿ ಸಾವನ್ನು ನೋಡುವ ಧೈಯಕ್ಕೆ ಬ್ರಿಟಿಷ್ ಪ್ರದರ್ಶನಾಲಯದ ಈ ಅಲ್ಪ ಸಂಗ್ರ
ಪುಟ:ಭಾರತ ದರ್ಶನ.djvu/೧೯೧
ಈ ಪುಟವನ್ನು ಪ್ರಕಟಿಸಲಾಗಿದೆ
೧೮೬
ಭಾರತ ವರ್ತನ